ಮಂಡ್ಯ

ಮಳವಳ್ಳಿಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಜೀವನಾಧಾರಿತ ಧಾರಾವಾಹಿ ಮಹಾನಾಯಕ ಫ್ಲೇಕ್ಸ್ ಪೋಸ್ಟರ್ ಉದ್ಘಾಟನೆ..!

Published

on

ಮಳವಳ್ಳಿ: ಝೀ ಕನ್ನಡ ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ಭಾರತ ರತ್ನ ಡಾ :ಬಿ.ಆರ್. ಅಂಬೇಡ್ಕರ್ ಕುರಿತಾದ ” ಮಹಾನಾಯಕ ” ಧಾರವಾಹಿ ಸಂಚಿಕೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸದಿರಿ ಎಂದು ಪುರಸಭೆ ಸದಸ್ಯ ನಂದಕುಮಾರ್ ಝೀ ವಾಹಿನಿಗೆ ಆಗ್ರಹ ಪಡಿಸಿದರು.ಮಳವಳ್ಳಿ ಪಟ್ಟಣದ ತಮ್ಮ 10 ನೇ ವಾರ್ಡ್ ನಲ್ಲಿ ಸಿದ್ಧಾರ್ಥನಗರದ ಭೀಮ ಬಳಗ ಆಯೋಜಿಸಿದ್ದ ” ಮಹಾನಾಯಕ ” ಫ್ಲೆಕ್ಸ್ ಪೋಸ್ಟರ್ ಉದ್ಘಾಟನಾ ಹಾಗೂ ಕೋರೋನಾ ವಾರಿಯಸ್೯ಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಯಾರೋ ಕಿಡಿಗೇಡಿಗಳು ಝೀ ವಾಹಿನಿ ಸಂಚಿಕೆ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರ್ ರವರಿಗೆ ಬೆದರಿಕೆ ಕರೆ ಮಾಡುತ್ತಿದ್ದಾರೆ ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿ ತಿಳಿದಿದ್ದೇನೆ, ಯಾವುದೇ ಕಾರಣಕ್ಕೂ ಸಂಚಿಕೆ ನಿಲ್ಲಿಸದಿರಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿದರು. ದೇಶ ಮತ್ತು ವಿದೇಶದ ಜನಮನ್ನಣೆಗಳಿಸಿದ ಅಪ್ರತಿಮ ಮಹಾನ್ ನಾಯಕ ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ಅವರು ಬರೆದ ಸಂವಿಧಾನದ ಅಡಿಯಲ್ಲಿ ನಾವು ನೀವು ಒಂದಾಗಿ ಸಮಾಜದ ಮುಖ್ಯ ವಾಹಿನಿಯಲ್ಲಿ ಸಮಾನತೆಯೊಂದಿಗೆ ಬದುಕಲು ಸಾಧ್ಯವಾಗಿದೆ, ಅಂತಹ ಧೀಮಂತ ಮಹಾನ್ ನಾಯಕರ ಎಲ್ಲಾ ಧರ್ಮದ ಜನರು ತಪ್ಪದೇ ಈ ಧಾರವಾಹಿಯನ್ನು ವೀಕ್ಷಿಸಿ ಎಂದು ಕರೆ ನೀಡಿದರು. ಇದೇ ಸಂಧರ್ಭದಲ್ಲಿ ಕೋರೋನಾ ವಾರಿಯಸ್೯ಗಳಾದ ತಾಲ್ಲೂಕು ವೈದ್ಯಾಧಿಕಾರಿ ಡಾ. ವೀರಭದ್ರಪ್ಪ, ಪುರಸಭೆ ಆರೋಗ್ಯಾಧಿಕಾರಿ ಹರಿ ಪ್ರಸಾದ್ ಮತ್ತು ಪುರಸಭೆ ಸ್ವಚ್ಛತಾ ಮೇಲ್ವಿಚಾರಕ ಮಾದೇಶ್ ರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಡಾ. ವೀರಭದ್ರಪ್ಪ, ಮಾಜಿ ಪುರಸಭೆ ಸದಸ್ಯ ಮೆಹಬೂಬ್ ಪಾಷ, ಕೃಷ್ಣ, ಪುರಸಭೆ ಆರೋಗ್ಯನಿರೀಕ್ಷಕ ಹರಿಪ್ರಸಾದ್, ಮಾದೇಶ್, ಭೀಮ ಬಳಗದ ಎಂ. ಎಲ್. ನಿತೇಶ್, ಮಂಜುನಾಥ್, ವಿಕಾಶ್ ದೇವ್, ನಾಗೇಂದ್ರ ಗಾಳ್ಸ್, ಅಕ್ಷಯ್, ಪೃಥ್ವಿರಾಜ್, ಪತ್ರಕರ್ತ ಎಚ್. ಡಿ. ದೇವಪ್ರಸಾದ್, ಸಿದ್ದಾರ್ಥ, ಅಭಿ, ದೇವು ಸೇರಿದಂತೆ ಅಪಾರ ಭೀಮ ಅಭಿಮಾನಿಗಳು ಭಾಗವಹಿಸಿದ್ದರು.

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version