ಶಿರಾ

ದೇವಸ್ಥಾನಕ್ಕೆ ಜೀರ್ಣೋದ್ದಾರಕ್ಕೆ ಒಂದು ಲಕ್ಷ ದೇಣಿಗೆ- ವಿಕಿರಣ ಶಾಸ್ತ್ರಜ್ಞರು, ಹಾಗೂ ಸಮಾಜ ಸೇವಕರು ಡಾ. ಸಿಎಮ್ ರಾಜೇಶ್ ಗೌಡ..!

Published

on

ಶಿರಾ: ಲಾಕ್ ಡೌನ್ ಆದ ಸಮಯದಲ್ಲಿ ಆಹಾರವಿಲ್ಲದೇ ಪರದಾಡುತ್ತಿರುವುದು ಒಂದು ಕಡೆಯಾದರೆ, ಊಟದ ಕಡೆ ಗಮನ ಹರಿಸದೇ ಪೊಲೀಸರು, ಆರೋಗ್ಯ ಸೇವಕರು ಜನರಿಗೆ ಅಗತ್ಯ ಸೇವೆ ಒದಗಿಸುವಲ್ಲಿ ನಿರಂತರಾಗಿರುವುದು ಮತ್ತೊಂದೆಡೆ. ಇವರಿಗೆಲ್ಲಾ ಆಹಾರ ಒದಗಿಸುವಲ್ಲಿ ಕೊಡುಗೆ ದಾನಿಗಳಾದ ಬೆಂಗಳೂರು ವಿಕಿರಣ ಶಾಸ್ತ್ರಜ್ಞರು, ಹಾಗೂ ಸಮಾಜ ಸೇವಕರು ಡಾ.ಸಿಎಮ್ ರಾಜೇಶ್ ಗೌಡ ಅವರು ತಮ್ಮ ತಾಲೂಕಿನ ಜನತೆಗೆ ಸಾಮಾಜ ಸೇವೆ ಸಲ್ಲಿಸುವ ಮೂಲಕ ಇಲ್ಲಿಯ ನಾಗರಿಕರ ಪ್ರಶಂಸೆಗಳಿಸಿದಾರೆ. ಅದರಂತೆ ಇದು ತಾಲೂಕಿನ ಪಂಜಿಗನಹಳ್ಳಿ ಉಡಸಲಮ್ಮ ದೇವಸ್ಥಾನಕ್ಕೆ 1ಲಕ್ಷ ರೂಗಳ ನೆರವು ನೀಡುವ ಮೂಲಕ ಮತ್ತು ಅದೇ ಗ್ರಾಮದ ಸರಕಾರಿ ಆಸ್ಪತ್ರೆಗೆ ಸಾರ್ವಜನಿಕ ಆಸ್ಪತ್ರೆಗೆ ಊರಿನ ಗ್ರಾಮದ ಜನರ ಬೇಡಿಕೆಯಂತೆ ರೋಗಿಗಳಿಗೆ ಹತ್ತು ಕಾರ್ಟ್ ಗಳು ಹಾಗೂ ಬೆಡ್ ಗಳ ವ್ಯವಸ್ಥೆ ಕೂಡ ಮಾಡಿಕೊಟ್ಟಿರುತ್ತಾರೆ.ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾವು ಮಾಡುವಂತ ಸೇವೆ ಸಮಾಜ ಮುಖಿಯಾಗಿದ್ದಾಗ ಮಾತ್ರ ಜನರ ಪ್ರೀತಿ, ವಿಶ್ವಾಸಗಳಿಸಲು ಸಾಧ್ಯ.ನಮ್ಮ ಜೀವನ ರೂಪಿಸಿದ ದೇವರ ದೇವಸ್ಥಾನಕ್ಕೆ ನೀಡುವ ದೇಣಿಗೆ ಬೆಲೆ ಕಟ್ಟಲಾಗದು.ದೇಗುಲಗಳು ನಮಗೆ ದಾರಿದೀಪ. ತತ್ವ ಸಿದ್ದಾಂತಗಳಿಗೆ ಬದ್ದರಾಗಿ ಜೀವಿಸಿದರೆ ಬದುಕು ಸಾರ್ಥಕತೆ ಕಾಣಲಿದೆ ಎಂದು ಹೇಳಿದರು.ತಾಲ್ಲೂಕಿನ ದೇವಸ್ಥಾನ, ತಂಗುದಾಣ, ಪಾರ್ಕ್, ಸರ್ಕಲ್ಗಳಲ್ಲಿ ಜನರ ವಿಶ್ರಾಂತಿಗೆ ನೂರಾರು ಸಿಮೆಂಟ್ ಬೆಂಚ್ ಹಾಕಿಸಿ ಇದರಿಂದ ವೃದ್ಧರಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲವಾಗಲಿದೆ.ಮತ್ತು ತಾಲ್ಲೂಕಿನ ಎಲ್ಲ ಹಳ್ಳಿಗಳಲ್ಲಿ ಬೆಂಚ್ ಹಾಕಿಸುವ ಗುರಿ ಹೊಂದಲಾಗಿದೆ. ಕಳೆದ ೨ ವರ್ಷಗಳಿಂದ ನಿರಂತರ ಜನಸೇವೆ ಮಾಡುತ್ತಿರುವ ಬಡಹೆಣ್ಣು ಮಕ್ಕಳ ವಿವಾಹಕ್ಕೆ ಉಚಿತ ಮಾಂಗಲ್ಯ ನೀಡುವುದು,ಆರೋಗ್ಯ ಸಮಸ್ಯೆಗಳಿಗೆ ಉಚಿತ ಚಿಕಿತ್ಸೆ,ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಸಾವಿರಾರು ಶಾಲಾ ಮಕ್ಕಳಿಗೆ ಶುದ್ದ ಕುಡಿಯುವ ನೀರು ನೀಡುವ ಜಲಪ್ರಸಾದ ಯೋಜನೆಯಲ್ಲಿ ವಾಟರ್ ಫಿಲ್ಟರ್ ನೀಡಿದ್ದೇನೆ.ಈ ಎಲ್ಲ ಸೇವೆಗಳು ಮತ್ತಷ್ಟು ಜನಸೇವೆ ಮಾಡಲು ಪ್ರೇರಣೆಯಾಗಿದ್ದು, ತಾಲ್ಲೂಕಿನಲ್ಲಿ ಜನ ತೋರುತ್ತಿರುವ ವಿಶ್ವಾಸ,ನಂಬಿಕೆಗೆ ಪೂರಕವಾಗಿ ನಿರಂತರ ಜನಸೇವೆ ಮಾಡುವ ನನ್ನ ಉತ್ಸಾಹಕ್ಕೆ ಬಲ ನೀಡಿದೆ ಎಂದರು. ಇದೆ ಸಂದರ್ಭದಲ್ಲಿ ಗ್ರಾಮದ ಮುಂಖಡರು ದೇವಾಲಯದ ಸಮಿತಿಯ ಸದಸ್ಯರು ಹಾಜರಾಗಿದ್ದರು..

ವರದಿ- ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ

Click to comment

Trending

Exit mobile version