ಸಿನಿಮಾ

ಸ್ಯಾಂಡಲ್ವುಡ್ಗೆ ಕಾದಿದ್ಯಾ ಮಹಾ ಶಾಕ್ – ಸಂಬರಗಿ ರಿಲೀಸ್ ಮಾಡ್ತಾರಾ ಹೊಸ ಲಿಸ್ಟ್?

Published

on

ಬೆಂಗಳೂರು :ಸ್ಯಾಂಡಲ್ವುಡ್ ಡ್ರಗ್ಸ್ ಜಾಲ ಲಿಂಕ್ ಇರುವ ಬಗ್ಗೆ ಇಂದ್ರಜಿತ್ ಹೇಳಿಕೆ ಬೆನ್ನಲ್ಲೇ ಇದೀಗ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಮತ್ತೊಂದು ಲಿಸ್ಟ್ ರಿಲೀಸ್ ಮಾಡುವ ಸಾಧ್ಯತೆ ಇದೆ. ಇಂದು ಬೆಳಗ್ಗೆ 11 ಗಂಟೆಗೆ ಸಿಸಿಬಿ ಕಚೇರಿಗೆ ಇಂದ್ರಜಿತ್ ಲಂಕೇಶ್ ವಿಚಾರಣೆಗೆ ಹಾಜರಾಗಲಿದ್ದು, 10-15 ನಟ, ನಟಿಯರ ಡ್ರಗ್ಸ್ ಲಿಂಕ್ ಇರುವ ಬಗ್ಗೆ ದಾಖಲೆ ನೀಡಲಿದ್ದಾರೆ ಎನ್ನಲಾಗಿದೆ. ಕಳೆದ ಸೋಮವಾರವಷ್ಟೇ ಸಿಸಿಬಿ ಕಚೇರಿಗೆ ಬಂದಿದ್ದ ಇಂದ್ರಜಿತ್ ಸತತ ಐದು ಗಂಟೆಗಳ ಕಾಲ ವಿಚಾರಣೆಯಲ್ಲಿ ನಟ,ನಟಿ ಸೇರಿದಂತೆ ರಾಜಕಾರಣಿಗಳ ಮಕ್ಕಳು ಡ್ರಗ್ಸ್ ಲಿಂಕ್ನಲ್ಲಿರುವ ಬಗ್ಗೆ ಮಾಹಿತಿ ನೀಡಿದ್ದರು. ಅದರಂತೆ ಇಂದು ಕೂಡ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಅಧಿಕಾರಿಗಳು ಕರೆದಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಸಿಸಿಬಿ ಕಚೇರಿಗೆ ಹಾಜರಾಗಲಿದ್ದಾರೆ. ಒಂದು ಕಡೆ ಇಂದ್ರಜಿತ್ ಹಾಗೂ ರಾಗಿಣಿ ದ್ವಿವೇದಿ ವಿಚಾರಣೆಗೆ ಹಾಜರಾದ್ರೆ,ಮತ್ತೊಂದು ಕಡೆ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಸುದ್ದಿಗೋಷ್ಠಿ ಕರೆದಿದ್ದು,ಮತ್ತಷ್ಟು ಹೆಸರು ರಿವೀಲ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.ಒಟ್ಟಾರೆ ಸ್ಯಾಂಡಲ್ವುಡ್ ಡ್ರಗ್ಸ್ ಲಿಂಕ್ ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆಯುತ್ತಿದ್ದು,ಮತ್ತಷ್ಟು ಸ್ಫೋಟಕ ಹೆಸರುಗಳು ಬಹಿರಂಗವಾಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು..

Click to comment

Trending

Exit mobile version