Uncategorized

ಸಂಬಂಧದಲ್ಲಿ ಸಾಮರಸ್ಯಕ್ಕೆ ಮೊದಲ ಆಧ್ಯತೆಯಿರಲಿ: ಸಿಪಿಐ ರಾಜೇಂದ್ರ..!

Published

on

ನಾಗಮಂಗಲ: ಹುಟ್ಟಿದ ಮಕ್ಕಳಿಗೆ ಪಾಲು ಎಂಬ ಹಿರಿಯರ ನಾಣ್ಣುಡಿಗೆ ತಕ್ಕಂತೆ ನಡೆದುಕೊಳ್ಳುವ ಮೂಲಕ ಮಾನವೀಯ ಸಂಬಂಧದ ಸಾಮರಸ್ಯಕ್ಕೆ ಮೊದಲ ಆಧ್ಯತೆ ಇರಲಿ ಎಂದು ಮಂಡ್ಯ ಜಿಲ್ಲೆ, ನಾಗಮಂಗಲ ತಾಲೂಕಿನ ವೃತ್ತ ಆರಕ್ಷಕ ನಿರೀಕ್ಷಕ ರಾಜೇಂದ್ರ ದೂರುದಾರರಿಗೆ ಕಿವಿಮಾತು ಹೇಳಿದರು. ತಾಲೂಕಿನ ದೇವಲಾಪುರ ಹೋಬಳಿ ಮಳ್ಳೇಕೊಪ್ಪಲು ಗ್ರಾಮದ ಸರ್ವೆ ನಂ. 23 ರ ಪಿತ್ರಾರ್ಜಿತ ಜಮೀನಿಗೆ ಸಂಬಂಧಿಸಿದಂತೆ ಅಣ್ಣ-ತಮ್ಮಂದಿರಿಬ್ಬರ ಕುಟುಂಬಗಳ ನಡುವಿನ ಗಲಾಟೆಯಲ್ಲಿ ದೂರು-ಪ್ರತಿದೂರುಗಳನ್ನು ಆಲಿಸಿ ಮಾತನಾಡಿದ ಅವರು, ಕೋವಿಡ್-19 ಹಿನ್ನಲೆಯ ಲಾಕ್ಡೌತನ್ ಆದಾಗಿನಿಂದ ನಗರವಾಸಿಗಳು ತಮ್ಮ ಸ್ವಗ್ರಾಮದ ಚಿರಾಸ್ತಿಗಳತ್ತ ಗಮನಹರಿಸುವ ಮೂಲಕ ಕಳೆದ ಮಾರ್ಚ್ನಿಂನದ ಭೂ ವ್ಯಾಜ್ಯಕ್ಕೆ ಸಂಬಧಿಸಿದಂತೆ ತಾಲ್ಲೂಕಿನಾದ್ಯಂತ 500 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಇಂತಹ ಆರೋಪ-ಪ್ರತ್ಯಾರೋಗಳಿಂದ ದ್ವೇಷದ ದಳ್ಳೂರಿ ಹೆಚ್ಚಾಗಲಿದೆ. ದ್ವೇಷ-ಅಸೂಯೆಗಳಿಂದ ಸಾಧಿಸುವುದೇನು ಇಲ್ಲ. ಕೊರೊನಾದಂತಹ ಮಹಾಮಾರಿಗೆ ತುತ್ತಾದವರ ಅಂತ್ಯಕ್ರಿಯೆಗಳ ಪ್ರಕ್ರಿಯೆ ಮನುಕುಲದ ಘನದುರಂತಕ್ಕೆ ಸಾಕ್ಷಿ. ಈ ಹಿಂದೆ ಕಣ್ತಪ್ಪಿನಿಂದ ಅಥವ ಕೈತಪ್ಪಿನಿಂದ ಪಹಣಿಗಳಲ್ಲಾಗಿರುವ ಸಮಸ್ಯೆಗಳನ್ನೆ ದೊಡ್ಡದಾಗಿ ಬಿಂಬಿಸುವುದು ಬೇಡ. ಆಗೆಂದ ಮಾತ್ರಕ್ಕೆ ನಿಯಮಬಾಹಿರವಾಗಿ ನಡೆದುಕೊಳ್ಳಿ ಎಂದು ಅರ್ಥವಲ್ಲ. ಆದರೆ ವಿಭಾಗ ಮಾಡಿಕೊಳ್ಳುವಾಗ ತಪ್ಪು ಅಥವ ಸರಿಯಾಗಿದ್ದರೂ, ಆತ್ಮಸಾಕ್ಷಿ ಎಂಬ ಸ್ವಯಂ ನ್ಯಾಯಾದೇಶವನ್ನು ಪಾಲಿಸುವ ಮಾನವೀಯತೆ ಪ್ರತಿಯೊಂದು ಕುಟುಂಬದಲ್ಲೂ ಅನಾವರಣವಾಗಬೇಕು. ಕಂದಾಯ ಇಲಾಖೆಯ ಸರಿ-ತಪ್ಪುಗಳು ನಮ್ಮ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ. ಆದುದರಿಂದ ಸರಿಪಡಿಸಿಕೊಳ್ಳಲು ನೀಡಲಾಗುತ್ತಿರುವ ನಿಗಧಿತ ಕಾಲಮಿತಿಯೊಳಗೆ ಇತ್ಯರ್ಥಪಡಿಸಿಕೊಳ್ಳಿ. ಇಲ್ಲವಾದಲ್ಲಿ ಪ್ರಸ್ತುತ ಇರುವ ದಾಖಲಾತಿಗೆ ಅನುಗುಣವಾಗಿ ನಡೆದುಕೊಳ್ಳಿ. ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರ ನಮ್ಮ ಸಂವಿಧಾನದಲಿಲ್ಲ. ಅಂತಹ ಅವಘಡಗಳು ಕಂಡು ಬಂದರೆ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದರು. ವೃತ್ತ ಆರಕ್ಷಕ ನಿರೀಕ್ಷಕರ ಮಾನವೀಯ ಮಾತುಗಳ ಸಂಧಾನಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಯಿತು.

ವರದಿ-ಎಸ್.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.

Click to comment

Trending

Exit mobile version