ಸಿಂಧನೂರು

ಸಾಮಾನ್ಯ ಸಭೆಯಿಂದ ಹೊರ ಬರುವಂತೆ ಸೂಚಿಸಿದ ಚಂದ್ರಶೇಖರ್..!

Published

on

ಸಿಂಧನೂರು: ತಾಲೂಕಿನ ಪಂಚಾಯತಿ ಕಾರ್ಯಾಲಯದ ಸಭಾಂಗಣದಲ್ಲಿ 14 ನೇ ಸಾಮಾನ್ಯ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ತಿಡಿಗೋಳ ತಾಲೂಕು ಪಂಚಾಯತಿ ಸದಸ್ಯೆ ನಾಗರತ್ನ ಚಂದ್ರಶೇಖರ್ ಮಾತನಾಡಿ ತಿಡಿಗೋಳ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನನ್ನ ಕ್ಷೇತ್ರಕ್ಕೆ ಬರುವ ಯೋಜನೆಗಳ ಬಗ್ಗೆ ಹಾಗೂ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ತಿಳಿಸುವುದಿಲ್ಲ. ನಮ್ಮ ಗಮನಕ್ಕೆ ತರದೆ ಮಾಡುತ್ತಾರೆ. ಜನರಿಂದ ಮಾಹಿತಿ ಬಂದಾಗ ಮಾತ್ರ ಗೊತ್ತಾಗುತ್ತದೆ. ಜನರಿಗೆ ನಾನು ಏನೂ ಉತ್ತರ ನೀಡಬೇಕು, ಎಂದು ಗುಡುಗಿದರು. ಇನ್ನೂ ಸಭೆಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಚನ್ನಬಸವ ಅವರನ್ನು ವರ್ಗಾವಣೆ ಮಾಡಿ ಎಂದು ಹೇಳುತ್ತಿರುವ ಸಮಯಕ್ಕೆ ತಾಲೂಕು ಪಂಚಾಯತಿ ಸದಸ್ಯೆ ನಾಗರತ್ನ ಅವರ ಪತಿ ‘ನನ್ನ ಹೆಂಡತಿ ಎಷ್ಟು ಹೇಳಿದರು ಯಾವ ಅಧಿಕಾರಿಗಳು ಕೇಳುವುದಿಲ್ಲ’ ನಾವು ಪಕ್ಷಕ್ಕೆ ರಾಜಿನಾಮೆ ನೀಡುತ್ತವೆ ಸಭೆಗೆ ನುಗ್ಗಿ ಹೇಳಿದರು. ಪಕ್ಷ ಬೇದ ಮರೆತು ಪಿ.ಡಿ.ಓ ಗಳ ಕಾರ್ಯ ವೈಖರಿಗೆ ಎಲ್ಲಾ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ತಾಲೂಕು ಪಂಚಾಯತಿ ಅಧ್ಯಕ್ಷೆ ಲಕ್ಷ್ಮೀ ದೇವಿ ಅಮರೇಶ್ ಗುರಿಕಾರ ಮಾತನಾಡಿ ಯಾವ ಒಬ್ಬ ಅಧಿಕಾರಿಗಳು ತಾಲೂಕು ಪಂಚಾಯತಿ ಸದಸ್ಯರ ದೂರವಾಣಿ ಕರೆ ಸ್ವೀಕರಿಸುವುದಿಲ್ಲ, ಜೊತೆಗೆ ಸಭೆಗೆ ಸರಿಯಾದ ಮಾಹಿತಿ ನೀಡುವುದಿಲ್ಲ, ಎಲ್ಲಾ ಸದಸ್ಯರ ದೂರವಾಣಿ ಕರೆ ಸ್ವೀಕರಿಸಿ ಯೋಜನೆ ಫಲಾನುಭವಿಗಳ ಆಯ್ಕೆ ಮಾಡುವಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು. ಈ ಸಂಧರ್ಭದಲ್ಲಿ ತಾ.ಪಂ ಇ.ಓ ಪವನ್ ಕುಮಾರ್, ಉಪಾಧ್ಯಕ್ಷ ಕರಿಹನುಮಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರಪ್ಪ. ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದರು.

ವರದಿ- ಸೈಯದ್ ಬಂಧೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Click to comment

Trending

Exit mobile version