ಕೋಲಾರ

ಹಣ ಬಿಡುಗಡೆಯಾಗಿ ಅರು ತಿಂಗಳಾದ್ರೂ ನಡೆಯದ ವಸತಿ ನಿಲಯದ ಕಾಮಗಾರಿ..!

Published

on

ಕೋಲಾರ: ಹಣ ಬಿಡುಗಡೆಯಾಗಿ 6 ತಿಂಗಳಾದ್ರೂ ವಿದ್ಯಾರ್ಥಿ ನಿಲಯಗಳ ಕಾಮಗಾರಿ ಮಾಡದೇ 81 ಲಕ್ಷ ಹಣವನ್ನು ಬ್ಯಾಂಕ್ ನಲ್ಲಿಟ್ಟು ದಿನಗಳು ಏಣಿಸುತ್ತಿದ್ದಾರೆ ಕಾಮಗಾರಿ ಗುತ್ತಿಗೆ ಪಡೆದ ಸಂಸ್ಥೆ, ನಿಧಾನವಾಗಿ ಶೈಕ್ಷಣಿಕ ತರಗತಿಗಳು ಪ್ರಾರಂಭವಾಗುತ್ತಿದ್ದ ದೂರದ ಊರುಗಳಿಂದ ಬರುವ ವಿಧ್ಯಾರ್ಥಿಗಳು ಉಳಿದುಕೊಳ್ಳಲು ಜಾಗವಿಲ್ಲದೇ ಮತ್ತೆ ಊರಿಗೆ ಹಿಂತಿರುಗುವ ಸ್ಥಿತಿಯಲ್ಲಿದ್ದಾರೆ, ಇಂತಹದೊಂದು ಕರ್ಮಕಾಂಡವನ್ನು ಜಿಲ್ಲಾ ಪಂಚಾಯತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್ ಪ್ರಸಾದ ಭೇಟಿ ನೀಡಿದ ವೇಳೆ ಬಯಲಿಗೆ ಬಂದಿದೆ. ಮಂದಗತಿಯಲ್ಲಿ ಸಾಗುತ್ತಿದ್ದ ವಿದ್ಯಾರ್ಥಿ ನಿಲಯಗಳ ಕಾಮಗಾರಿಯನ್ನು ಕೋಲಾರ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್ ಪ್ರಸಾದ್ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು, ನಗರದ ಗೌರೀಪೇಟೆ ಬಳಿ ಇರುವ ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯ ಮುಸಾಫರ್ ಖಾನ್ ಮತ್ತು ಸಂತೇ ಗೇಟ್ ಹಾಸ್ಟೆಲ್ ಗಳನ್ನು ಉನ್ನತಿಕರಣಗೊಳಿಸುತ್ತಿದ್ದು ಕರ್ನಾಟಕ ಗ್ರಾಮೀಣಾಭಿವೃದ್ದಿ ನಿಗಮ ಸಂಸ್ಥೆಗೆ 81 ಲಕ್ಷ ರೂಗಳ ಕಾಮಗಾರಿ ನೀಡಲಾಗಿದೆ. ಇನ್ನು ಕ್ರಿಡಲ್ ಸಂಸ್ಥೆಯವರು ಪರವಾನಗೆ ಇಲ್ಲದ ಗುತ್ತಿಗೆ ದಾರನ ಮೂಲಕ ಕಾಮಗಾರಿಯನ್ನು ನಡೆಸುತ್ತಿದ್ದು ಹಂತ ಹಂತವಾಗಿ ಕಾಮಗಾರಿ ನಡೆಸುವ ಬದಲು ಮನಸ್ಸೋ ಇಚ್ಚೆ ಕಾಮಗಾರಿ ನಡೆಸುತ್ತಿದ್ದಾರೆ ಕ್ರಿಡಲ್ ಅಧಿಕಾರಿ ಮಂಜುನಾಥ್ ಕಾಮಗಾರಿ ಪರಿಶೀಲನೆ ಹಾಜರಾಗದೇ ಮೂರನೇ ವ್ಯಕ್ತಿಯ ಮೂಲಕ ಮಾಹಿತಿ ನೀಡಲು ಮುಂದಾಗಿದ್ದಾರೆ . ಇವರ ಧಿವ್ಯ ನಿರ್ಲಕ್ಷವೇ ಹಾಸ್ಟೆಲ್ ಗಳ ಈ ದುಸ್ಥಿತಿಗೆ ಕಾರಣ ಎಂದು ಜಿಲ್ಲಾ ಪಂಚಾಯತಿ ಸಮಾಜಿಕ ಸ್ಥಾಯಿ ಸಮಿತಿ ಆಧ್ಯಕ್ಷ ಅರುಣ್ ಪ್ರಸಾದ ಅಧಿಕಾರಿಗಳನ್ನು ತ್ರೀವ ತರಾಟೆಗೆ ತೆಗೆದುಕೊಂಡರು. ಕ್ರೀಡಲ್ ಸಂಸ್ಥೆಯರು ಕಾಮಗಾರಿ ಪ್ರಾರಂಭಿಸದೇ 18/002/2020 ರಂದು ಎರಡು ಹಾಸ್ಟೆಗಳ ದುರಸ್ಥಿ ಕಾಮಾಗಾರಿಗಳಿಗೆ 81 ಲಕ್ಷ ಹಣವನ್ನು ತಮ್ಮ ಖಾತೆಯಲ್ಲಿ ಉಳಿಸಿಕೊಂಡಿದ್ದಾರೆಯೇ ವಿನಃ ಇದುವರೆಗೂ 5 ಲಕ್ಷ ರೂಪಾಯಿ ಹಣದ ಕಾಮಗಾರಿ ಪ್ರಾರಂಭಿಸಿಲ್ಲ. ಎಸ್.ಸಿ / ಎಸ್.ಟಿ ಹಾಸ್ಟೆಲ್ ಗಳ ದುರಸ್ಥಿ ಕಾಮಾರಿಗಳನ್ನು ಖಾತೆಯಲ್ಲಿ ಹಣ ಇಟ್ಕೊಂಡು ಸರಿಯಾಗಿ ಮಾಡದೇ ಇದ್ದಲ್ಲಿ ಕಳಪೆ ಆದಲ್ಲಿ ಕಾಮಗಾರಿಯನ್ನೇ ಮಾಡದೇ ಇದ್ದಲ್ಲಿ ಅವರ ಕರ್ನಾಟಕ ಗ್ರಾಮೀಣಾಭಿವೃದ್ದಿ ನಿಗಮ ಸಂಸ್ಥೆ ಮೇಲೆ ಯಾಕೆ ಪ್ರಕರಣ ದಾಖಲು ಮಾಡಬಾರದು ಎಂದು ಪ್ರಶ್ನಿಸಿದರಲ್ಲದೇ,ಬಡಮಕ್ಕಳು ಭವಿಷ್ಯ ರೂಪಿಸಿಕೊಳ್ಳುವುದರ ಜೊತೆಗೆ ಉಳಿದುಕೊಳ್ಳಲು ಸರಿಯಾದ ಹಾಸ್ಟೆಲ್ ವ್ಯವಸ್ಥೆ ಮಾಡೋದಿಲ್ಲ ಅಂದ ಮೇಲೆ ಕೆಲಸ ಯಾಕೆ ನೀವು ತಗೋತೀರಾ ಎಂದು ಕ್ರಿಡಲ್ ಸಂಸ್ಥೆಯ ವಿರುದ್ದ ಕಿಡಿ ಕಾರಿದರು. ಇನ್ಮುಂದೆ ಪಂಚಾಯತ್ ರಾಜ್ ಗ್ರಾಮೀಣಾಭಿವೃದ್ದಿ ನಿಗಮ ಅಥವಾ ಬೇರೆ ಎಜೆಂನ್ಸಿಗಳಿಂದ ಕೆಲಸಗಳನ್ನು ಹಿಂತೆಗೆದುಕೊಂಡು ಕ್ರಿಡಲ್ ಸಂಸ್ಥೆಗೆ ನೀಡುವ ಉದ್ದೇಶವೇನಾದರು ಇದ್ದಲ್ಲಿ ಜಿಲ್ಲಾಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಕ್ರಿಡಲ್ ಸಂಸ್ಥೆಗೆ ಯಾವುದೇ ಕೆಲಸ ಕಾರ್ಯಗಳನ್ನು ನೀಡಬಾರದು ಎಂದು ಜಿಲ್ಲಾಧಿಕಾರಿಗಳಿಗೆ ಸಮಾಜಿಕ ನ್ಯಾಯ ಸಮಿತಿ ವತಿಯಿಂದ ಮನವಿ ಮಾಡಿದರು. ಕ್ರಿಡಲ್ ಸಂಸ್ಥೆಯವರು ಇದುವರೆಗೂ ಮಾಡಿರೂ ಎಲ್ಲಾ ಕೆಲಸಗಳು ಗುಣಮಟ್ಟವನ್ನ ಕಾಪಾಡಿಕೊಳ್ಳುವದರಲ್ಲಿ ವಿಫಲರಾಗಿದ್ದಾರೆ,ಹಿಂದುಳಿದವರಿಗೆ ಬಡವರಿಗೆ ಅನ್ಯಾಯ ಹಾಗುವ ನಿಟ್ಟಿನಲ್ಲಿ ಕ್ರಿಡಲ್ ಸಂಸ್ಥೆ ಇದೆ ಇದು ಮೊದಲನೇ ಹಂತ ಇನ್ನು 99 ಹಂತಗಳು ಕ್ರಿಡಲ್ ಸಂಸ್ಥೆಯವರು ವಿರುದ್ದ ಹತ್ತುವುದಿದೆ ಇದು ಹೀಗೆ ಮುಂದುವರೆದಲ್ಲಿ ಮುಂದಿನ ದಿನಗಳಲ್ಲಿ ಕ್ರಿಡಲ್ ಸಂಸ್ಥೆಯವರ ವಿರುದ್ದ ಜಿಲ್ಲೆಯಾದ್ಯಂತ ಉಗ್ರವಾದ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ವರದಿ-ಬೆಟ್ಟಪ್ಪ ಎಕ್ಸ್ ಪ್ರೆಸ್ ಟಿವಿ ಕೋಲಾರ..

Click to comment

Trending

Exit mobile version