ಮಂಡ್ಯ

ರೈತರ ಜಮೀನುಗಳಿಗೆ ನೀರು ಹರಿಸಲು ಒತ್ತಾಯಿಸಿ ಪ್ರತಿಭಟನೆ..!

Published

on

ಮಳವಳ್ಳಿ: ರೈತರ ಜಮೀನುಗಳಿಗೆ ಸಮರ್ಪಕವಾಗಿ ನಾಲೆಗಳಿಗೆ ನೀರು ಹರಿಸಲು ಒತ್ತಾಯಿಸಿ ಮಳವಳ್ಳಿ ತಾಲ್ಲೂಕಿನ ಟಿ.ಕಾಗೇಪುರ ಗೇಟ್ ಬಳಿವಿರುವ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿದರು. ತಾಲ್ಲೂಕಿನ ಟಿ. ಕಾಗೇಪುರ ಗೇಟ್ ಬಳಿವಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರ ಕಚೇರಿಯ ವಿ.ಸಿ ಉಪವಿಭಾಗ ದ ಮುಂದೆ 100 ಕ್ಕೂ ಹೆಚ್ಚು ರೈತರು ಸರ್ಕಾರ ವಿರುದ್ದ ಘೋಷಣೆ ಕೂಗಿದರು. ಮುಂಗಾರು ಹಂಗಾಮಿನಲ್ಲಿ ಭತ್ತ ನಾಟಿ ಮಾಡುವ ಹಂತದಲ್ಲಿದ್ದು, ಕೊನೆ ಭಾಗದ 8.9. 12.13, 17 , ಹಾಗೂ 20 ನೇ ತೂಬಿನ ಭಾಗದ ರೈತರ ಜಮೀನಿಗಳಿಗೆ ನೀರಿಲ್ಲದೆ ರೈತರ ಸ್ಥಿತಿ ಶೋಚನೀಯವಾಗಿದೆ ಆದ್ದರಿಂದ ನೀರು ಬಿಡುವಂತೆ ಒತ್ತಾಯಿಸಿದರು. ಈ ಮದ್ಯೆ ರೈತರು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ನಡುವೆ ಮಾತಿನ ಚಕಮುಕಿ ನಡೆಯಿತು. ಪೊಲೀಸರು ಮದ್ಯೆ ಪ್ರವೇಶಿಸಿ ಸಮಾದಾನ ಪಡಿಸಿದರು. ಸ್ಥಳಕ್ಕೆ ಇಇ ಡಿ ಅಶೋಕ , ಎಇಇ ಶಿವಲಿಂಗು ಭೇಟಿ ನೀಡಿ ರೈತರ ಬೇಡಿಕೆಗಳ ಬಗ್ಗೆ ತಿಳಿದು ಕೊಂಡು ಮನವೊಲಿಸಲು ಯತ್ನಿಸಿದರು.ಆದರೆ ರೈತರು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶಿವಲಿಂಗುರವರನ್ನು ತರಾಟೆಗೆ ತೆಗದುಕೊಂಡರು. ಇದೇ ವೇಳೆ ಕಾವೇರಿ ನೀರಾವರಿ ನಿಗಮದ ಎಸ್ ಇ ವಿಜಯಕುಮಾರ್ ರವರಿಗೆ ದೂರವಾಣಿ ಮೂಲಕ ರೈತರು ಮಾತನಾಡಿ , ನೀರು ಕೊಡುವ ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆ ಹಿಂಪಡೆದರು. ಇನ್ನೂ ಪ್ರತಿಭಟನೆಯಲ್ಲಿ ತಳಗವಾದಿ, ನೆಲಮಾಕನಹಳ್ಳಿ, ಮೊಳೆದೊಡ್ಡಿ , ಕಂದೇಗಾಲ, ಅಂಚೆದೊಡ್ಡಿ, ಅಂಕನಹಳ್ಳಿ , ಭೂಗತಹಳ್ಳಿ, ಸೇರಿದಂತೆ ಅನೇಕ ಗ್ರಾಮದ ರೈತರು ಭಾಗವಹಿಸಿದ್ದರು.

ವರದಿ:ಎ.ಎನ್ ಲೋಕೇಶ್ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version