ಮಂಡ್ಯ

ಕೇಂದ್ರ ಸರ್ಕಾರದ ಹಿಂದಿ ದಿವಸ್ ಆಚರಣೆ ವಿರೋಧಿಸಿ ಪ್ರತಿಭಟನೆ..!

Published

on

ಮಳವಳ್ಳಿ: ಕೇಂದ್ರ ಸರ್ಕಾರದ ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸಿ ಪ್ರತಿಭಟನೆಯನ್ನು ಮಳವಳ್ಳಿ ತಾಲ್ಲೂಕಿನ ಹಲಗೂರು ಗ್ರಾಮದ ಪ್ರಮುಖ ವೃತ್ತದಲ್ಲಿ ಕನ್ನಡ ಪರ ಸಂಘಟನೆ ವತಿಯಿಂದ ನಡೆಸಲಾಯಿತು. ಇದೇ ವೇಳೆ ಕನ್ನಡ ಪರ ಹೋರಾಟಗಾರ ಹಾಗೂ ಬಹುಜನ್ ಸಮಾಜ ಪಕ್ಷದ ತಾಲ್ಲೂಕು ಉಸ್ತುವಾರಿಗಳು ಹ.ನಾ ವೀರಭದ್ರಯ್ಯ ಮಾತನಾಡಿ,ಕೇಂದ್ರ ಸರ್ಕಾರದ ಜನ ವಿರೋಧಿ, ಭಾಷಾ ವಿರೋಧಿ ನೀತಿಯನ್ನು ಒತ್ತಾಯವಾಗಿ ಏರುತ್ತಿರುವುದು ಸರ್ವಾಧಿಕಾರ ಧೋರಣೆಯನ್ನು ಕೂಡಿದೆ. ಹಾಗೂ ಪ್ರಜಾಪ್ರಭುತ್ವಕ್ಕೆ ಮಾರಕ ಹಾಗೂ ಖಂಡನೀಯ ಎಂದು ತಿಳಿಸಿದರು.ನಮ್ಮ ನೆಲ, ಜಲ, ಸಂಸ್ಕೃತಿ, ಭಾಷೆಗಳ ಮೇಲೆ ಸಾವಿರಾರು ವರ್ಷಗಳಿಂದಲೂ ನಿರಂತರ ದೌರ್ಜನ್ಯ ದಬ್ಬಾಳಿಕೆಯ ನೆಡೆಯತ್ತಿದೆ.ಇಂತಹ ದೌರ್ಜನ್ಯ ಖಂಡನೀಯ, ನಮ್ಮನ್ನು ಆಳುವ ಸರ್ಕಾರಗಳು, ಪ್ರಾದೇಶಿಕ ಭಾಷೆಗಳ ಮೇಲೆ ಒತ್ತಾಯ ಪೂರ್ವಕವಾಗಿ ಹಿಂದಿ ಭಾಷೆಯನ್ನು ಹೇರುತ್ತಿರುವುದು ವಿರ್ಪಯಾಸ.ನಾಡು ನುಡಿ ನೆಲ ಜಲದ ಮೇಲೆ ದೌರ್ಜನ್ಯ ನೆಡೆಯುತ್ತಿದ್ದರು ಸುಮ್ಮನೆ ಕೂರಲು ಸಾಧ್ಯವಿಲ್ಲ ಆದರೆ ಕರ್ನಾಟಕದಿಂದ ಆಯ್ಕೆಯಾದ 25 ಸಂಸದರು ಏನು ಮಾಡುತ್ತಿದ್ದಾರೆ? ಈಗಲಾದರೂ ತಮ್ಮ ಸ್ವಪಕ್ಷದ ಹಿತಕಾಯದೆ ನಾಡು ನುಡಿಗೆ ಬಗ್ಗೆ ಕಾಳಜಿ ವಹಿಸಿ ಇಲ್ಲವಾದರೆ ರಾಜಿನಾಮೆ ನೀಡಿ ಎಂದರು. ಇನ್ನೂ ಕನ್ನಡ ಪರ ಹೋರಾಟಗಾರರಾದ ಬಾ.ಗೋ .ಕುಮಾರ್ ಮಾತನಾಡಿ ನಮ್ಮ ಭಾಷೆ ಮತ್ತು ಸಂಸ್ಕೃತಿಯ ಮೇಲೆ ಸತತವಾಗಿ ದೌರ್ಜನ್ಯ ನೆಡೆಯತ್ತಿದೆ ಹಾಗೂ ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಅನ್ಯಾಯ ಮಾಡಲಾಗುತ್ತಿದೆ ಹಾಗೂ ಪ್ರಾದೇಶಿಕ ಭಾಷೆಗಳನ್ನು ನೆಲಸಮ ಮಾಡಲು ಹೊರಟಿದ್ದಾರೆ.ಕೇಂದ್ರದ ಸರ್ಕಾರ ನಡೆಸುವ ಬ್ಯಾಂಕ್,ಯುಪಿಎಸ್ಸಿ ಪರೀಕ್ಷೆಗಳನ್ನು ಆಯಾಯ ಪ್ರಾದೇಶಿಕ ಭಾಷೆಯಲ್ಲಿ ನೆಡಸಬೇಕು ಎಂದರು. ಇದೇ ವೇಳೆ ಕನ್ನಡ ಪರ ಹೋರಾಟಗಾರರಾದ ಹಾಗೂ ಅನಿಕೇತನ ಪ್ರತಿಷ್ಠಾನ ಸಂಸ್ಥಾಪಕರಾದ ದಡಮಹಳ್ಳಿ ಉಮೇಶ್ ರವರು ಮಾತನಾಡಿ ಅವರು ಸ್ಥಳೀಯ ಭಾಷೆಗೆ ಆದ್ಯತೆ ನೀಡಬೇಕು, ನಮ್ಮ ತೆರಿಗೆ ಹಣದಿಂದ ಸರ್ಕಾರ ನಡೆಸುತ್ತಿರುವ ಕೇಂದ್ರ ಸರ್ಕಾರ ಹಿಂದಿ ಭಾಷೆ ಒತ್ತಾಯ ಪೂರ್ವಕವಾಗಿ ಹೇರುತ್ತಿರುವುದು ಖಂಡನೀಯ ಕನ್ನಡ ಭಾಷೆ ಸಾವಿರಾರು ವರ್ಷಗಳ ಇತಿಹಾಸ ಇದೆ ಇಂತಹ ನಾಡು-ನುಡಿ,ನೆಲ, ಜಲದ ಸಂರಕ್ಷಣೆ ಕನ್ನಡಿಗರಾದ ನಮ್ಮ ಮೇಲೆ ಇದೆ. ನಮ್ಮ ನಾಡು ನುಡಿ ಮೇಲೆ ಒತ್ತಾಯಪೂರ್ವಕವಾಗಿ ಹೇರಿದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಈ ಕ್ಷಣದಿಂದಲೇ ಹಿಂದಿ ದಿವಸ ಆಚರಣೆಯನ್ನು ಕೈ ಬಿಡಬೇಕು ಎಂದರು. ಈ ಸಂದರ್ಭದಲ್ಲಿ ಶಿವರಾಜ್ ಕನ್ನಡಿಗ, ಮಂಜುನಾಥ್,ಶಿವಕುಮಾರ್, ಮಹೇಶ್, ನಾಗರಾಜು,ಬಾಗೋ ಕುಮಾರ್, ಉಮೇಶ್, ಎಸ್.ಮೌರ್ಯ, ಹ.ನಾ ವೀರಭದ್ರಯ್ಯ ಉಪಸ್ಥಿತರಿದ್ದರು..

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version