ಶಿರಾ

ಗಾಯತ್ರಿ ಜಲಾಶಯದಿಂದ ನೀರು ತಂದು ಯೋಜನೆಗೆ ಬಿ.ಸತ್ಯನಾರಾಯಣ ಅವರ ಹೆಸರು ಇಡಬೇಕು- ಮಾಜಿ ಜಿ.ಪಂ.ಸದಸ್ಯ ಸಿ.ಅರ್.ಉಮೇಶ್..!

Published

on

ಶಿರಾ: ದಿವಂಗತ ಬಿ.ಸತ್ಯನಾರಾಯಣ್ ಅವರು ಗಾಯಿತ್ರಿ ಜಲಾಶಯದಿಂದ ಶಿರಾಕ್ಕೆ ತರುವ ಕನಸಿತ್ತು. ಮತ್ತು ಯೋಜನ ಕಾಮಗಾರಿ ಆರಂಭ ಕಾಲದಲ್ಲಿ ಕೆಲವರು ಅಡಿ ಪಡಿಸಿದರು. ಸದ್ಯ ಭದ್ರಾ ಜಲಾಶಯದ ನೀರು ಬರುವುದರಿಂದ ಪೈಪ್ಲೈನ್ ಮೂಲಕ ನೀರು ತಂದು ಯೋಜನೆಗೆ ಸತ್ಯ ನಾರಾಯಣ್ ಅವರ ಹೆಸರು ನೀಡಬೇಕು.ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷದವರು ನಾಟಕ ಕಂಪನಿಗಳು ಈಸ್ಟ್ ಇಂಡಿಯಾ ಕಂಪನಿ, ಹಮಾಮ್ ಕಂಪನಿಗಳು.ಇವುಗಳು ಕ್ಷೇತ್ರದಲ್ಲಿ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ತಾಲ್ಲೂಕಿಗೆ ಹೇಮಾವತಿ ನೀರು ಹರಿಸುವ ವಿಚಾರದಲ್ಲಿ ಅಡ್ಡಿಪಡಿಸಿದ ಜಿಲ್ಲೆಯ ಬಿಜೆಪಿ ಮುಖಂಡರಾದ ಸೊಗಡು ಶಿವಣ್ಣ ಮತ್ತು ಹಾಲಿ ಜಿಲ್ಲಾ ಅದ್ಯಕ್ಷ ಸುರೇಶ್ ಗೌಡ. ಹಿಂದೆ ಮುಖ್ಯಮಾಂತ್ರಿಗಳಿಗೆ ಪತ್ರಬರೆದು ತಡೆಯಿಡಿದಿದರು ಎಂದು ದಾಖಲೆಗಳನ್ನು ತೂರಿಸುವ ಮೂಲಕ ಬಾಜಪಕ್ಕೆ ತಿರುಗೇಟು ನೀಡಿದಾರೆ. ಇಂದು ಉಪ ಚುನಾವಣೆಯಲ್ಲಿ ರಾಜಕೀಯ ಲಾಭಕ್ಕಾಗಿ ಮದಲೂರು ಕೆರೆಗೆ ನೀರು ಹರಿಸಲು ಮುಂದಾಗಿರುವುದು ನಾಚಿಕೆಗೇಡು ಸಂಗತಿ ಎಂದು ಅವರು ಕಳೆದ ಒಂದು ವರ್ಷಗಳಿಂದ ಶಿರಾ ನೀರಾವರಿ ವಿಚಾರದಲ್ಲಿ ಯಾವುದೇ ದ್ವನಿ ಎತ್ತದವರು ಈಗ ಮುಖ್ಯ ಮಂತ್ರಿಗಳಿಗೆ ನೀರು ಹರಿಸುವಂತೆ ಪತ್ರ ಬರೆದು ಆದೇಶ ನೀಡುವ ನಾಟಕವಾಡುತ್ತಿದ್ದಾರೆ. ಕಳೆದ ತಿಂಗಳುಗಳ ಹಿಂದೆ ಕಾಂಗ್ರೆಸ್ ನ ಮಾಜಿ ಸಚಿವರು ಅದೇ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದು ಅದೇಶ ಮಾಡಿಸಿದರು. ಅದರ ಮೇಲೆ ಅದೇಶ ಮಾಡಬಹುದಿತ್ತು.ಅದರೆ ಉಪ ಚುನಾವಣೆ ನೆಪದಲ್ಲಿ ರಾಜಕೀಯ ಲಾಭಕ್ಕಾಗಿ ನೀರು ಹರಿಸಲು ಮುಂದಾಗಿದ್ದಾರೆ’ ಬಿಜೆಪಿ ರಾಜ್ಯದಲ್ಲಿ ಅಧಿಕಾರವನ್ನು ದುರುಪಯೋಗ ಪಡಿಸಿಕೂಂಡು ಹಣದ ಹೊಳೆ ಹರಿಸಿ ಚುನಾವಣೆಯಲ್ಲಿ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಅದರೆ ಕ್ಷೇತ್ರದ ಜನರ ವಿಶ್ವಾಸ ಕುಮಾರ ಸ್ವಾಮಿ ಅವರ ಮೇಲೆ ಇದೆ. ಜೆಡಿಎಸ್ನಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಸ್ಥಳೀಯ ಅಭ್ಯರ್ಥಿ ಯಾರೇ ಇದ್ದರೂ ನಮಗೆ ಎಚ್.ಡಿ. ಕುಮಾರಸ್ವಾಮಿಯೇ ಅಭ್ಯರ್ಥಿ ಎಂದು ಕೆಲಸ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು…

ವರದಿ- ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ

Click to comment

Trending

Exit mobile version