ಬೆಂಗಳೂರು

ಕೊನೆಗೂ ತಪ್ಪೊಪ್ಪಿಕೊಂಡ ನಟಿ ರಾಗಿಣಿ ದ್ವಿವೇದಿ…!

Published

on

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಸೃಷ್ಟಿಸಿರುವ ಡ್ರಗ್ಸ್ ನ ಪ್ರಕರಣ ಇದೀಗ ನಿಧಾನವಾಗಿ ರಾಜಕಾರಣಕ್ಕೂ ಸುತ್ತಿಕೊಳ್ಳುತ್ತಿದೆ. ನಟಿ ರಾಗಿಣಿ ಬಂಧನವಾಗುತ್ತಿದ್ದಂತೆ ಮಾದಕ ದ್ರವ್ಯದ ಕರಾಳ ಮುಖಗಳು ಒಂದೊಂದಾಗಿ ಹೊರ ಬರುತ್ತಿವೆ.ನಟಿ ಬಂಧನವಾಗುತ್ತಿದ್ದಂತೆ ಘಟಾನುಘಟಿ ರಾಜಕಾರಣಿಗಳ ಮಕ್ಕಳು, ಹಾಗೂ ಉದ್ಯಮಿಗಳಿಗೆ ಈಗ ಡವ ಢವ ಶುರುವಾಗಿದೆ. ಸರ್ಕಾರಿ ಸೇವೆಯಲ್ಲಿದ್ದ ರವಿಶಂಕರ್ ಹಾಗೂ ನಟಿ ರಾಗಿಣಿ ಇಬ್ಬರು ನಿರಂತರವಾಗಿ ಸಂಪರ್ಕದಲ್ಲಿದ್ದರು. ರವಿಶಂಕರ್ ನ ಹೇಳಿಕೆಯನ್ನು ಆಧಾರಿಸಿ ರಾಗಿಣಿಯನ್ನು ವಶಪಡಿಸಿಕೊಂಡಂತಹ ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸುವಾಗ ಡ್ರಗ್ಸ್ ಸೇವನೆ ಮಾಡುತ್ತಿದ್ದ ಬಗ್ಗೆ ರಾಗಿಣಿ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತಂತೆ ಸಿಸಿಬಿ ಮೂಲಗಳು ಖಚಿತ ಪಡಿಸಿದ್ದಾರೆ.ನಟಿ ರಾಗಿಣಿಗೆ ರವಿಶಂಕರ್ ನೀಡುತ್ತಿದ್ದ ಮಾದಕ ದ್ರವ್ಯವನ್ನು ಯಾರಿಗೂ ತಿಳಿಯದಂತೆ ತಮ್ಮ ಫ್ಲಾಟ್ ನಲ್ಲೇ ಸೇವಿಸುತ್ತಿದ್ದಾಗಿ ರಾಗಿಣಿ ತಿಳಿಸಿದ್ದಾರೆ. ಸದ್ಯ ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ಎರಡನೇ ಆರೋಪಿಯಾಗಿದ್ದು, ರಾಗಿಣಿಯ ಬಾಯ್ ಫ್ರೆಂಡ್ ಶಿವಕುಮಾರ್ ಚಪ್ಪಿ ಹೆಸರನ್ನು ಮೊದಲನೇ ಆರೋಪಿಯಾಗಿ ಉಲ್ಲೇಖಿಸಲಾಗಿದೆ. ಜೊತೆಗೆ ವಿರೇನ್ ಖನ್ನಾ,ಆದಿತ್ಯ ಆಳ್ವ ಸೇರಿದಂತೆ ಅನೇಕರ ಹೆಸರನ್ನು ಎಫ್ ಐಆರ್ ನಲ್ಲಿ ದಾಖಲಿಸಲಾಗಿದೆ.

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು..

Click to comment

Trending

Exit mobile version