ತಿಪಟೂರು

ಸದಾಶಿವ ಆಯೋಗ ವರದಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ..!

Published

on

ತಿಪಟೂರು: ಸದಾಶಿವ ಆಯೋಗ ವರದಿ ಜಾರಿಗೆ ಒತ್ತಾಯಿಸಿ ಮತ್ತು ಜೀ ಕನ್ನಡ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ಅವರಿಗೆ ಜೀವ ಬೆದರಿಕೆ ಹಾಕಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ತಿಪಟೂರು ಉಪವಿಭಾಗಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ನಂತರ ಪ್ರತಿಭಟನಾಕಾರರು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾದಾಸಾಹೇಬ್ ಎನ್. ಮೂರ್ತಿ ಸ್ಥಾಪಿತ ಜಿಲ್ಲಾಧ್ಯಕ್ಷ ಪಿ.ಎನ್ ರಾಮಯ್ಯ, ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಠ ಜಾತಿಗಳು ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಜಾರಿಗೊಳಿಸಬೇಕು. ಪರಿಶಿಷ್ಠ ಜಾತಿ ಸಮುದಾಯದ ಸಹಜಸ್ಥಿತಿ ಅರಿಯುವ ನ್ಯಾಯ ಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನ ಯಥಾವತ್ತಾಗಿ ಅಂಗೀಕರಿಸಿ ಒಳಮಿಸಲಾತಿ ನೀಡಿ ತುಳಿತಕ್ಕೆ ಒಳಾಗಾದ ಜಾತಿ ಜನಾಂಗಗಳಿಗೆ ನ್ಯಾಯ ನೀಡಬೇಕು ಎಂದು ಹಲವಾರು ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಾ ಬಂದಿದ್ದು ವರದಿ ಜಾರಿಯಾಗದಿರುವುದು ಸರ್ಕಾರಗಳ ದಿವ್ಯ ನಿರ್ಲಕ್ಷ ಪ್ರತೀಕವಾಗಿದೆ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಒಳಮೀಸಲಾತಿ ಬಗ್ಗೆ ಚಿಂತಿಸುವ ಕಾಂಗ್ರೇಸ್ ಬಿ.ಜೆ.ಪಿ. ಜೆಡಿಎಸ್ ಪಕ್ಷದ ನಾಯಕರುಗಳು ಚುನಾವಣೆ ನಂತರ ದಲಿತರನ್ನ ಮರೆಯುತ್ತಾರೆ . ಒಳಮೀಸಲಾತಿಯ ಬಗ್ಗೆ ಜನರಲ್ಲಿ ಗೊಂದಲ ಮೂಡಿಸುತ್ತಿರುವ ರಾಜಕಾರಣಿಗಳಿಗೆ ಸುಪ್ರೀಂ ಕೋರ್ಟ್ ಒಳಮೀಸಲಾತಿಯ ಅಗತ್ಯತೆ ಮತ್ತು ಈ ಬಗ್ಗೆ ರಾಜ್ಯ ಸರ್ಕಾರಗಳು ಗಮನಹರಿಸುವಂತೆ ತಿಳಿಸಿರುವುದು. ನ್ಯಾಯಸಮ್ಮತವಾದ ಒಳಮೀಸಲಾತಿ ಆದ್ದರಿಂದ ಹೋರಾಟಕ್ಕೆ ಇಬ್ಬೂ ನೀಡುವಂತಿದ್ದು ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಸರ್ಕಾರ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೊಳಿಸಬೇಕು ಎಂದು ಎಚ್ಚರಿಸಿದರು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಂವಿದಾನ ಶಿಲ್ಪಿ ಮಾಹಾನ್ ಮಾನವತಾವಾದಿ ಡಾ\\ಬಿ.ಆರ್ ಅಂಬೇಡ್ಕರ್ ಜೀವನ ಕುರಿತಾದ ಮಹಾನಾಯಕ ದಾರವಾಹಿಯನ್ನು ನಿಲ್ಲಿಸಬೇಕು ಎಂದು ಜೀ಼ ಕನ್ನಡ ವಾಹಿನಿ ಮುಖ್ಯಸ್ತರಾದ ರಾಘವೇಂದ್ರ ಹುಣಸೂರುರವರಿಗೆ ಸೂಕ್ತ ರಕ್ಷಣೆ ನೀಡಬೇಕು ಕುಕೃತ್ಯದ ಮೂಲಕ ಬೆದರಿಕೆ ಹಾಕಿ ದಾರವಾಹಿ ಪ್ರಸಾರಕ್ಕೆ ಅಡ್ಡಿಯುಂಟ್ಟು ಮಾಡುತ್ತಿರುವ ವ್ಯಕ್ತಿಗಳನ್ನ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಯಾವುದೆ ಅಡ್ಡಿ ಆತಂಕವಿಲ್ಲದತೆ ಪ್ರಸಾರವಾಗಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ದ.ಸಂ ಸ ತಾಲ್ಲೋಕು ಉಪಾಧ್ಯಕ್ಷ ಗೌಡನಕಟ್ಟೆ ಅಶೋಕ್ ಮಾತನಾಡಿ ತಿಪಟೂರು ನಗರದ ಹೃದಯಭಾಗವಾದ ಪ್ರವಾಸಿ ಮಂದಿರ ವೃತ್ತಕ್ಕೆ ಸಂವಿಧಾನ ಶಿಲ್ಪಿ ಡಾ//ಬಿ.ಆರ್ ಅಂಬೇಡ್ಕರ್ ಹೆಸರು ನಾಮಕರಣ ಮಾಡಿ ಪುತ್ತಳಿ ಸ್ಥಾಪಿಸ ಬೇಕು ಎಂದು ಒತ್ತಾಯಿಸಿದರು. ಸಭೆಯಲ್ಲಿ ದ.ಸಂ.ಸ ಜಿಲ್ಲಾ ಕಾರ್ಯದರ್ಶಿ ಪುಟ್ಟಸ್ವಾಮಿ, ವಿಭಾಗೀಯ ಅಧ್ಯಕ್ಷ ಡಿ.ಕುಮಾರ್ , ಜಿಲ್ಲಾ ದಲಿತ ಕಾರ್ಮಿಕ ಒಕ್ಕೂಟದ ಅಧ್ಯಕ್ಷ ಹೊನ್ನಪ್ಪ ಗ್ಯಾರಘಟ್ಟ, ಮುಖಂಡರಾದ ಕುಂದೂರು ಗವಿರಂಗಯ್ಯ, ಗಂಗಣ್ಣ ಈರಲಗೆರೆ, ತಿಮ್ಮಪ್ಪ, ಮಂಜುನಾಥ, ಕೃಷ್ಣಪ್ಪ ರವಿಕುಮಾರ್ ಜಿ.ಡಿ ಲಕ್ಷ್ಮಣ್ , ಪ್ರಕಾಶ್ ಮಂಜುನಾಥ್ ,ಉಪಸ್ಥಿತರಿದರು,ಉಪವಿಭಾಗಾಧಿಕಾರಿಗಳ ಪರವಾಗಿ ಉಪವಿಭಾಗಾಧಿಕಾರಿಗಳ ಕಚೇರಿ ಶಿರಸ್ತೆದಾರ ವಿನಯ್ ಕುಮಾರ್ ಗೆ ಮನವಿ ಸ್ವೀಕರಿಸಿದರು.

ವರದಿ- ಸಿದ್ದೇಶ್ವರ ಸಿಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.

Click to comment

Trending

Exit mobile version