ಬೆಂಗಳೂರು

ಟ್ರಾಫಿಕ್ ಜ್ಯಾಮ್ ಕಿರಿಕಿರಿಯಿಂದ ಬೇಸತ್ತಿದ್ದ ಜನರಿಗೆ ಸೆಪ್ಟೆಂಬರ್ 6ರಿಂದ ಸಿಗಲಿದೆ ಬಿಗ್ ರಿಪೀಫ್..!

Published

on

ಬೆಂಗಳೂರು: ಬೆಂಗಳೂರಿನ ‘ನಮ್ಮ ಮೆಟ್ರೋ’ ಸೆಪ್ಟೆಂಬರ್ 7ನೇ ತಾರೀಕಿನಿಂದ ಕಾರ್ಯನಿರ್ವಹಣೆ ಆರಂಭಿಸಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಸುಮಾರು ಬೆಳಗ್ಗೆ 8ರಿಂದ 11ರ ತನಕ ಹಾಗೂ ಸಂಜೆ 4.30ರಿಂದ ರಾತ್ರಿ 7.30ರ ತನಕ ಪ್ರತಿ ಐದು ನಿಮಿಷಗಳಿಗೊಮ್ಮೆ ಮೆಟ್ರೊ ಸಂಚರಿಸಲಿದೆ. ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಪ್ರಕಾರ, ಪರ್ಪಲ್ ಲೈನ್ ರೈಲುಗಳು ಸೆ.7ರಿಂದ ಕಾರ್ಯಾರಂಭ ಮಾಡುತ್ತವೆ.ಹಸಿರು ಲೈನ್ ನಲ್ಲಿ ಸೆ. 9ರಿಂದ ಆರಂಭವಾಗುತ್ತದೆ. ಸೆಪ್ಟೆಂಬರ್ 11, 2020ರಿಂದ ಎರಡೂ ಲೈನ್ ನಲ್ಲಿ ಬೆಳಗ್ಗೆ 7ರಿಂದ ರಾತ್ರಿ 9ರ ತನಕ ಕಾರ್ಯನಿರ್ವಹಣೆ ಮಾಡಲಿದೆ ಎಂದು ತಿಳಿಸಲಾಗಿದೆ. ಪೀಕ್ ಅವರ್ ನಲ್ಲಿ ಪ್ರತಿ ಐದು ನಿಮಿಷಕ್ಕೆ ಒಂದರಂತೆ ಹಾಗೂ ಪೀಕ್ ಅವರ್ ಹೊರತುಪಡಿಸಿದ ಸಮಯದಲ್ಲಿ ಪ್ರತಿ ಹತ್ತು ನಿಮಿಷಕ್ಕೊಮ್ಮೆ ರೈಲು ಸಂಚಾರ ಇರುತ್ತದೆ. ರೈಲಿನಲ್ಲಿ ಪ್ರಯಾಣಿಸುವವರು ಸ್ಮಾರ್ಟ್ ಕಾರ್ಡ್ ಬಳಸಬೇಕಾಗುತ್ತದೆ. ಕಾರಣ ಟೋಕನ್ ಮಾರಾಟ ಮಾಡುವುದಿಲ್ಲ. ಇನ್ನು ಎಲ್ಲ ಮೆಟ್ರೋ ಆವರಣದಲ್ಲಿ ಕಡ್ಡಾಯವಾಗಿ ಫೇಸ್ ಮಾಸ್ಕ್ ಬಳಸಿರಬೇಕು. ಇನ್ನು ಎರಡು ಮೀಟರ್ ಗಳ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ತಿಳಿಸಲಾಗಿದೆ.ಹೀಗೆ ಕೋವಿಡ್ -19 ನ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿಕೊಂಡು ಮೆಟ್ರೋ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇಷ್ಟುದಿನ ಟ್ರಾಫಿಕ್ ನಲ್ಲಿ ಗಾಡಿ ಓಡಿಸಿ ಬೇಸತ್ತಿದ್ದ ಜನರಿಗೆ ಈಗಾ ಮೆಟ್ರೋ ಪುನಾರರಂಭವಾಗುವುದರಿಂದ ಟ್ರಾಫಿಕ್ ಜ್ಯಾಮ್ ಕಿರಿಕಿರಿಯಿಂದ ಬಿಗ್ ರೀಲಿಫ್ ಸಿಗೊದೆಂತು ಸತ್ಯ..

ವರದಿ-ಸುಪ್ರಿಯಾ ಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು..

Click to comment

Trending

Exit mobile version