ಸಿಂಧನೂರು

ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಅತಿಥಿ ಶಿಕ್ಷಕರಿಂದ ಪ್ರತಿಭಟನೆ….

Published

on

ಸಿಂಧನೂರು: ನಗರದ ತಹಶಿಲ್ದಾರ ಕಚೇರಿ ಮುಂದೆ ಅತಿಥಿ ಶಿಕ್ಷಕರ ಸಂಘದ ತಾಲ್ಲೂಕು ಸಮಿತಿ ಯಿಂದ ಅತಿಥಿ ಶಿಕ್ಷಕರಿಗೆ ಕೋವಿಡ್-19 ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು,ಅತಿಥಿ ಶಿಕ್ಷಕರನ್ನು ಖಾಯಂ ಮಾಡಿಕೊಳ್ಳಬೇಕು, ಅತಿಥಿ ಶಿಕ್ಷಕರಿಗೆ ಸೇವೆ ಭದ್ರತೆ ನೀಡಬೇಕು, ಅತಿಥಿ ಶಿಕ್ಷಕರ ವೇತನವನ್ನು ಹೆಚ್ಚಳ ಮಾಡಬೇಕು, ಜೊತೆಗೆ ಪಿ.ಎಫ್. ಹಾಗೂ ಇ.ಎಸ್. ಐ ಸೌಲಭ್ಯಗಳನ್ನು ನೀಡಬೇಕು ಎನ್ನುವುದು ಸೇರಿದಂತೆ ಇನ್ನೂ ಹತ್ತು ಹಲವು ಬೇಡಿಕೆ ಈಡೇರಿಸಲು ಒತ್ತಾಯಿಸಿ ಪ್ರತಿಭಟಿಸಿದರು. ಈ ಪ್ರತಿಭಟನಾಕಾರರನ್ನು ಉದ್ದೇಶಿಸಿ ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಲಿಂಗಪ್ಪ ಪೂಜಾರಿ ಹಾಗೂ ಕಾರ್ಯದರ್ಶಿ ವೆಂಕಟೇಶ್ ಮಾತನಾಡಿ ಕೂಡಲೇ ನಮ್ಮ ಬೇಡಿಕೆ ಈಡೇರಿಸಬೇಕು ಇಲ್ಲವೇ ರಾಜ್ಯದಾದ್ಯಂತ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ತಹಶಿಲ್ದಾರ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಿದರು. ಈ ಸಂಧರ್ಭದಲ್ಲಿ ವೀರೇಶ ವಿಶ್ವಕರ್ಮ,ಶರಣಬಸವ, ಹುಸೇನಪ್ಪ, ರಮೇಶ್, ಅಬ್ದುಲ್, ಮುತ್ತಣ್ಣ, ದೇವೇಗೌಡ ಸೇರಿದಂತೆ ಅನೇಕರು ಭಾಗವಹಿಸಿದರು.

ವರದಿ-ಸೈಯದ್ ಬಂದೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Click to comment

Trending

Exit mobile version