ಕೋಲಾರ

ರಸ್ತೆ ಅಗಲೀಕರಣದ ಹಿನ್ನೆಲೆ ದೇವಾಲಯ ತೆರೆವುಗೊಳಿಸುವ ಕಾರ್ಯಚರಣೆಗೆ ಸ್ಥಳೀಯರ ವಿರೋಧ..!

Published

on

ಕೋಲಾರ: ಕೋಲಾರ ನಗರದಲ್ಲಿ ರಸ್ತೆ ಅಗಲೀಕರಣ ಕಾರ್ಯ ಭರದಿಂದ ಸಾಗುತ್ತಿದ್ದು ರಸ್ತೆ ಬದಿಯಲ್ಲಿನ ಕಟ್ಟಡಗಳನ್ನು ತೆರೆವುಗೊಳಿಸಲಾಗುತ್ತಿದೆ, ಇನ್ನೂ ಕುರುಬರು ಪೇಟೆಯಲ್ಲಿನ ಆಂಜನೇಯ ಸ್ವಾಮಿ ದೇವಾಲಯ ತೆರೆವುಗೊಳಿಸುವ ಕಾರ್ಯಚರಣೆ ವೇಳೆ ಸ್ಥಳೀಯ ನಿವಾಸಿಗಳು ವಿರೋಧ ವ್ಯಕ್ತಪಡಿಸಿ ತೆರೆವು ಕಾರ್ಯಚರಣೆಗೆ ಅಡ್ಡಿಪಡಿಸಿದ್ರು. ರಸ್ತೆ ಕಾಮಗಾರಿ ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ ಆದ್ರೆ ದೇವಾಲಯ ಖಾಸಗಿ ಸ್ವತ್ತು ಆಗಿದ್ದು ಪರಿಹಾರ ನೀಡಿ ನಂತರ ದೇವಾಲಯ ತೆರೆವುಗೊಳಿಸಲಿ ಎಂದು ದೇವಾಲಯ ಟ್ರಸ್ಟ್ ಹಾಗೂ ಸ್ಥಳೀಯರು ಆಧಿಕಾರಿಗಳು ವಿರುದ್ಧ ಪ್ರತಿಭಟನೆ ನಡೆಸಿದರು. ಈ ನಡುವೆ ಸ್ಥಳೀಯರು ಹಾಗೂ ಆಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು. ಕೋಲಾರ ತಹಶಿಲ್ದಾರ ಶೋಭಿತ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಮನವೊಲಿಸುವ ಪ್ರಯತ್ನ ನಡೆಸಿದರು. ಯಾವುದೇ ಕಾರಣಕ್ಕೂ ರಸ್ತೆ ಅಗಲೀಕರಣ ಕಾರ್ಯ ನಿಲ್ಲಿಸಲು ಸಾಧ್ಯವಿಲ್ಲ ಎಂದು ಆಧಿಕಾರಿಗಳು ಪಟ್ಟು ಹಿಡಿದ್ರು. ನಂತರ ಜಿಲ್ಲಾಡಳಿತ ಸ್ಥಳೀಯರ ಜೊತೆ ರಸ್ತೆ ಅಭಿವೃದ್ಧಿ ಕಾರ್ಯ ಕುರಿತು ಮನವರಿಕೆ ಮಾಡಿಕೊಟ್ಟು ಮನವೊಲಿಸಲಿ ಸಫಲರಾದರು. ದೇವಾಲಯದಲ್ಲಿ ಹತ್ತು ನಿಮಿಷಗಳ ಕಾಲ ಪೂಜೆ ಸಲ್ಲಿಸಲು ಸಮಯಾವಕಾಶ ನೀಡಿ ನಂತರ ದೇವಾಲಯ ತೆರೆವು ಕಾರ್ಯಚರಣೆ ಕೈಗೊಳ್ಳಲಾಯಿತು.

ವರದಿ- ಬೆಟ್ಟಪ್ಪ ಎಕ್ಸ್ ಪ್ರೆಸ್ ಟಿವಿ ಕೋಲಾರ..

Click to comment

Trending

Exit mobile version