ಕೋಲಾರ

ದಾಖಲೆ ಇಲ್ಲದೇ ಸಾಗಿಸುತ್ತಿದ್ದ 2 ಕೋಟಿ 94 ಲಕ್ಷ ಹಣ ಜಪ್ತಿ.. ಇಬ್ಬರನ್ನು ವಶಕ್ಕೆ ಪಡೆದ ಪೋಲಿಸರು..!

Published

on

ಕೋಲಾರ: ಹಣವನ್ನು ಯಾವುದೇ ದಾಖಲೆಗಳು ಇಲ್ಲದೇ ಶಿಫ್ಟ್ ಕಾರಿನಲ್ಲಿ ಸುಮಾರು 2 ಕೋಟಿ 94 ಲಕ್ಷ 50 ಸಾವಿರ ಹಣವನ್ನು ಅಂಧ್ರಕ್ಕೆ ಸಾಗಿಸಲಾಗುತ್ತಿದ್ದ ಖದೀಮರನ್ನು ಮಂಗಳವಾರ ರಾತ್ರಿ ಶ್ರೀನಿವಾಸಪುರ ಪೋಲಿಸರು ವಶಕ್ಕೆ ಪಡೆದಿದ್ದು ಹಣ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ರೋಜರನಹಳ್ಳಿ ಬಳಿ ಈ ಘಟನೆ ನಡೆದಿದ್ದು, ಕಾರಿನಲ್ಲಿ ಹಣ ಸಾಗಿಸುತ್ತಿದ್ದ ಕೋಲಾರ ಮೂಲದ ಚಂದ್ರಶೇಖರ್ ಹಾಗೂ ಅಮರನಾಥ್ ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ, ದೊಡ್ಡ ಮೊತ್ತದ ಹಣವನ್ನು ಕಾರಿನಲ್ಲಿ ಸಾಗಿಸಲಾಗುತ್ತಿದೆ ಎಂಬ ಖಚಿತವಾಗಿ ಮಾಹಿತಿ ಪೋಲಿಸರಿಗೆ ಬಂದ ಹಿನ್ನೆಲೆ ಮೂವರು ಪೋಲಿಸರು ಕಾರನ್ನು ಚೇಸ್ ಮಾಡಿ ಕಾರನ್ನು ಅಡ್ಡಗಟ್ಟಿದ್ದಾರೆ, ಕಾರನ್ನು ಅಡ್ಡಗಟ್ಟಿದ ಕೊಡಲೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರಲ್ಲಿ ಓರ್ವ ವ್ಯಕ್ತಿ ಎಸ್ಕೇಪ್ ಆಗಿದ್ದಾನೆ. ಚಂದ್ರಶೇಖರ ಹಾಗೂ ಅಮರನಾಥ್ ಎಂಬ ಇಬ್ಬರ ಆರೋಪಿಗಳನ್ನು ವಶಕ್ಕೆ ಪಡೆದ ಪೋಲಿಸರು ಇನ್ನೊಬ್ಬ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಇನ್ನೂ ಶ್ರೀನಿವಾಸಪುರ ಪೋಲಿಸ್ ಠಾಣೆಗೆ ಜಿಲ್ಲಾ ಎಸ್ಪಿ ಕಾರ್ತಿಕ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು, ಎಸ್ಪಿ ಕಾರ್ತಿಕ್ ರೆಡ್ಡಿ ನೇತೃತ್ವದಲ್ಲಿ ಹಣ ಎಣಿಕೆ ಕಾರ್ಯ ನಡೆಸಲಾಯಿತು..

ವರದಿ-ಬೆಟ್ಟಪ್ಪ ಎಕ್ಸ್ ಪ್ರೆಸ್ ಟಿವಿ ಕೋಲಾರ..

Click to comment

Trending

Exit mobile version