ಕೋಲಾರ

ಶಿವಸೇನೆ ಸಂಘಟನೆಗಳಿಂದ ಕನ್ನಡಿಗರ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ..!

Published

on

ಕೋಲಾರ: ರಾಜ್ಯದಲ್ಲಿ ಎಂ.ಇ.ಎಸ್ ಮತ್ತು ಶಿವಸೇನೆ ಸಂಘಟನೆಗಳು ಕನ್ನಡಿಗರ ಮೇಲೆ ದಾಳಿ ನಡೆಸಿರುವುದನ್ನು ಖಂಡಿಸಿ ಹಾಗೂ ಬೆಳಗಾವಿ ಸುವರ್ಣ ಸೌಧದ ಮುಂದೆ 51 ಅಡಿಗಳ ಸಂಗೊಳ್ಳಿ ರಾಯಣ್ಣ ಪುತ್ತಳಿ ನಿರ್ಮಾಣ ಮಾಡಬೇಕೆಂದು ರಾಜ್ಯದಲ್ಲಿ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೇಟ್ಟಿ ಸಾರಥ್ಯದ ಕೋಲಾರ ಜಿಲ್ಲಾ ಘಟಕ ವತಿಯಿಂದ ಪ್ರತಿಭಟನೆ ನಡೆಸಿದರು. ನಗರ ತಾಲ್ಲೂಕು ಕಛೇರಿ ಮಂಬಾಗ ಪ್ರತಿಭಟನೆ ನಡೆಸಿ ತಾಲ್ಲೂಕು ದಂಡಾಧಿಕಾರಿ ಶೋಭಿತಾ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಚಂಬೆ ರಾಜೇಶ್ ಕರ್ನಾಟಕದಲ್ಲಿ ಕನ್ನಡಿಗರುವ ಮತ್ತು ಮರಾಠಿಗರು ಅಣ್ಣ ತಮ್ಮಂದಿರಂತೆ ಇದ್ದೇವೆ ಆದ್ರೆ ಮಹಾರಾಷ್ಟ್ರದ ಕೆಲ ಪುಂಡರು ಬೆಳಗಾವಿ ವಿಚಾರವಾಗಿ ವಿನಾಕಾರಣ ನಮ್ಮ ಮತ್ತು ಅವರ ಮಧ್ಯೆ ಕನ್ನಡಿಗರನ್ನು ಕೆಣಕುತ್ತಿರುವುದು ಸರಿಯಲ್ಲ ರಾಜ್ಯದಲ್ಲಿ ಎಂ.ಇ.ಎಸ್ ಹಾಗೂ ಶಿವಸೇನೆ ಸಂಘಟನೆಗಳನ್ನು ನಿಷೇದಿಸಬೇಕೆಂದು ಜೊತೆಗೆ ಬೆಳಗಾವಿಯ ಸುವರ್ಣ ಸೌಧದ ಮುಂದೆ 51 ಅಡಿಗಳ ಸಂಗೊಳ್ಳಿ ರಾಯಣ್ಣ ಪುತ್ತಳಿಯನ್ನು ನಿರ್ಮಾಣ ಮಾಡಬೇಕು ಹಾಗೂ ನಾಡಿನ ಕೋಟ್ಯಾಂತರ ಜನರ ಮನದಲ್ಲಿರುವ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಸಾಹಸ, ಆದರ್ಶಗಳನ್ನು ಪ್ರತಿ ಮನೆಗಳಲ್ಲಿ ಸ್ವೀಕರಿಸುವ ಸಮಸ್ತ ಕನ್ನಡಿಗರ ಭಾವನೆಗಳಿಗೆ ವಿರುದ್ದವಾಗಿರುವ ಇಂತಹ ಘಟನೆ ಮರು ಕಳುಹಿಸದಂತೆ ಸೂಕ್ತ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಮರೇಗೌಡ, ತಾಲ್ಲೂಕು ಅಧ್ಯಕ್ಷ ಡಿ.ಎಂ ನಾಗರಾಜಗೌಡ, ಮಹಿಳಾ ಜಿಲ್ಲಾಧ್ಯಕ್ಷೆ ಸರಸ್ವತಮ್ಮ, ಅವಿನಾಶ್ ನಾರಾಯಣ್, ದಂಡಿಗಾನಹಳ್ಳಿ ಅಂಬರೀಶ್, ಅರಿನಾಗನಹಳ್ಳಿ ಹರೀಶ್, ಹೋಹಳ್ಳಿ ಶ್ರೀನಿವಾಸ್, ಶ್ರೀನಿವಾಸಗೌಡ, ಸಂಪತ್ತ್ ಕುಮಾರ್ ನರೇಶ್ ಮತ್ತಿತರರು ಹಾಜರಿದ್ದರು.

ವರದಿ-ಬೆಟ್ಟಪ್ಪ ಎಕ್ಸ್ ಪ್ರೆಸ್ ಟಿವಿ ಕೋಲಾರ..

Click to comment

Trending

Exit mobile version