ತಿಪಟೂರು

ಧರ್ಮದ ಹಂಗಿಲ್ಲದೇ ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡುತ್ತಿರುವ ಮುಸ್ಲಿಂ ಬಾಂಧವರು..!

Published

on

ತಿಪಟೂರು: ಕಳೆದ 5 ದಿನಗಳಿಂದ ನಡೆದ ನಿರಂತರ ಅಂತಿಮ ಸಂಸ್ಕಾರಗಳಲ್ಲಿ ತಿಪಟೂರು, ತುಮಕೂರು ನಗರದ ವಾಸಿಗಳು ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ಯಾವುದೇ ಪ್ರತಿಫಲಾಪೆಕ್ಷೇ ಇಲ್ಲದೇ ಮುಸ್ಲಿಂ ಬಾಂದವರು ಮಾಡುತ್ತಿದ್ದಾರೆ.ಈ ಸೇವೆಯಲ್ಲಿ ತುಮಕೂರು ಜನಸೇವಾ ಟ್ರಸ್ಟ್ ಅಧ್ಯಕ್ಷ ಶಮಿಲ್ ಅಹಮದ್, ಸುಹೈಲ್ ಅಹಮದ್, ಕೆ.ಎಂ.ಡಿ.ಎಸ್ ತುಮಕೂರು ನಗರ ಉಪಾಧ್ಯಕ್ಷ ಅಂಜುಮ್, ನಾಸಿರ್, ಮುದಾಸಿರ್ ಮತ್ತು ಅಪ್ಸರ್ ತುಮಕೂರು, ಹೆಬ್ಬಾಕ ಹಾಗೂ ಎಸ್.ಐ.ಟಿ ಮುಂತಾದ ಕಡೆ ಶವಸಂಸ್ಕಾರ ಮಾಡಿದ್ದಾರೆ.ಮಂಗಳವಾರ ತಿಪಟೂರಿನ ಅಂತ್ಯಸಂಸ್ಕಾರ ಕಾರ್ಯದಲ್ಲಿ ಅಲ್ಲಿನ ನಮ್ಮ ಸನ್ಮಿತ್ರರಾದ ತಿಪಟೂರಿನ ಸಮಾಜ ಸೇವಕ ಹಾಗೂ ಡಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸೈಫುಲ್ಲಾ ಸಾಬ್ ಅವರ ತಂಡ ಸೇವೆಗೆ ಅವಕಾಶ ಮಾಡಿಕೊಟ್ಟ ಮೃತರ ಕುಟುಂಬದವರಿಗೆ ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಹಾಗು ಜಿಲ್ಲಾ ವೈದ್ಯಾಧಿಕಾರಿಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದ್ದಾರೆ.ಈ ಬಗ್ಗೆ ತಿಳಿಸಿದ ಸೈಪುಲ್ಲಾ ಸಾಬ್ ಇಲ್ಲಿ ಈಶ್ವರ-ಅಲ್ಲ, ರಾಮ-ರಹೀಮ-ಏಸು ಎಲ್ಲರೂ ಒಂದೇ ಶವಸಂಸ್ಕಾರಕ್ಕೆ ಯಾವುದೇ ಜಾತಿಯ ಅಡ್ಡಿಯೂ ಬರುವುದಿಲ್ಲ ಮತ್ತು ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಅಂತ್ಯ ಸಂಸ್ಕಾರಕ್ಕೆ ಬೇಕಿರುವ ಬಟ್ಟೆ, ಬ್ಯಾಗ್, ಕೀಟ್ಸ್ ನಮ್ಮ ಸಂಘದಿಂದ ಉಚಿತವಾಗಿ ಕೊಡುತ್ತಾ ಸರ್ಕಾರಿ ಅಧಿಕಾರಿಗಳ ಬೆಂಬಲದಿಂದ ನಮ್ಮನ್ನ ಸದಾ ಸಮಾಜ ಸೇವೆಯಲ್ಲಿ ಬೆಂಬಲಿಸುತ್ತಾ ಬಂದಿರುವ ಎಲ್ಲಾ ಹಿರಿಯ ಮಾರ್ಗದರ್ಶಕನ, ಆಶೀರ್ವಾದದಿಂದ ಉಚಿತ ಸೇವೆ ಸಲ್ಲಿಸುತ್ತಿರುವ ನಮಗೆ ಅವಕಾಶ, ಬೆಂಬಲ ನೀಡಿ ಎಂದು ತಿಳಿಸಿದರು. ಈ ಅಂತ್ಯ ಸಂಸ್ಕಾರಕ್ಕೆ ತಿಪಟೂರಿನ ತಾಸಿಮ್, ಆಸೀಫ್, ಅಬ್ದುಲ್ ಸುಹಾನ್, ಅಬ್ದುಲ್ ಮನ್ನಾರ್ ಮತ್ತಿತರರು ಈ ಕಾರ್ಯದಲ್ಲಿ ಕೈಜೋಡಿಸಿದ್ದರು.

ಸಿದ್ದೇಶ್ವರ ಸಿಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.

Click to comment

Trending

Exit mobile version