ಸಿಂಧನೂರು

ವಿವಿಧ ಹಕ್ಕೊತ್ತಾಯ ಈಡೇರಿಸಲು ಒತ್ತಾಯಿಸಿ ಡಿ.ಹೆಚ್.ಎಸ್ ನಿಂದ ಪ್ರತಿಭಟನೆ..!

Published

on

ಸಿಂಧನೂರು:ನಗರದ ತಹಶಿಲ್ದಾರ ಕಚೇರಿ ಮುಂದೆ ದಲಿತ ಹಕ್ಕುಗಳ ತಾಲ್ಲೂಕು ಸಮಿತಿಯಿಂದ ಎಲೆ ಕೂಡ್ಲಿಗಿ ಗ್ರಾಮದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಸಿ ಬಹಿಷ್ಕಾರ ಹಾಕಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಸಿಂಧಗಿ ತಾಲ್ಲೂಕಿನ ಬೂದಿವಾಳ ಪಿ.ಎಚ್ ಗ್ರಾಮದಲ್ಲಿ ಅನಿಲ ಇಂಗಳಗಿಯಲ್ಲಿ ಯುವಕನ ಬರ್ಬರವಾಗಿ ಕೊಲೆ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿದವು.ದಲಿತರ ರಕ್ಷಣೆಗಾಗಿ ಇರುವ ಕಾನೂನುಗಳು ಈಗ ನಿಷ್ಪ್ರಯೋಜಕವಾಗುತ್ತ ಬಂದಿದೆ. ಹಲ್ಲೆಗೊಳಗಾದ ದಲಿತ ಮೇಲೆ ಕೇಸು ದಾಖಲಿಸುವಂತ ಕೆಟ್ಟ ಪ್ರವೃತ್ತಿ ನಡೆಯುತ್ತಿದೆ. ಸ್ಥಳೀಯ ರಾಜಕಾರಣ ಸಂಬಂಧ ಪಟ್ಟ ಅಧಿಕಾರಗಳು ರಾಜ್ಯ ಕೇಂದ್ರ ಸರ್ಕಾರಗಳು ದಲಿತರನ್ನು ಪ್ರತಿನಿಧಿಸಿ ಆಯ್ಕೆಯಾದ ಶಾಸಕ ಸಂಸದರು ದಿವ್ಯ ನಿರ್ಲಕ್ಷ್ಯವನ್ನು ತ್ಯಜಿಸಿ ದಲಿತರು ತಲೆ ಎತ್ತಿ ಬದುಕುವಂತೆ ಮಾಡಲು ಅವರ ಮೇಲೆ ನಡೆಯುವ ದೌರ್ಜನ್ಯತೆ. ಕೊಲೆ ಅತ್ಯಾಚಾರ ಎಸಗುವವರ ಮೇಲೆ ಕಠಿಣ ಕ್ರಮ ಜರುಗಿಸುವಂತೆ ನೋಡಿಕೊಳ್ಳಬೇಕು ಎನ್ನುವುದು ಸೇರಿದಂತೆ ಇನ್ನೂ ಅನೇಕ ಬೇಡಿಕೆ ಈಡೇರಿಸಲು ಒತ್ತಾಯಿಸಿ ತಹಶಿಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಈ ಸಂಧರ್ಭದಲ್ಲಿ ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಹನುಮಂತಪ್ಪ ಮ್ಯಾಗಳ ಮನಿ.ಉಪಾಧ್ಯಕ್ಷ ಯಂಕಪ್ಪ ಕೆಂಗಲ್, ಕಾರ್ಯದರ್ಶಿ ನರಸಿಂಹಪ್ಪ, ವೀರೇಶ ಕುರುಕುಂದ, ಪಕಿರಪ್ಪ ಸೇರಿದಂತೆ ಇತರರು ಭಾಗವಹಿಸಿದರು.

ವರದಿ- ಸೈಯದ್ ಬಂದೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು..

Click to comment

Trending

Exit mobile version