ಶಿರಾ

ಪೈಪ್ ಒಡೆದು ನೀರು ಪೋಲು-ಅಧಿಕಾರಿಗಳ ನಿರ್ಲಕ್ಷ್ಯತನ..!

Published

on

ಶಿರಾ:-ನಗರದ ಹೃದಯ ಭಾಗದಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಒಂದು ವಾರ ಕಳೆಯುತ್ತಾ ಬಂದರು ಸಹ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ಹೀಗಾಗಿ ನಿತ್ಯ ನೂರಾರು ಜನರು ಓಡಾಡುವ ಶಿರಾ-ಅಮರಾಪುರ ಹಾಗೂ ಪ್ರವಾಸಿ ಮಂದಿರ ರಸ್ತೆ ಬದಿಯಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ಪೋಲು ಆಗುತ್ತಲಿದೆ. ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದ್ದರೇ, ಇನ್ನೊಂದಡೇ ತಾಲ್ಲೂಕು ಪಂಚಾಯತ್ ಕಚೇರಿ ಮುಂಭಾಗದಲ್ಲಿ ಪೈಪ್ ಒಡೆದು ದಿನಕ್ಕೆ ಸಾವಿರಾರು ಲೀಟರ್ ನೀರು ಪೋಲಾಗುತ್ತಿದ್ದರು ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಣ್ಣತೆರೆಯುತ್ತಿಲ್ಲ. ದಿನನಿತ್ಯ ಸಾವಿರಾರು ಜನರು ಹಾಗೂ ವಕೀಲರು, ಪೊಲೀಸ್ ಅಧಿಕಾರಿಗಳು ಕೆಲಸದ ನಿಮಿತ್ತ ಕಚೇರಿಗೆ ಸಾಗುವ ದಾರಿ ಇದಾಗಿದ್ದು, ಸಹ ಸಾಗುವ ರಸ್ತೆ ಇದಾಗಿದ್ದರೂ ಇನ್ನೂ ದಿನ ಬೆಳಗಾದ್ರೆ ಸಾಕು ನಗರಸಭೆ ಅಧಿಕಾರದವರು ತಿರುಗಾಟ ನೆಡೆಸಿಸುವ ಈ ರಸ್ತೆ ನೀರಿನ ಮಿತವ್ಯಯ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಅಧಿಕಾರಿಗಳಿಗೆ ಪೈಪ್ ಒಡೆದು ಸಾವಿರಾರು ಲೀಟರ್ ನೀರು ವೆಸ್ಟ್ ಆಗುತ್ತಿದ್ದರು ಮಾತ್ರ ಕಣ್ಣಗೆ ಕಾಣುತ್ತಿಲ್ಲ.ನೀರು ಪೋಲಾಗುವುದನ್ನು ಕಂಡು ರಸ್ತೆಯಲ್ಲಿ ನೀರು ಪೋಲಾಗುವುದನ್ನು ಸರಿ ಪಡೆಸಲಾಗದವರು ಇನ್ನೇನು ಜನರ ಸಮಸ್ಯೆ ಬಗೆ ಹರಿಸುತ್ತಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಇನ್ನಾದರು ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಪೋಲಾಗುತ್ತಿರುವ ನೀರನ್ನು ತಡೆಯುವ ಪ್ರಯತ್ನ ಮಾಡುತ್ತಾರಾ ಕಾದು ನೋಡ ಬೇಕಾಗಿದೆ.

ವರದಿ: ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ

Click to comment

Trending

Exit mobile version