ಕೋಲಾರ

ಮದ್ಯದ ಅಂಗಡಿ ಮುಂದೆ ಲಾಂಗ್ ಜಲಪಿಸಿದ ಯುವಕ..!

Published

on

ಕೋಲಾರ: ಹೇಳಿ ಕೇಳಿ ಕೆಜಿಎಫ್ ರೌಡಿಸಂ ಗೆ ಖ್ಯಾತಿಯಾಗಿದೆ. ಹಲವು ದಶಕಗಳಿಂದ ಕೆಜಿಎಫ್ ಕುಖ್ಯಾತ ರೌಡಿಗಳ ತಾಣವಾಗಿತ್ತು. ತಂಗಂ ನಂತಹ ಅದೇಷ್ಟೊ ರೌಡಿಗಳು ಇಲ್ಲಿ ಮೆರೆದು ಮಣ್ಣು ಸೇರಿದ್ದಾರೆ. ಆದ್ರೆ ಕೆಲ ವರ್ಷಗಳಿಂದ ರೌಡಿಸಂ ಕಣ್ಮರೆಯಾಗಿತ್ತು,,,ಈಗ ಮತ್ತೆ ಹಳೆ ನೆನಪುಗಳು ನೆನೆಸುವ ಘಟನೆಗಳು ಮತ್ತೆ ಆರಂಭವಾಗಿದೆ….ಮೊನ್ನೆ ತಾನೆ ಇಬ್ಬರು ರೌಡಿಗಳಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಮಾಸುವ ಮುನ್ನವೇ ಕೆಜಿಎಫ್ ನಲ್ಲಿ ಹಾಡ ಹಗಲೇ ಲಾಂಗ್ ಹಿಡಿದು ಬೀಸುವ ದೃಶ್ಯ ಕೆಜಿಎಫ್ ನ ಜನತೆಗೆ ಆತಂಕ ಮನೆಮಾಡಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಸಲ್ಡನ ಸಮೀಪದ ಮದ್ಯದ ಅಂಗಡಿ ಮುಂದೆ ಯುವಕನೊಬ್ಬ ಲಾಂಗ್ ಹಿಡಿದು ದಾಂಧಲೆ ಮಾಡುತ್ತಾ ,ಸಾರ್ವಜನಿಕರ ವಾಹನಗಳನ್ನು ಅಡ್ಡಗಟ್ಟಿ ಅಟ್ಟಹಾಸ ಮೆರೆದು ಆವಾಜ್ ಹಾಕುತಿರುವುದು ದೃಶ್ಯಗಳು ಜನರಲ್ಲಿ ಆತಂಕವನ್ನುoಟು ಮಾಡಿದೆ. ಇಷ್ಟೇಲ್ಲ ಕಾನೂನು ಬಾಹಿರವಾಗಿ ಯುವಕರು ಮಾರಕ ಅಸ್ತ್ರಗಳನ್ನು ಹಿಡಿದು ಬಹಿರಂಗವಾಗಿ ಪ್ರದರ್ಶನ ಮಾಡುತ್ತಿದ್ದರು ಕಾನೂನು ಕಾಪಾಡುವ ಆರಕ್ಷಕರು ಕಣ್ಣು ಮುಚ್ಚಿ ಕುಳಿತ್ತಿದ್ದಾರಾ ಎಂಬುವುದು ಸಾರ್ವಜನಿಕರ ಪ್ರಶ್ನೇ..

ವರದಿ-ವಿ.ರಾಮಕೃಷ್ಣ ಎಕ್ಸ್ ಪ್ರೆಸ್ ಟಿವಿ ಕೋಲಾರ…

Click to comment

Trending

Exit mobile version