ಮಂಡ್ಯ

ಗ್ರಾಮಗಳಲ್ಲಿ ಹೆಚ್ಚಾಗ್ತಿಯಿದೆ ಚಿರತೆ ಹಾವಳಿ-ಕಂಗಾಲಾದ ಗ್ರಾಮಸ್ಥರು..!

Published

on

ಮಳವಳ್ಳಿ: ಚಿರತೆ ದಾಳಿ ನಿಯಂತ್ರಣ ಮಾಡಲು ಅರಣ್ಯ ಇಲಾಖೆ ಹಾಗೂ ತಾಲ್ಲೂಕು ಆಡಳಿತ ವಿಫಲವಾಗಿದೆ ಎಂದು ಬಿಎಸ್ ಪಿ. ರಾಜ್ಯಾಧ್ಯಕ್ಷ. ಎಂ ಕೃಷ್ಣಮೂರ್ತಿ ಆರೋಪಿಸಿದರು.ಮಳವಳ್ಳಿ ಪಟ್ಟಣದ ಬಿಎಸ್ ಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ತಾಲ್ಲೂಕಿನಲ್ಲಿ ಅರಣ್ಯ ಇಲಾಖೆಯಾಗಲಿ, ವೈಡ್ ಲೈಫ್ ಯಾಗಲಿ ಸರಿಯಾಗಿ ಕೆಲಸ ನಿರ್ವಹಿಸದ ಕಾರಣ ಡಿ.ಹಲಸಹಳ್ಳಿ, ತಾಳಹಳ್ಳ, ಬಸವನಪುರ, ಸೇರಿದಂತೆ ಹಲವು ಗ್ರಾಮದಲ್ಲಿ ನಿರಂತರವಾಗಿ ಚಿರತೆದಾಳಿಗೆ ಜಾನುವಾರುಗಳು ಬಲಿಯಾಗುತ್ತಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.ಕೂಡಲೇ ಪರಿಹಾರ ನೀಡಬೇಕು, ಜೊತೆಗೆ ಚಿರತೆಯನ್ನು ಬಂಧಿಸಬೇಕು, ನಾಡಿಗೆ ಬರದಂತೆ ಮುಂಜಾಗ್ರತಾ ವಹಿಸಬೇಕು ಇಲ್ಲದಿದ್ದರೆ ಉಗ್ರಹೋರಾಟ ನಡೆಸುವುದಾಗಿ ತಿಳಿಸಿದರು. ಇನ್ನೂ ಇಂದು ಡಿಸಿಎಂ ಡಾ. ಅಶ್ವಥ್ ನಾರಾಯಣ್ ರವರು ನೆಟ್ಕಲ್ ಗ್ರಾಮದಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ. ಈ ಭಾಗದ ರೈತರಿಗೆ ತೊಂದರೆಯಾಗಲಿದ್ದು, ಇದರಿಂದ ರೈತರ ಜಮೀನಿಗೆ ಅಂತರ್ಜಲ ಕೊರೆತೆಯಾಗಲಿದ್ದು ಅವರಿಗೆ ಪರ್ಯಾಯ ಮಾರ್ಗ ತೋರಿಸಬೇಕು, ಜೊತೆಗೆ ತಾಲ್ಲೂಕಿನ ಜನತೆಗೂ ಸಹ ಕುಡಿಯುವ ನೀರು ನೀಡುವ ಯೋಜನೆ ನೀಡಬೇಕು ಎಂದು ಬಿಎಸ್ ಪಿ ಪಕ್ಷ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಸತೀಶ್, ಕೃಷ್ಣ, ರಾಜಶೇಖರ್, ನಾಗೇಂದ್ರಕುಮಾರ್, ಕಮಲ್ ನಾಸೀರ್ ಶರೀಫ್, ಶಿವ ಮೂರ್ತಿ ಚಿಕ್ಕ ಸಿದ್ದಯ್ಯ, ಸೇರಿದಂತೆ ಮತ್ತಿತ್ತರರು ಇದ್ದರು.

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version