ಮಂಡ್ಯ

150 ವರ್ಷಗಳ ಇತಿಹಾಸವಿರುವ ಕೆಂಪಯ್ಯನಕಟ್ಟೆ ಅಭಿವೃದ್ಧಿಗೆ ಗ್ರಾಮಸ್ಥರಿಂದ ಸರ್ಕಾರಕ್ಕೆ ಒತ್ತಾಯ..!

Published

on

ಮಳವಳ್ಳಿ: 150 ವರ್ಷಗಳ ಇತಿಹಾಸವಿರುವ ಕೆಂಪಯ್ಯನಕಟ್ಟೆಯನ್ನು ಅಭಿವೃದ್ಧಿ ಹಾಗೂ ನೀರು ತುಂಬಿಸುವಂತೆ ಮಳವಳ್ಳಿ ಪಟ್ಟಣದ ಪೇಟೆಬೀದಿ ಗ್ರಾಮಸ್ಥರು ಸರ್ಕಾರವನ್ನು ಒತ್ತಾಯಿಸಿದರು.ಮಳವಳ್ಳಿ ಪಟ್ಟಣದ ಪೇಟೆ ಬೀದಿಯ ಹೊಸಬಡಾವಣೆಯಲ್ಲಿರುವ ಕೆಂಪಯ್ಯನಕಟ್ಟೆ ಕಳೆದ ಎರಡು ವರ್ಷಗಳ ಹಿಂದೆ ಶಾಸಕ ಡಾ.ಕೆ ಅನ್ನದಾನಿರವರು ಕಟ್ಟೆಗೆ ಭಾಗೀನ ಅರ್ಪಿಸುವ ಸಂಧರ್ಭದಲ್ಲಿ ಕಟ್ಟೆಯನ್ನು ಅಭಿವೃದ್ಧಿ ಪಡಿಸುವುದಾಗಿ ಭರವಸೆ ನೀಡಿದ್ದರು ಆದರೆ ಕೇವಲ ಭರವಸೆಯಾಗಿಯೇ ಉಳಿದಿದ್ದ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು. ಇನ್ನೂ ಶಾಸಕರು ಹಾಗೂ ವಿಧಾನಪರಿಷತ್ತು ಸದಸ್ಯರು, ಕಿರುಗಾವಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಾಗಲೀ ಈ ಕಟ್ಟೆ ಅಭಿವೃದ್ಧಿ ಬಗ್ಗೆ ವಿಶೇಷ ಕಾಳಜೀ ವಹಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಮಾಜಿ ಪುರಸಭಾಧ್ಯಕ್ಷ ಚಿಕ್ಕರಾಜು ಸರ್ಕಾರವನ್ನು ಒತ್ತಾಯಿಸಿದರು.ಇನ್ನೂ ಮಾಜಿ ಪುರಸಭಾಧ್ಯಕ್ಷ ನಂಜುಂಡಯ್ಯ ವಾಹಿನಿಯೊಂದಿಗೆ ಮಾತನಾಡಿ,ಈ ಕೆಂಪಯ್ಯನಕಟ್ಟೆಯೂ ಪೇಟೆ ಬೀದಿಯ ಜನರು ಹೊಸನೀರು ತರಲು,ವಿವಿದ ಪೂಜೆ ಕೈಕರ್ಯಗಳಿಗೆ ಈ ಕಟ್ಟೆಯ ನೀರನ್ನೇ ಬಳಸುತ್ತಿದ್ದರು. ಈಗ ನೀರಿಲ್ಲ ಸಾಕಷ್ಟು ಸಮಸ್ಯೆ ಯಾಗಿದೆ. ಸಂಬಂಧಪಟ್ಟ ಇಲಾಖೆಯಾಗಲಿ,ಶಾಸಕರಾಗಲಿ,ಸರ್ಕಾರವಾಗಲಿ ಅಭಿವೃದ್ಧಿ ಪಡಿಸಬೇಕು ಎಂದು ಒತ್ತಾಯಿಸಿದರು. ಈ ಕಟ್ಟೆಗಳ ಅಭಿವೃದ್ಧಿ ಯಿಂದ ರೈತರಿಗೂ ಅನುಕೂಲವಾಗುತ್ತದೆ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಪಡಿಸಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಜಯಸಿಂಹ,ಪತಂಡೆನಾಗರಾಜು, ಮೆಡಿಕಲ್ ಕುಮಾರ್, ಗುಂಡ, ವಿಶ್ವೇಶ್ವರಯ್ಯ ಯುವಕರ ಸಂಘದ ಅಧ್ಯಕ್ಷ ಚಿಕ್ಕಮರೀಗೌಡರು, ಯಜಮಾನವೆಂಕಟ್ಟಪ್ಪ, ನಾಗಣ್ಣ, ಸೇರಿದಂತೆ ಮತ್ತಿತ್ತರರು ಇದ್ದರು.

ವರದಿ -ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version