ಹುಬ್ಬಳ್ಳಿ-ಧಾರವಾಡ

ಗಾಂಜಾ ವಶಕ್ಕೆ ಪಡೆದ ಉಪನಗರ ಠಾಣೆಯ ಪೋಲಿಸರು..ಇಬ್ಬರು ಆರೋಪಿಗಳ ಬಂಧನ!

Published

on

ಹುಬ್ಬಳ್ಳಿ: ನಗರದ ಶ್ರೀ ಬನಶಂಕರಿ ಖಾಸಗಿ ಕೈಗಾರಿಕಾ ತರಭೇತಿ ಸಂಸ್ಥೆಯ ಹತ್ತಿರ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿ-ಧಾರವಾಡ ನಗರ ಆರ್ಥಿಕ ಅಪರಾಧ ಮತ್ತು ಮಾದಕ ವಸ್ತುಗಳ ಅಪರಾಧ ಪೊಲೀಸ್ ಠಾಣೆಯವರು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿ ತಿಮ್ಮಸಾಗರದ ಟಿಸ್ಸ್ ಅಲಿಯಾಸ್ ವಿಶ್ವನಾಥ ಮಲ್ಲಪ್ಪ ಕರಡಿಗುಡ್ಡ (30) ಹಾಗೂ ಮಂಟೂರ ರಸ್ತೆಯ ನರೇಶಕುಮಾರ ರಾಜನ್ನ ನಾಯಕಂಟಿ (28)ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು ಬಂಧಿತರಿಂದ 1 ಕೆಜಿ 795 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಗಾಂಜಾ ಸಾಗಾಟಕ್ಕೆ ಬಳಕೆ ಮಾಡುತ್ತಿದ್ದ ಟಿವಿಎಸ್ ಜೂಪಿಟರ್ ಹಾಗೂ ಎರಡು ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಕಾರ್ಯಚರಣೆಯಲ್ಲಿ ಠಾಣೆಯ ಇನ್ಸ್ ಪೆಕ್ಟರ್ ಎನ್.ಸಿ.ಕಾಡದೇವರಮಠ, ಸಿಬ್ಬಂದಿಗಳಾದ ಬಿ.ಕೆ.ಹೂಗಾರ, ಸಿ.ಎಂ.ಕಂಬಾಳಿಮಠ, ರವಿ ಕೋಳಿ, ಎಂ.ಡಿ.ಬಡಿಗೇರ, ವೈ.ಎಫ್.ದಾಸಣ್ಣನವರ, ಪಿ.ಬಿ.ಹಿರಗಣ್ಣನವರ, ಮೋಹನ ಈಳಿಗೇರ, ರಾಕೇಶ ಗೋರ್ಕಲ್ ಭಾಗವಹಿಸಿದ್ದರು. ಇನ್ನೂ ಕುರಿತು ಉಪನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

ವರದಿ- ರಾಜು ಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ.

Click to comment

Trending

Exit mobile version