ಬೆಂಗಳೂರು

ಇನ್ಮುಂದೆ ಮನೆ ಮುಂದೆ ಕೊರೊನಾ ಪೋಸ್ಟರ್ ಅಂಟಿಸಲ್ಲ : ಮಂಜುನಾಥ್ ಪ್ರಸಾದ್..!

Published

on

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಿದೆ. ಈ ಮೊದಲು ಸೋಂಕು ಕಂಡು ಬಂದ ಕೂಡಲೇ ಮನೆ ಹಾಗು ಏರಿಯಾ ಸೀಲ್ಡೌನ್ ಮಾಡಲಾಗಿತ್ತು.ಆದರೆ ಈ ಅದೇಶವನ್ನ ಪರಿಷ್ಕರಿಸಿ, ಕೇವಲ ಮನೆ ಮುಂದೆ ಪೋಸ್ಟರ್ ಅಂಟಿಸವುದು ಅಂತ ತೀರ್ಮಾನ ಮಾಡಿದ್ದರು. ಆದರೆ ಇದೀಗ ಮತ್ತೆ ಆದೇಶವನ್ನ ಪರಿಷ್ಕರಿಸಿ ಇನ್ಮುಂದೆ ಪೋಸ್ಟರ್ ಪದ್ದತಿಯನ್ನೂ ಕೂಡ ರದ್ದು ಮಾಡಲು ಬಿಬಿಎಂಪಿ ತೀರ್ಮಾನ ಮಾಡಿದೆ.ಬೆಂಗಳೂರಿನಲ್ಲಿ ಮಾತನಾಡಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್,ಎಲ್ಐಎಲ್ ಹಾಗು ಆಸ್ತಮಾ ಇರುವ ರೋಗಿಗಳು, ಅವರೇ ಬಂದು ಟೆಸ್ಟ್ ಮಾಡಿಸಿಕೊಂಡರೆ ಉತ್ತಮ, ಇದರಿಂದ ಕೊರೊನಾ ಸೋಂಕು ಹರಡುವುದನ್ನ ತಡೆಯಬುದು ಎಂದಿದ್ದಾರೆ. ಅಲ್ಲದೇ ಪೋಸ್ಟರ್ ಅಂಟಿಸುವುದರಿಂದ ಅಕ್ಕಪಕ್ಕದ ಮನೆಯವರು ವಿಚಿತ್ರವಾಗಿ ನೋಡುತ್ತಾರೆ ಎನ್ನುವ ಆರೋಪ ಇತ್ತು, ಆದ್ರೆ ಇನ್ನಮುಂದೆ ಪೋಸ್ಟರ್ ಬದಲು ಅಕ್ಕಪಕ್ಕದ ಮನೆಯವರಿಗೆ ಮಾಹಿತಿ ನೀಡುತ್ತೇವೆ ಎಂದಿದ್ದಾರೆ.ಈಗಾಗಲೇ ರಾಜ್ಯ ಸರ್ಕಾರಕ್ಕೆ ಇದರ ಬಗ್ಗೆ ತಿಳಿಸಿದ್ದು,ಶೀಘ್ರದಲ್ಲೇ ಆದೇಶ ಹೊರಡಿಸಲಾಗುತ್ತೆ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ವರದಿ- ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು..

Click to comment

Trending

Exit mobile version