Uncategorized

ಈರುಳ್ಳಿ ಬೆಳೆಗೆ ಹಳದಿ ರೋಗ- ರೈತರು ಕಂಗಾಲು..!

Published

on

ಬಾಗಲಕೋಟೆ: ಕಳೆದ ವರ್ಷ ಪ್ರವಾಹದಿಂದ ನಲುಗಿದ ರೈತ ಈ ವರ್ಷ ಕೋವಿಡ್ ಗೆ ಸಿಲುಕಿ ಸಂಕಷ್ಟ ಎದುರಿಸುತ್ತಿರುವಾಗಲೇ ಈರುಳ್ಳಿ ಬೆಳೆ ಕೈಗೆ ಬರುವ ಮುಂಚೆಯೇ ರೋಗಕ್ಕೆ ತುತ್ತಾಗಿ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಗ್ರಾಮಗಳಲ್ಲಿ ತಾಲೂಕಿನ ಮೆಟಗುಡ್ಡ, ನಿಂಗಾಪುರ, ಗುಲಗಾಲ ಜಂಬಗಿ, ಹಲಕಿ, ಬೊಮ್ಮನ ಬುದ್ನಿ, ಸೇರಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮಳೆ ಹೆಚ್ಚಾಗಿ ಬಿಸಿಲು ಕಾಣದೇ ಮೋಡ ಕವಿದ ವಾತಾವರಣಕ್ಕೆ ಸಾವಿರಾರು ಹೆಕ್ಟೇರು ಪ್ರದೇಶದಲ್ಲಿ ರೈತರ ಹೊಲದಲ್ಲಿ ಬೆಳೆದ ಈರುಳ್ಳಿ ಬೆಳೆ ಹಳದಿ ರೋಗಕ್ಕೆ ತುತ್ತಾಗಿ ಸಂಪೂರ್ಣ ನಾಶವಾಗಿದೆ. ಈ ಭಾಗದ ಸುತ್ತಮುತ್ತಲಿನ ಗ್ರಾಮೀಣ ಭಾಗದಲ್ಲಿ ಬಹುತೇಕ ರೈತರು ಪ್ರತಿ ವರ್ಷ ಜೂನ್ ತಿಂಗಳಲ್ಲಿ ಈರುಳ್ಳಿ ಬಿತ್ತನೆ ಮಾಡಿ ಬೆಳೆಗಾಗಿ ಸಾಕಷ್ಟು ಶ್ರಮ ವಹಿಸಿ ಒಳ್ಳೆಯ ಬೆಳೆ ಬರಲಿ ಎಂದು ಕಾಳಜಿ ವಹಿಸುತ್ತಿದ್ದರು. ಬಹುತೇಕ ಈರುಳ್ಳಿಗೆ ಹಳದಿ ರೋಗ ಕಾಡುತ್ತಿದೆ ಕಳೆದ ವರ್ಷ ರಾಜ್ಯದಲ್ಲಿ ಪ್ರವಾಹ ಉಂಟಾಗಿ ಈರುಳ್ಳಿ ಬೆಳೆ ಹಾನಿಯಾಗಿತ್ತು. ಈ ವರ್ಷವಾದರು ಈರುಳ್ಳಿ ಬೆಳೆ ರೈತರ ಕಣ್ಣಿರು ಒರೆಸಲಿದೆ ಎನ್ನುವ ಭರವಸೆ ಹೊಂದಿದ್ದರು. ಎಷ್ಟೋ ಔಷಧಿ ಸಿಂಪಡಣೆ ಮಾಡಿದರೂ ಹತೋಟಿಗೆ ಬಾರದೆ ರೈತ ಕಂಗಾಲಾಗಿದ್ದಾನೆ. ಈರುಳ್ಳಿ ಬೆಳೆ ಉತ್ತಮವಾಗಿಯೇ ಬಂದಿತು. ಆದ್ರೆ ಕಳೆದ 15 ದಿನಗಳಿಂದ ಬೆಳೆಗೆ ಹಳದಿ ರೋಗಕ್ಕೆ ತಗುಲಿ ಬೆಳೆ ಹಳದಿ ಹೊಂದಿ ಸಸಿಗಳು ಸಾಯುತ್ತಿವೆ. ತಾಲೂಕಿನ ಕೃಷಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ರೈತರ ತೋಟಕ್ಕೆ ತೆರಳಿ ಸೂಕ್ತ ಮಾರ್ಗದರ್ಶನ ಮಾಡುತ್ತಿಲ್ಲ ತಾಲೂಕಿನ ಬಹುತೇಕ ರೈತರ ಅಳಲಾಗಿದೆ. ತೋಟಗಳಿಗೆ ಕೃಷಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ತೆರಳಿ ಸೂಕ್ತ ಮಾರ್ಗದರ್ಶನ ಮಾಡಿ ಬೆಳೆ ನಿರ್ವಹಣೆ ಮಾಹಿತಿ ನೀಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಹಲವು ದಿನಗಳಿಂದ ಮಳೆ ಹೆಚ್ಚಾಗಿ ಕಷ್ಟದಲ್ಲಿರುವ ರೈತರನ್ನು ಯಾವ ಅಧಿಕಾರಿಗಳು ಭೇಟಿ ನೀಡಿಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ವಿವಿಧ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂಬುವುದು ರೈತರ ಒತ್ತಾಯವಾಗಿದೆ.

ವರದಿ :- ಶ್ಯಾಮ್ ತಳವಾರ ಎಕ್ಸ್ ಪ್ರೆಸ್ ಟಿವಿ ಮುಧೋಳ

Click to comment

Trending

Exit mobile version