ಸಿನಿಮಾ

ಸಿಸಿಬಿ ಅಧಿಕಾರಿಗಳಿಂದ ಇಂದು ರಾಗಿಣಿ ದ್ವಿವೇದಿ ವಿಚಾರಣೆ..!

Published

on

ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣ ಸಂಬಂಧ ಇಂದು ರಾಗಿಣಿ ದ್ವಿವೇದಿ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಅದರಂತೆ ಇಂದು ಬೆಳಗ್ಗೆ 10 ಗಂಟೆಗೆ ನಟಿ ರಾಗಿಣಿ ವಿಚಾರಣೆಗೆ ಹಾಜರಾಗಲಿದ್ದಾರೆ. ರಾಗಿಣಿ ಆಪ್ತ ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿರುವ ಆರೋಪ ಹಿನ್ನೆಲೆ ನಿನ್ನೆ ಜಯನಗರ ಆರ್ಟಿಒ ಕಚೇರಿಯಿಂದ ಸಿಸಿಬಿ ಅಧಿಕಾರಿಗಳು ರವಿಶಂಕರ್ನನ್ನ ಬಂಧಿಸಿದ್ದಾರೆ. ಈ ವೇಳೆ ರವಿಶಂಕರ್ ಹೇಳಿಕೆ ಆಧಾರದ ಮೇಲೆ ರಾಗಿಣಿ ದ್ವಿವೇದಿಗೆ ನೋಟಿಸ್ ಜಾರಿ ಮಾಡಲಾಗಿದೆ.ಇನ್ನು ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಲಿಂಕ್ ಇದೆ ಎಂಬ ಹೇಳಿಕೆ ನೀಡಿ, ವಿಚಾರಣೆಗೊಳಗಾಗಿದ್ದ ಇಂದ್ರಜಿತ್ ಲಂಕೇಶ್ ಇಂದು ಮತ್ತೆ ವಿಚಾರಣೆಗೆ ಹಾಜರಾಗಲಿದ್ದಾರೆ. ಆಗಸ್ಟ್ 31 ರಂದು ಸಿಸಿಬಿ ಕಚೇರಿಗೆ ತೆರಳಿ 10-15 ಜನ ನಟ,ನಟಿಯರ ಹೆಸರು ಹೇಳಿರುವ ಇಂದ್ರಜಿತ್. ಕೆಲವು ದಾಖಲೆ ನೀಡಿದ್ದೇನೆ ಎಂದು ಮಾಧ್ಯಮದ ಮುಂದೆ ತಿಳಿಸಿದ್ದರು. ಆದ್ರೆ ಇಂದ್ರಜಿತ್ ಯಾವುದೇ ದಾಖಲೆ ನೀಡಿಲ್ಲ ಎಂದು ಸಿಸಿಬಿ ಡಿಸಿಪಿ ಸಂದೀಪ್ ಪಾಟೀಲ್ ಅಲ್ಲೆಗೆಳೆದಿದ್ದು, ಇಂದು ದಾಖಲೆ ಸಮೇತ ಇಂದ್ರಜಿತ್ ಲಂಕೇಶ್ ಹಾಜರಾಗಲಿದ್ದಾರೆ ಎನ್ನಲಾಗಿದೆ.

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು..

Click to comment

Trending

Exit mobile version