Uncategorized

ಸರ್ಕಾರದ ಆಡಳಿತದ ಬಗ್ಗೆ ಗುಡುಗಿದ ನಾಗಮಂಗಲದ ಮಾಜಿ ಸಂಸದ ಧ್ರುವನಾರಾಯಣ್..!

Published

on

ನಾಗಮಂಗಲ: ನಾಗಮಂಗಲದಲ್ಲಿ ನಿನ್ನೇ ಮಾತನಾಡಿದ ಮಾಜಿ ಸಂಸದ ಧ್ರುವನಾರಾಯಣ್ ಸ್ಯಾಂಡಲ್ ವುಡ್ ನಲ್ಲಿ ಕೇಳೀ ಬರುತ್ತೀರುವ ಡ್ರಗ್ಸ್ ದಂಧೆ ವಿಚಾರ ನಾಚಿಕೇಗೇಡು,ಇದರಿಂದಾಗಿ ನಾವೆಲ್ಲರೂ ತಲೆ ತಗ್ಗಿಸುವ ಪರಿಸ್ಥೀತಿ ನಿರ್ಮಾಣವಾಗಿದೆ. ಇಂದ್ರಜಿತ್ ಲಂಕೇಶ್ ನೀಡಿರುವ ಮಾಹಿತಿ ಆಧಾರಿಸಿ ಆದಷ್ಟೂ ಬೇಗ ತಪ್ಪಿತಸ್ಥರನ್ನು ಸರ್ಕಾರ ಮಟ್ಟ ಹಾಕಲಿ ಯಾವುದೇ ಮುಲಾಜಿಗೆ ಒಳಗಾಗದೇ ಸೂಕ್ತ ಕ್ರಮಕೈಗೊಳ್ಳಲಿ ಎಂದು ಇಂದ್ರಜಿತ್ ಲಂಕೇಶ್ ರವರು ಈ ವಿಚಾರವಾಗಿ ನಿರ್ಭಯವಾಗಿ ಧ್ವನಿ ಎತ್ತಿದ್ದಾರೆ. ಇನ್ನೂ ಸರ್ಕಾರ ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪ್ರಪಂಚದಲ್ಲಿ ಯಾವ ದೇಶದಲ್ಲಿಯೂ ಒಂದೇ ದಿನಕ್ಕೆ ಕೊರೊನಾ ಹೆಚ್ಚು ಕೇಸ್ ಬಂದಿರಲಿಲ್ಲ.ನಮ್ಮ ದೇಶ ನೆನ್ನೆ ದಾಖಲೆ ಬರೆದಿದೆ. ದಸರಾ ಆಚರಣೆ ವಿಚಾರವಾಗಿ.ಈ ಸರ್ಕಾರ ಗೊಂದಲಮಯ ಸರ್ಕಾರ.ಆಡಳಿತ ಮತ್ತು ಕೋವಿಡ್ ನಿರ್ವಹಣೆಯಲ್ಲಿಯೂ ವಿಫಲವಾಗಿದೆ. ದಸರಾ ವಿಚಾರವಾಗಿ ಇದುವರೆಗೂ ಯಾವುದೇ ಸಭೆ ನಡೆಸುವ ಗೋಜಿಗೆ ಹೋಗಿಲ್ಲ. ಜನಪ್ರತಿನಿಧಿಗಳ ಸಭೆಯನ್ನು ಸಿಎಂ ಕರೆದು ಅಭಿಪ್ರಾಯ ಕಲೆಹಾಕಲಿ. ಮೈಸೂರಿನಲ್ಲಿ ಕೊರೊನಾ ಸೋಂಕು ಹೆಚ್ಚಾಗಿರುವ ಕಾರಣ,ಸರಳ ದಸರಾ ನಡೆಸಲಿ ಎಂಬುವುದು ನನ್ನ ಅಭಿಪ್ರಾಯ, ಹಾಗೂ ಎಐಸಿಸಿ ಅಧ್ಯಕ್ಷ ಸ್ಥಾನ ಗೊಂದಲ ವಿಚಾರ ಅಧಿಕಾರದ ಆಸೆ ಗಾಂಧಿ ಕುಟುಂಬಕ್ಕಿಲ್ಲ.ಆಗಾಗಿದ್ದರೆ ಸೋನಿಯಾಗಾಂಧಿ ಅವರೇ ಪ್ರಧಾನ ಮಂತ್ರಿಯಾಗಬಹುದಿತ್ತು. ಪಕ್ಷದಲ್ಲಿ ಸಣ್ಣಪುಟ್ಟ ಆಂತರಿಕ ಸಮಸ್ಯೆಗಳಿವೆ. ಸರಿಪಡಿಸಿಕೊಳ್ಳುತ್ತೇವೆ ಎಂದರು ಇನ್ನು ಪಕ್ಷದ ಶಾಸಕ ವಿಶ್ವಾನಾಥ್ ನಮ್ಮ ಪಕ್ಷ ಬಿಡಬಾರದಿತ್ತು. ಅವರ ಜೊತೆ ನಾನು ಅನೇಕ ಬಾರಿ ಮಾತನಾಡಿದ್ದೆ. ಅವರು ಮತ್ತು ನಾನು ಉತ್ತಮ ಸ್ನೇಹಿತರು. ಅವರು ಟಿಪ್ಪು ಕುರಿತಾಗಿ ನೀಡಿರುವ ಹೇಳಿಕೆಯನ್ನು ಸ್ವಾಗತ ಮಾಡುತ್ತೇನೆ. ವಿಶ್ವನಾಥ್ ಕೆಲವು ದ್ವಂದ್ವ ಹೇಳಿಕೆ ನೀಡುತ್ತಿದ್ದಾರೆ. ಭೂ ಸುಧಾರಣ ಕಾಯ್ದೆ ಬಗ್ಗೆ ವಿಶ್ವನಾಥ್ ಅವರು ಈ ಹಿಂದೆ ಧ್ವನಿ ಎತ್ತಿದವರು, ಈಗ ಅವರದೇ ಸರ್ಕಾರದಲ್ಲಿ ತಿದ್ದುಪಡಿಯಾಗುತ್ತಿದೆ, ಈಗ ಧ್ವನಿ ಎತ್ತುವ ಕೆಲಸ ಮಾಡಲಿ.ಹುಣಸೂರು ಪ್ರತ್ಯೇಕ ಜಿಲ್ಲೆ ಅವಶ್ಯಕತೆ ಇಲ್ಲವೆಂದು ನಾಗಮಂಗಲದಲ್ಲಿ ಮಾಜಿ ಸಂಸದ ಧ್ರುವನಾರಾಯಣ್ ಹೇಳಿಕೆ ನೀಡಿದ್ದಾರೆ.

ವರದಿ- ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.

Click to comment

Trending

Exit mobile version