ಮಂಡ್ಯ

ಕೊರೊನಾ ಸೋಂಕು ಹಿನ್ನೆಲೆ ಶಿಕ್ಷಕರ ದಿನಾಚರಣೆ ಸರಳವಾಗಿ ಆಚರಿಸಲು ತಿರ್ಮಾನ..!

Published

on

ಮಳವಳ್ಳಿ: ದೇಶವ್ಯಾಪ್ತಿ ಕೋವಿಡ್ 19 ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮಳವಳ್ಳಿಯಲ್ಲಿ ಈ ಭಾರಿ ಶಿಕ್ಷಕರ ದಿನಾಚರಣೆಯನ್ನು ಸರಳವಾಗಿ ಆಚರಣೆ ಮಾಡಲು ತೀರ್ಮಾನಿಸಲಾಯಿತು ಮಳವಳ್ಳಿ ಪಟ್ಟಣದ ಬಿ ಆರ್ ಸಿ ಸಭಾಂಗಣದಲ್ಲಿ ನೂತನ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿರವರ ಅಧ್ಯಕ್ಷತೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.ಪೂರ್ವಭಾವಿ ಸಭೆಯಲ್ಲಿ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುಯ್ಯ ಮಾತನಾಡಿ, ಸೆ.5 ರಂದು ಶಿಕ್ಷಕರ ದಿನಾಚರಣೆಯನ್ನು ತಾಲ್ಲೂಕಿನಲ್ಲಿ ಸರಳ ನಡೆಸಲಾಗುವುದು.ಇದಲ್ಲದೆ ತಾಲ್ಲೂಕಿನ ಎಲ್ಲಾ ಶಾಲೆಗಳಿಗೂ ಅಚರಣೆ ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಆದೇಶ ಹೊರಡಿಸಬೇಕು ಎಂದು ಮನವಿ ಮಾಡಿಕೊಂಡರು.ಇನ್ನೂ ನೂತನ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ ಮಾತನಾಡಿ,ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿ ಶಿಕ್ಷಣ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸೋಣ ಇದಕ್ಕಾಗಿ ನಿಮ್ಮೆಲ್ಲರೂ ಸಹಕಾರ ಮುಖ್ಯ ಎಂದರು. ಇದೇ ವೇಳೆ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿರವರಿಗೆ ಬಿಆರ್ ಸಿ ವತಿಯಿಂದ ಕ್ಷೇತ್ರ ಸಮಾನ್ವಯಾಧಿಕಾರಿ ಯೋಗೇಶ್ ರವರು ಸನ್ಮಾನಿಸಿದರು.

ವರದಿ- ಎ ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ..

Click to comment

Trending

Exit mobile version