ಬೆಂಗಳೂರು

ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ : ಮತ್ತೊಬ್ಬ ಆರೋಪಿ ಬಂಧಿಸಿದ ಸಿಸಿಬಿ..!

Published

on

ಬೆಂಗಳೂರು : ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.ಪ್ರಕರಣದ ಐದನೇ ಆರೋಪಿಯಾಗಿರುವ ವೈಭವ್ ಜೈನ್ರನ್ನ ಬಂಧಿಸಿ ವಿಚಾರನೆ ನಡೆಸಲಾಗುತ್ತಿದೆ. ಬೆಂಗಳೂರಿನ ಚಿನ್ನದ ವ್ಯಾಪಾರಿಯಾಗಿದ್ದ ವೈಭವ್, ರವಿಶಂಕರ್ ಹಾಗು ರಾಗಿಣಿ ಪಾರ್ಟಿಯಾಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಬಂಧಿತ ರವಿಶಂಕರ್ ಆಪ್ತ ವೈಭವ್ ಬೃಹತ್ ಪಾರ್ಟಿ ಆಯೋಜಿಸಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಎನ್ನಲಾಗಿದೆ. ರವಿಶಂಕರ್ ನೀಡಿದ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ವೈಭವ್ ಜೈನ್ರನ್ನ ಬಂಧಿಸಿದ್ದಾರೆ.ಇನ್ನು ಪ್ರಕರಣದ ಆರೋಪಿಗಳಾಗಿರುವ ಪ್ರಶಾಂತ್ ರಾಂಕ, ವೈಭವ್ ಜೈನ್,ರಾಹುಲ್ ಹಾಗು ರವಿಶಂಕರ್ನ್ನ ಸಿಸಿಬಿ ಅಧಿಕಾರಿಗಳು ಮೆಡಿಕಲ್ ಟೆಸ್ಟ್ಗೆ ಕರೆದುಕೊಂಡು ಹೋಗಿದ್ದಾರೆ. ಮಲ್ಲೇಶ್ವರಂ ಬಳಿ ಇರುವ ಕೆ.ಸಿ ಜೆನರಲ್ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆ ಬಳಿಕ ಮತ್ತೆ ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version