ಸಿಂಧನೂರು

ಝೀ ಕನ್ನಡ ವಾಹಿನಿಯ ನಿರ್ವಹಕ ರಾಘವೇಂದ್ರ ಹುಣಸೂರುಗೆ ಜೀವ ಬೆದರಿಕೆ ಹಾಕಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಿಹಿಸಿ ಪ್ರತಿಭಟನೆ..!

Published

on

ಸಿಂಧನೂರು: ನಗರದ ತಹಶಿಲ್ದಾರರ ಕಚೇರಿ ಮುಂದೆ ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ ಹಾಗೂ ದಲಿತ ಪರ ಸಂಘಟನೆಗಳು ಜಂಟಿಯಾಗಿ ಝೀ ಕನ್ನಡ ವಾಹಿನಿ ನಿರ್ವಹಕರಾದ ರಾಘವೇಂದ್ರ ಹುಣಸೂರು ಅವರಿಗೆ ಜೀವ ಬೆದರಿಕೆ ಹಾಕಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿ ಪ್ರತಿಭಟನೆ ಮಾಡಿದರು.ಈ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮುಖಂಡ ಎಮ್.ಗಂಗಾಧರ ಮಾತನಾಡಿ ಡಾ! ಬಿ.ಆರ್.ಅಂಬೇಡ್ಕರ್ ರವರ ಜೀವನ ಚರಿತ್ರೆ ಮತ್ತು ಅವರು ಅನುಭವಿಸಿದಂತ ಜಾತಿಯ ಶೋಷಣೆ ಯನ್ನು ತಮ್ಮ ಬ್ಯಾಲದಿಂದಲೂ ಧಿಕ್ಕರಿಸುತ್ತ.ಹೋರಾಡುತ್ತಾ ದಲಿತ. ಹಿಂದುಳಿದ. ಅಲ್ಪಸಂಖ್ಯಾತ ಸೇರಿದಂತೆ ಎಲ್ಲಾ ಜಾತಿಯ ಜನರು ಪರವಾಗಿ ಧ್ವನಿ ಎತ್ತಿ. ಈ ದೇಶಕ್ಕೆ ಸಂವಿಧಾನ ಕೊಟ್ಟಂತ ಭಾರತ ರತ್ನ ಡಾ! ಬಿ.ಆರ್.ಅಂಬೇಡ್ಕರ್ ಬಗ್ಗೆ ತಿಳಿಸುವ ಹೋರಾಟಕ್ಕೆ ಪ್ರೇರೇಪಿಸುತ್ತಿರುವ ಧಾರಾವಾಹಿ ಯನ್ನು ನಿಲ್ಲಿಸುವಂತೆ ಬೆದರಿಕೆ ಹಾಕುವುದು ಪ್ರಜಾಪ್ರಭುತ್ವ ವನ್ನೆ ಬುಡಮೇಲು ಮಾಡುವಂತ ಸಂಗತಿಯಾಗಿದೆ. ಝೀ ಕನ್ನಡ ವಾಹಿನಿ ನಿರ್ವಹಕರಾದ ರಾಘವೇಂದ್ರ ಹುಣಸೂರು ಸೇರಿದಂತೆ ಧಾರವಾಹಿಯನ್ನು ಚಿತ್ರೀಕರಣ ಮಾಡುತ್ತಿರುವ ಕಲಾವಿದರಿಗೆ ಸರ್ಕಾರ ರಕ್ಷಣೆ ನೀಡಿ.ಬೆದರಿಕೆ ಹಾಕಿದವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಇನ್ನೂ ಇದೇ ಸಮಯದಲ್ಲಿ ಅಂಬೇಡ್ಕರ್ ಪ್ರಜಾ ಸೇನೆ ಜಿಲ್ಲಾಧ್ಯಕ ನಾಗರಾಜ ಹೆಡಗಿಬಾಳ ಮಾತನಾಡಿದರು.ನಂತರ ಬರೆದ ಮನವಿ ಪತ್ರವನ್ನು ತಹಶಿಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.ಈ ಸಂಧರ್ಭದಲ್ಲಿ ಧರ್ಮರಾಜ ಉಪ್ಪಾರ.ವಿರೇಶ ಹೊಸಳ್ಳಿ.ನೀರುಪಾದೇಪ್ಪ ಎಲೆ ಕೂಡ್ಲಿಗಿ. ಶಂಕರ ವಿರುಪಾಪುರ್.ಶಶಿ ವಿರುಪಾಪುರ್.ಅಂಜಿನೇಯ ಮೋತಿ.ವಿರುಪಣ್ಣ ಸೇರಿದಂತೆ ಅನೇಕರು ಇದ್ದರೂ.

ವರದಿ-ಸೈಯದ್ ಬಂದೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು..

Click to comment

Trending

Exit mobile version