ಸಿಂಧನೂರು

ಮಕ್ಕಳ ಬೆಳವಣಿಗೆಗೆ ಶಿಕ್ಷಕರ ಪಾತ್ರ ಮಹತ್ತರ- ಎಸ್.ಡಿ.ಎಮ್. ಸಿ ಅಧ್ಯಕ್ಷ ಎಮ್.ಚಂದ್ರಶೇಖರ್..!

Published

on

ಸಿಂಧನೂರು: ಮಗುವನ್ನು ಯಾವ ರೀತಿ ಬೆಳೆಸಬೇಕೆಂದು ಹೆತ್ತವರು ಯೋಚಿಸಿದರೆ ಮಗುವಿನ ಜನನದ ಬಳಿಕ ಎಲ್ಲಾ ಹಂತದಲ್ಲೂ ಶೈಕ್ಷಣಿಕ ಮತ್ತು ಇತರ ಎಲ್ಲಾ ರೀತಿಯಲ್ಲೂ ಮಾರ್ಗದರ್ಶನ ನೀಡಿ, ತಪ್ಪುಗಳನ್ನು ತಿಳಿಸಿ ತಿದ್ದುವ ಮೂಲಕ ಸತ್ಪ್ರಜೆಗಳನ್ನಾಗಿ ರೂಪಿಸುವುದು ಶಿಕ್ಷಕರಾಗಿದ್ದಾರೆ ಎಂದು ಎಸ್.ಡಿ.ಎಮ್. ಸಿ ಅಧ್ಯಕ್ಷ ಎಮ್.ಚಂದ್ರಶೇಖರ ಹೇಳಿದರು.ತಾಲೂಕಿನ ಜವಳಗೇರ ಗ್ರಾಮದಲ್ಲಿ ಇರುವ ಕರ್ನಾಟಕ ಪಬ್ಲಿಕ್ ಶಾಲಾ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಅಂಗನವಾಡಿಯಿಂದ ಉನ್ನತ ಸ್ಥಾನ ತಲುಪುವ ಮೂಲಕ ಶಿಕ್ಷಣ ನೀಡಿ ಜೀವನಕ್ಕೆ ಭದ್ರ ಬುನಾದಿ ಹಾಕುವ ಶಿಕ್ಷಕರ ಸೇವೆ ಬೆಲೆ ಕಟ್ಟಲಾಗದು, ಮಗುವನ್ನು ಯಾವ ರೀತಿ ಬೆಳೆಸಬೇಕೆಂದು ಹೆತ್ತವರು ಯೋಚಿಸಿದರೆ ಮಗುವಿನ ಜನನದ ಬಳಿಕ ಎಲ್ಲಾ ಹಂತದಲ್ಲೂ ಶೈಕ್ಷಣಿಕ ಮತ್ತು ಇತರ ಎಲ್ಲಾ ರೀತಿಯಲ್ಲೂ ಮಾರ್ಗದರ್ಶನ ನೀಡಿ, ತಪ್ಪುಗಳನ್ನು ತಿಳಿಸಿ ತಿದ್ದುವ ಮೂಲಕ ಸತ್ಪ್ರಜೆಗಳನ್ನಾಗಿ ರೂಪಿಸುವುದು ಶಿಕ್ಷಕರಾಗಿದ್ದಾರೆ ಎಂದು ಹೇಳಿದರು. ಜವಳಗೇರ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ಮಿಯಸಾಬ್ ಮಾತನಾಡಿ ಸಮಾಜಕ್ಕೆ ಜ್ಞಾನದ ಬೆಳಕು ನೀಡುವ ಶಿಕ್ಷಕರಿಗೆ ಎಷ್ಟು ಗೌರವ ಸಲ್ಲಿಸಿದರೂ ಸಾಲದು. ಸೈನಿಕರು, ಕೃಷಿಕರು ಮತ್ತು ಶಿಕ್ಷಕರು, ಹೀಗೆ ಮೂರು ವರ್ಗದ ಸೇವೆಯಿಂದಾಗಿ ದೇಶ ಅಭಿವೃದ್ಧಿ ಹಾಗೂ ಸುರಕ್ಷಿತವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕ ವಿರುಪಾಕ್ಷಪ್ಪ ಅವರನ್ನು ಸನ್ಮಾನಿಸಲಾಯಿತು.ಈ ಸಂಧರ್ಭದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯಗುರುಗಳಾದ ರಮೇಶ್ ಅಗ್ನಿ.ತಿಮ್ಮಣ್ಣ ದೈಹಿಕ ಶಿಕ್ಷಕ.ನಜೀರ್ ಅಬ್ಬಸ್ ಸೇರಿದಂತೆ ಅನೇಕರು ಭಾಗವಹಿಸಿದರು.

ವರದಿ- ಸೈಯದ್ ಬಂದೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Click to comment

Trending

Exit mobile version