ಶಿರಾ

ಉದ್ಘಾಟನೆಗೆ ಸೀಮಿತವಷ್ಟೇ.. ಶಿರಾ ನೂತನ ಪ್ರವಾಸಿ ಮಂದಿರದ ಕಟ್ಟಡ..!

Published

on

ಶಿರಾ: ಸರ್ಕಾರ ಹೊಸ ಪ್ರವಾಸಿ ಮಂದಿರದಲ್ಲಿ ಮೂಲಸೌಲಭ್ಯಗಳ ಕೊರತೆ ಮತ್ತು ನೂತನ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನುದಾನ ಬಿಡುಗಡೆ ಮಾಡಲಾಯಿತು. ಅದರಂತೆ ಶಿರಾ ತಾಲ್ಲೂಕಿನ ಸ್ಥಳೀಯ ಕೇಂದ್ರ ಸ್ಥಾನದಲ್ಲಿರುವ ಹಳೆ ಪ್ರವಾಸಿ ಮಂದಿರದಲ್ಲಿ ಮೂಲಸೌಲಭ್ಯಗಳ ಕೊರತೆಯಿಂದಾಗಿ ಪ್ರವಾಸಿಗರು ವಾಸ್ತವ್ಯ ಹೂಡಲು ಹಿಂದೇಟು ಹಾಕುತ್ತಿದ್ದಾರೆ. ಎಂಬ ಉದ್ದೇಶದಿಂದ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ. ಬ್ರಿಟಿಷ್ ರ ಕಾಲದ ಸುಮಾರು ಹಲವು ವರ್ಷದ ಹಳೆಯ ಪ್ರವಾಸಿ ಮಂದಿರಗೆ ನಾನಾ ಕಡೆಗಳಿಂದ ರಾಜಕೀಯ ಮುಖಂಡರು ಹಾಗೂ ವಿವಿಧ ಅಧಿಕಾರಿಗಳಿಗೆ ಬರುತ್ತಿದ್ದರು.ಆದ್ರೆ ಇಲ್ಲಿ ತಂಗಲು ಸೂಕ್ತವಾದ ಯಾವುದೇ ಮೂಲ ಸೌಲಭ್ಯವಿಲ್ಲದಿರುವುದು ಹಾಗೂ ಹಳೆಯ ಕಟ್ಟಡ ದುರಸ್ಥೀತಿಯನ್ನು ಮನಗಂಡು ತಾಲ್ಲೂಕು ಕೇಂದ್ರವಾಗಿರುವ ಶಿರಾ ನಗರದಲ್ಲಿ ಹಳೆಯ ಪ್ರವಾಸಿ ಮಂದಿರದ ವಿಶಾಲವಾದ ಪ್ರದೇಶದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ 2018 ರ ವಿಧಾನಸಭಾ ಕ್ಷೇತ್ರದಲ್ಲಿ ತಾಲ್ಲೂಕು ಕೇಂದ್ರಕ್ಕೆ ಸ್ಥಳೀಯರು ಮನವಿ ನೀಡಿದ್ದರು. ಆ ಹಿನ್ನೆಲೆಯಲ್ಲಿ ಕೊಠಡಿ ಹಾಗೂ ಊಟದ ಹಾಲ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.ನಂತರ ಕಳೆದ ಮೂರು ತಿಂಗಳ ಹಿಂದೆ 12.06.2020ರಂದಯ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹಾಗೂ ಸ್ಥಳೀಯ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ನಡುವೆ ಕೊರೋನ ಸಮಯದಲ್ಲಿ ಉದ್ಘಾಟಿಸಲಾಯಿತು.ನೂತನ ಪ್ರವಾಸಿ ಮಂದಿರದ ಕಟ್ಟಡ ನೂತನ ಕಟ್ಟಡದಲ್ಲಿ ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡಿ ತಂಗುವವರಿಗೆ ಹಾಗೂ ಪ್ರಯಾಣ ಮದ್ಯ ವಿಶ್ರಾಂತಿ ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಕುಡಿಯುವ ನೀರು ಸೇರಿದಂತೆ ನಾನಾ ಸೌಲಭ್ಯಗಳನ್ನು ಒದಗಿಸಲಾಗಿತ್ತು.ಆದರೆ ಕೊಠಡಿಗಳಿಗೆ ಬೇಕಾದ ಚೇರ್,ಟೇಬಲ್‌ಗಳು ಪೂರೈಕೆಯಾಗದೆ ಇದ್ದ ಪರಿಣಾಮ ಪೀಠೋಪಕರಣಗಳನ್ನು ತರಿಸಿ ನಂತರ ಪ್ರವಾಸಿಗರಿಗೆ ಬಳಕೆ ಮಾಡಲು ಅವಕಾಶ ಇಲ್ಲದ ಕಾರಣದಿಂದಾಗಿ ಉದ್ಘಾಟನೆಗೆ ಮಾತ್ರ ಸೀಮಿತವಾಗಿದೆ.ಉದ್ಘಾಟನೆ ಮಾಡಿ ಹೊರಟ ನಂತರ ಇದುವರೆಗೆ ೀ ಕಟ್ಟಡದ ಹತ್ತಿರ ಯಾವ ಅಧಿಕಾರಿಗಳು ಬಂದಿಲ್ಲ ಈಗ ಈ ಕಟ್ಟಡ ಸಿಮೆಂಟ್ ದಾಸ್ತಾನು ಕೇಂದ್ರವಾಗಿದೆ.ಕಟ್ಟಡ ನಿರ್ಮಾಣವಾಗಿ ಮೂರು ತಿಂಗಳು ಕಳೆದಿರುವ ಪರಿಣಾಮ ಕೊಠಡಿಯಲ್ಲಿರುವ ಕಿಟಕಿ ಗಾಜುಗಳು ಧೂಳು ತುಂಬಿ ಹೋಗಿದ್ದು, ದುರಸ್ತಿ ಹಂತಕ್ಕೆ ಬಂದಿವೆ. ನೂತನ ಪ್ರವಾಸಿ ಮಂದಿರದಲ್ಲಿರುವ ಕೊಠಡಿಗಳು ಬಳಕೆಯಾಗದ ಹಿನ್ನೆಲೆಯಲ್ಲಿ ಗೋಡೆಗಳು ಶೌಚಾಲಯವಾಗುತ್ತಿವೆ.ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಪ್ರವಾಸಿ ಮಂದಿರದ ಸಮಸ್ಯೆ ನಿವಾರಣೆ ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ವರದಿ- ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ

Click to comment

Trending

Exit mobile version