ಹುಬ್ಬಳ್ಳಿ-ಧಾರವಾಡ

ಹೆಸರು ಕೇಂದ್ರ ಆರಂಭಿಸಲು ಆಗ್ರಹಿಸಿದ ರೈತ ಸಂಘದ ಉಪಾಧ್ಯಕ್ಷ ಮಾರುತಿ ಮಾನ್ಪಡೆ..!

Published

on

ಹುಬ್ಬಳ್ಳಿ- ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೆಸರು, ಉದ್ದು ಖರೀದಿ ಕೇಂದ್ರ ಆರಂಭಿಸಲು ಆಗ್ರಹಿಸಿ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಸರ್ಕಾರಕ್ಕೆ ಒತ್ತಾಯಿಸಿದರು. ಉತ್ತರ ಕರ್ನಾಟಕದ 10 ಜಿಲ್ಲೆಗಳ ವ್ಯಾಪ್ತಿಯಲ್ಲಿ 4.40 ಲಕ್ಷ ಹೆಕ್ಟೇರ್ ಹೆಸರು ಬೆಳೆದಿದ್ದಾರೆ. ಹೆಸರು ಬೆಂಬಲ ಬೆಲೆ 7196 ರೂ. ಇದೆ. ಮಾರುಕಟ್ಟೆ ಬೆಲೆ 4000 ರೂ.ಇದೆ.ಈ ಕೂಡಲೇ ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆ ಮೂಲಕ ಖರೀದಿಸಬೇಕು ಎಂದರು. ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆಯಿಂದ ರೈತರಿಗೆ ಮೋಸ ಆಗುತ್ತಿದೆ. ಸರ್ಕಾರ ಉಳುವವನ ಪರ ಇಲ್ಲ. ಉಳ್ಳವರ ಪರ ಇದೆ. ವಿಧಾನಸೌಧ ಭೂ ಮಾಫಿಯಾ ಕೇಂದ್ರವಾಗಿದೆ. ಈ ಕೂಡಲೇ ಎಪಿಎಂಸಿ ಕಾಯ್ದೆ ತಿದ್ದುಪಡಿ ಕೈ ಬಿಡಬೇಕು. ಇಲ್ಲದಿದ್ದರೆ ವಿಧಾನಸೌಧ ಚಲೋ ಕರೆ ನೀಡಲಾಗುವುದು ಎಂದರು. ರೈತ ಸಂಘದ ಬಸವಂತಪ್ಪ ಸೊಪ್ಪಿನ, ಬಿ.ಐ ಈಳಗೇರ ಇದ್ದರು.

ವರದಿ-ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version