ಬೆಂಗಳೂರು

ಸಿಸಿಬಿ ಕಚೇರಿಗೆ ತೆರಳುವ ಮುನ್ನ ಹೊಸ ಬಾಂಬ್ ಸಿಡಿಸಿದ ಸಂಬರಗಿ : ಏನು ಗೊತ್ತಾ ?

Published

on

ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ನಂಟು ಆರೋಪ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಇಂದು ಸಿಸಿಬಿ ಕಚೇರಿಗೆ ಹಾಜರಾಗಿದ್ದಾರೆ. ಸ್ಯಾಂಡಲ್ವುಡ್ ಡ್ರಗ್ಸ್ ಡೀಲ್ನಲ್ಲಿ ಹಲವು ಭಾಗಿಯಾಗಿದ್ದಾರೆ ಎಂದು ಹೇಳಿದ್ದ ಪ್ರಶಾಂತ್ಗೆ, ನಿನ್ನೆ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿ ಹಾಜರಾಗುವಂತೆ ಸೂಚನೆ ನೀಡಿದ್ರು. ಅದರಂತೆ ಇಂದು ಫೈಲ್ ಸಮೇತ ಆಗಮಿಸಿರುವ ಪ್ರಶಾಂತ್ ಸಿಸಿಬಿ ಅಧಿಕಾರಿಗಳಿಗೆ ಮಹತ್ವದ ದಾಖಲೆ ನೀಡಿದ್ದಾರೆ ಎನ್ನಲಾಗಿದೆ. ಮಾಧ್ಯಮಗಳ ಮುಂದೆ ಶಾಸಕ ಜಮೀರ್ ಅಹ್ಮದ್ ಹಾಗು ಸಂಜನಾ ಬಗ್ಗೆ ಹೇಳಿಕೆ ನೀಡಿ ಭಾರಿ ಸಂಚಲನ ಮೂಡಿಸಿತ್ತು. ಅದರಂತೆ ಇಂದು ಎನ್ಸಿಬಿ ಅಧಿಕಾರಿ ಗೌತಮ್ ಹಾಗು ಇನ್ಸ್ಪೆಕ್ಟರ್ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಇನ್ನು ಸಿಸಿಬಿ ಕಚೇರಿಗೆ ತೆರಳುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಸಂಬರಗಿ ಹೊಸ ಬಾಂಬ್ ಸಿಡಿಸಿದ್ದಾರೆ. ಸಚಿವರಾಗಿದ್ದ ವೇಳೆ ಕೊಲೊಂಬೊಗೆ ಯಾಕೆ ಹೋಗಿದ್ರು, ಮೂರು ದಿನಗಳ ಯಾರ ಜೊತೆ ಯಾಕೆ ಹೋಗಿದ್ರು ಎನ್ನುವ ದಾಖಲೆ ಇದೆ. ಈ ಫೈಲ್ನಲ್ಲಿ ಕೆಲವರ ಭವಿಷ್ಯ ಅಡಗಿದೆ ಎಂದು ತಿಳಿಸಿದ್ದಾರೆ…

ವರದಿ-ಸುಪ್ರಿಯಾ ಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version