ಸಿಂಧನೂರು

ತಹಶೀಲ್ ಕಚೇರಿಯ ಮುಂದೆ ವಿವಿಧ ಬೇಡಿಕೆ ಈಡೇರಿಸುವಂತೆ ಕೆಲ ಸಂಘಟನೆಗಳಿಂದ ಪ್ರತಿಭಟನೆ..!

Published

on

ಸಿಂಧನೂರು: ಸಾರ್ವಜನಿಕರ ಸಂಸ್ಥೆಗಳನ್ನು ಬಲಪಡಿಸಿ ಜನರಿಗೆ ಹೆಚ್ಚು ಉದ್ಯೋಗ ಅವಕಾಶವನ್ನು ನೀಡಿದೆ.ಸರ್ಕಾರಿ ಸಂಸ್ಥೆಗಳನ್ನು ಖಾಸಗಿಕರಣ ಮಾಡುತ್ತಿರುವುದು ಕಾರ್ಮಿಕ ಮುಖಂಡ ಶೇಕ್ಷಖಾದ್ರಿ ತೀವ್ರವಾಗಿ ಖಂಡಿಸಿದರು. ನಗರದ ತಹಸೀಲ್ ಕಚೇರಿಯ ಮುಂದೆ ಕರ್ನಾಟಕ ಪ್ರಾಂತ್ಯ ರೈತ ಸಂಘ, ಕರ್ನಾಟಕ ಪ್ರಾಂತ ರೈತ ಕೃಷಿ ಕೂಲಿಕಾರರ ಸಂಘ ಹಾಗೂ ಸಿಐಟಿಯು ಜಂಟಿ ಸಮಿತಿಗಳು ವಿವಿಧ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ನಡೆಸಿದರು.ಈ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಕೋರರ ಮಹಾಮಾರಿಯಿಂದ ದೇಶದ ಆರ್ಥಿಕ ಪರಿಸ್ಥೀತಿ ತೀವ್ರ ಹದಗೆಟ್ಟಿದೆ,ಇಂತಹ ಸಂದರ್ಭದಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಬಲಪಡಿಸಿ ಜನರಿಗೆ ಉದ್ಯೋಗ ನೀಡದೆ ಖಾಸಗೀಕರಣ ಮಾಡುತ್ತಾ ರೈತ ಕಾರ್ಮಿಕ ವಿರೋಧಿ ಕಾನೂನನ್ನು ಜಾರಿಗೆ ತರುವುದು ಹಿಂಪಡೆದು ಕೊರೋನ ವೈರಸ್ ಪರಿಣಾಮಕಾರಿ ಎದುರಿಸಲು ಅಗತ್ಯ ಸುರಕ್ಷತಾ ಕ್ರಮಗಳ ಜೊತೆಗೆ ಎಲ್ಲ ನಾಗರಿಕರಿಗೆ ಉಚಿತ ಚಿಕಿತ್ಸೆಯನ್ನು ನೀಡಬೇಕು, ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ದೇಶದ ಎಲ್ಲ ಕುಟುಂಬಗಳಿಗೆ ಕನಿಷ್ಠ ಮಾಸಿಕ 7000 ರೂಪಾಯಿ ನೆರವು ನೀಡಿ,ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಕೇಳುವ ಎಲ್ಲಾ ಜನತೆಗೆ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ತಲಾ ಕುಟುಂಬಕ್ಕೆ 200 ದಿನಗಳ ಉದ್ಯೋಗವನ್ನು ನೀಡಿ ಕನಿಷ್ಠ 600 ರೂಪಾಯಿಗೆ ಹೆಚ್ಚಿಸಬೇಕು,ನಿರುದ್ಯೋಗ ಯುವಕ ಯುವತಿಯರಿಗೆ ನಿರುದ್ಯೋಗ ಭತ್ಯೆ ಮಾಸಿಕ 10000 ಸಾವಿರ ಘೋಷಣೆ ಮಾಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಆಗ್ರಹಿಸಿದರು.ನಂತರ ಬರದ ಮನವಿ ಪತ್ರವನ್ನು ತಹಶೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮುಖಂಡರಾದ ಯಂಕಪ್ಪ ಕೆಂಗಲ್, ಮಾಬುಸಾಬ್, ಅಪ್ಪಣ್ಣ ಕಾಂಬಳೆ,ಚಂದಪ್ಪ, ರವಿ ಕೆಂಗಲ್, ರಂಗಣ್ಣ ಕಂಗಾಲ್,ರಾಮಣ್ಣ ಹನುಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವರದಿ- ಸೈಯದ್ ಬಂದೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Click to comment

Trending

Exit mobile version