ಮಂಡ್ಯ

ರೈತ ಮೋರ್ಚಾ ವತಿಯಿಂದ ಕೃಷಿ ಚಟುವಟಿಕೆಗಳಿಗೆ ನೀರು ಪೂರೈಸುವಂತೆ ನೀರಾವರಿ ನಿಗಮದ ಕಛೇರಿಗೆ ಮನವಿ ಸಲ್ಲಿಕೆ..!

Published

on

ಮಳವಳ್ಳಿ: ಬಿಜೆಪಿ ರೈತ ಮೋರ್ಚಾ ವತಿಯಿಂದ ವಿಸಿ ನಾಲೆ ಕೊನೆಭಾಗಗಳಾದ ಕಿರುಗಾವಲು ಮತ್ತು ಬಿಜಿಪುರ ಭಾಗಗಳಿಗೆ ಕೃಷಿ ಚಟುವಟಿಕೆಗಳಿಗೆ ನೀರು ಪೂರೈಸುವಂತೆ ಒತ್ತಾಯಿಸಿ ಮಳವಳ್ಳಿ ತಾಲ್ಲೂಕು ಕಿರುಗಾವಲು ಸಂತೆ ಮೈದಾನದ ಕಾವೇರಿ ನೀರಾವರಿ ನಿಗಮದ ಕಚೇರಿಗೆ ಮನವಿ ಸಲ್ಲಿಸಿದರು. ಮಳವಳ್ಳಿ ಮಂಡಲ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಕೆ.ಸಿ ದೇವರಾಜು ನೇತೃತ್ವದಲ್ಲಿ 15 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಮಳವಳ್ಳಿ ತಾಲ್ಲೂಕು ಕಿರುಗಾವಲು ಸಂತೆ ಮೈದಾನದ ಕಾವೇರಿ ನೀರಾವರಿ ನಿಗಮದ ಕಚೇರಿಗೆ ತೆರಳಿ ರೈತರ ಜಮೀನಿಗೆ ನೀರು ಬಿಡುವಂತೆ ಮನವಿ ಪತ್ರ ಸಲ್ಲಿಸಲಾಯಿತು.ಇನ್ನೂ ಮಳವಳ್ಳಿ ಮಂಡಲ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಕೆ.ಸಿ ದೇವರಾಜು ವಾಹಿನಿಯೊಂದಿಗೆ ಮಾತನಾಡಿ,ಕೆ.ಆರ್ ಎಸ್ ಅಣೆಕಟ್ಟು ಸಂಪೂರ್ಣ ಭರ್ತಿಯಾಗಿದ್ದರೂ ಕೊನೆ ಭಾಗಗಳಾದ ಬಿ.ಜಿಪುರ ಹಾಗೂ ಕಿರುಗಾವಲು ರೈತರ ಜಮೀನಿಗೆ ನೀರು ಸಮರ್ಪಕವಾಗಿ ಬಿಡುಬೇಕು,ಕಳೆದ ಎರಡು ದಿನಗಳಿಂದ ಬಿದ್ದ ಮಳೆಯಿಂದ ರೈತರು ಉಸಿರು ಬಿಡುವಂತಾಗಿದೆ ಇಲ್ಲದಿದ್ದರೆ ರೈತರು ಸ್ಥಿತಿ ಚಿಂತಾಜನಕವಾಗುತ್ತಿತ್ತು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಕಬ್ಬು ಬೆಳೆಗಾರರ ಸಂಚಾಲಕ ಕೃಷ್ಣ, ರೈತ ಮೋರ್ಚಾ ಉಪಾಧ್ಯಕ್ಷ. ಪಿ ಹಳ್ಳಿ ರಮೇಶ್ ,ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ಸಿ ನಾಗೇಗೌಡ, ಅಶೋಕಕ್ಯಾತನಹಳ್ಳಿ, ಶಕ್ತಿಕೇಂದ್ರ ಅಧ್ಯಕ್ಷ ಅನಿಲ್, ಸೇರಿದಂತೆ ಮತ್ತಿತ್ತರರು ಇದ್ದರು.

ವರದಿ: ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version