ಮಂಡ್ಯ

ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗಳ ಧೋರಣೆಯನ್ನು ಖಂಡಿಸಿ ಪುರಸಭೆ ಸದಸ್ಯರುಗಳಿಂದ ಪ್ರತಿಭಟನೆ..!

Published

on

ಮಲವಳ್ಳಿ: ಮಳವಳ್ಳಿ ಪುರಸಭೆಯ ಸಭೆಗಳನ್ನು ಮೂರು ಬಾರಿ ಮುಂದೂಡಿರುವ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗಳ ಧೋರಣೆಯನ್ನು ಖಂಡಿಸಿ ಮಳವಳ್ಳಿ ಪುರಸಭೆ ಸದಸ್ಯರುಗಳು ಮಳವಳ್ಳಿ ಪುರಸಭೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಮಳವಳ್ಳಿ ಪುರಸಭೆಯ ಚುನಾಯಿತರಾದ ಪಕ್ಷಾತೀತವಾಗಿ ಸುಮಾರು 15 ಮಂದಿ ಸದಸ್ಯರು ಆಡಳಿತಾಧಿಕಾರಿ ವಿರುದ್ದ ಘೋಷಣೆ ಕೂಗಿದರು.ಇನ್ನೂ ಪುರಸಭೆ ಸದಸ್ಯ ನಂದಕುಮಾರ ಮಾತನಾಡಿ, ಕಳೆದ ಮೂರು ಭಾರಿ ಸಭೆಗಳನ್ನು ಮುಂದೂಡಿದ್ದು, ಇದರಿಂದ. ವಾರ್ಡುಗಳ ಮೂಲಭೂತ ಸೌಕರ್ಯಗಳು ತೊಂದರೆಯಾಗುತ್ತಿದೆ. ಜನರು ಅಧಿಕಾರಿಗಳನ್ನು ಕೇಳುವುದಿಲ್ಲ. ಸದಸ್ಯರನ್ನು ಕೇಳುತ್ತಾರೆ.ಇದಲ್ಲದೆ ನಾವು ಗೆದ್ದು ಒಂದೂವರೆ ವರ್ಷವಾದರೂ ನಮಗೆ ಆಡಳಿತ ನೀಡಿಲ್ಲ, ಈ ಮದ್ಯೆ ಆಡಳಿತಾಧಿಕಾರಿಗಳು ಪುರಸಭೆಯಲ್ಲಿನ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೆ ಇರುವುದು ಬೇಸರ ಸಂಗತಿ ಎಂದರು. ಈ ಕೂಡಲೇ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದರು.ಇನ್ನೂ ಉಪ ತಹಸೀಲ್ದಾರ್ ಚನ್ನವೀರಭದ್ರಪ್ಪ ರವರಿಗೆ ಪುರಸಭೆ ಸದಸ್ಯರುಗಳು ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಮಾಜಿ ಪುರಸಭಾಧ್ಯಕ್ಷ ದೊಡ್ಡಯ್ಯ, ಸದಸ್ಯರುಗಳಾದ. ಇಂದ್ರಮ್ಮದೊಡ್ಡಯ್ಯ, ವಡ್ಡರಹಳ್ಳಿ ಸಿದ್ದರಾಜು, ನೂರಾಲ್ಲಾ, ಕುಮಾರ, ಪ್ರಶಾಂತ, ನಾಗೇಶ್ , ಮಣಿನಾರಾಯಣ, ಪ್ರಮೀಳ, ಬಿಜೆಪಿ ಪುರಸಭೆ ಸದಸ್ಯ ರವಿ, ಶಿವಸ್ವಾಮಿ, ಸೇರಿದಂತೆ ಮತ್ತಿತ್ತರರು ಇದ್ದರು.

ವರದಿ- ಎ ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version