ಸಿಂಧನೂರು

ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ- ಎಸ್.ಪಿ. ಮೆಚ್ಚುಗೆ..!

Published

on

ಸಿಂಧನೂರು: ತಾಲೂಕಿನ ಆರ್. ಹೆಚ್. ಕ್ಯಾಂಪ್ 2 ರಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಓಂ ಪ್ರಕಾಶ್ ತಂದೆ 43 ವರ್ಷದ ಬೋನೋ ಮಂಡಲ್ ವ್ಯಕ್ತಿಯು ಗಾಂಜಾ ಮಾರಾಟ ಮಾಡುತ್ತಿದ್ದ ಎಂಬಾ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿ ಗಾಂಜಾವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. 607 ಗ್ರಾಂ ಗಾಂಜಾ ಸಿಕ್ಕಿದ್ದು, ಸದರಿ ಕಾರ್ಯಾಚರಣೆಯಲ್ಲಿ ಎಸ್.ಪಿ. ಶ್ರೀ ನಿಕ್ಕಮ್ ಪ್ರಕಾಶ ಅಮ್ರಿತ್, ಹೆಚ್ಚುವರಿ ಎಸ್.ಪಿ.ಹರಿಬಾಬು, ಡಿ.ವೈ.ಎಸ್.ಪಿ. ವಿಶ್ವನಾಥರಾವ್ ಕುಲಕರ್ಣಿ ಮಾರ್ಗದರ್ಶನದಲ್ಲಿ ಸಿ.ಪಿ.ಐ ಬಾಲಚಂದ್ರ ಲಕ್ಕಂ ಹಾಗೂ ಗ್ರಾಮೀಣ ಪೋಲಿಸ್ ಠಾಣೆಯ ಪಿ.ಎಸ್.ಐ ರಾಘವೇಂದ್ರ ನೇತೃತ್ವದಲ್ಲಿ ಪೋಲಿಸ್ ಸಿಬ್ಬಂದಿಗಳಾದ ಶೇಟೆಪ್ಪ, ದೇವರೆಡ್ಡಿ, ದ್ಯಾಮಣ್ಣ, ಜಾಕೀರ್ ರವರನ್ನೊಳಗೊಂಡಿರುವ ತಂಡವನ್ನು ರಚಿಸಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಚರಣೆಗೆ ರಾಯಚೂರು ಜಿಲ್ಲಾ ಪೋಲಿಸ್ ವರಿಷ್ಠ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವರದಿ- ಸೈಯದ್ ಬಂಧನವಾದ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Click to comment

Trending

Exit mobile version