ರಾಯಚೂರು

ಬೀದಿ ನಾಟಕದ ಮೂಲಕ ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ..!

Published

on

ರಾಯಚೂರು: ಜಿಲ್ಲೆಯ ಸಿರವಾರ ತಾಲ್ಲೂಕಿನ ಕವಿತಾಳ ಪಟ್ಟಣದಲ್ಲಿ ತ್ರಿಯಂಬಕೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬೀದಿ ನಾಟಕವನ್ನು ಏರ್ಪಡಿಸಲಾಗಿತ್ತು,ಸ್ನೇಹಿತರೆ ಇಂದಿನ ದಿನಮಾನಗಳಲ್ಲಿ ಹಲವಾರು ರೋಗರುಜನೆ ಯಾವ ರೀತಿ ಹರಡುತ್ತವೆ ,ಹರಡದಂತೆ ಮುನ್ನಾಚರಿಕೆಯ ಕ್ರಮಗಳನ್ನು ತೆಗೆದು ಕೊಳ್ಳುವುದು ಹೇಗೆ ಎಂದು ನೃತ್ಯ , ಹಾಸ್ಯ ಮೂಲಕ ಜನ ಸಾಮಾನ್ಯರಲ್ಲಿ ಅರಿವನ್ನು ಮೂಡಿಸುವ ಪ್ರಯತ್ನ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜ್ಞಾನ ವಿಕಾಸ ಮೇಲ್ವಿಚಾರಿಕೆಯವರಾದ ಶಿಲ್ಪರವರು ರಾಯಚೂರು ಜಿಲ್ಲೆಯಾದ್ಯoತ ಹಳ್ಳಿ ಪಟ್ಟಣ ಸೇರಿದಂತೆ ಹಲವು ಕಡೆ ಬಿದಿ ನಾಟಕದ ಮೂಲಕ ಜನಸಾಮಾನ್ಯರಲ್ಲಿ ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೆವೇ. ಎಲ್ಲಾರೂ ಆರೋಗ್ಯದ ಬಗ್ಗೆ ಮಾಹಿತಿ ಪಡಿದುಕೊಳ್ಳಬೇಕು.ಕಾಯಿಲೆ ಬರದಂತೆ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು ಎಂದು ಹೇಳಿದರು. ಇನ್ನು ಈ ಕಾರ್ಯ ಕ್ರಮದಲ್ಲಿ ಮಾನ್ವಿ ತಾಲ್ಲೂಕು ಯೋಜ ನಾಧಿಕಾರಿಯಾದ ಪಾಂಡು ಗೌಡ , ಕವಿತಾಳ ಮೇಲ್ವಿಚಾರಿಕೆ ಮಹೇಶ್ವರಿ,C H C ಮ್ಯಾನೇಜರ್ ಮಾಹಂತೇಶ್, ಜ್ಞಾನ ವಿಕಾಸ ಮೇಲ್ವಿಚಾರಿಕೆ ಶಿಲ್ಪ ಸೇರಿದಂತೆ, ಅಮರೇಶ ದಿನ್ನಿ , ರವಿ ,ಜಂಬಣ್ಣ , ಸೇವಾ ಪ್ರತಿನಿಧಿಗಳಾದ ಇಂದಿರಾ ಕೆ ಗೌಡ , ರೇಣುಕಾ, ಜಯಶ್ರೀ , ಗೀತ , ಸೇರಿದಂತೆ ಪಟ್ಟಣದ ನಿವಾಸಿ ಗಳು ಉಪಸ್ಥಿತರಿದ್ದರು.

ವರದಿ- ಸುಲ್ತಾನ್ ಬಾಬ ಎಕ್ಸ್ ಪ್ರೆಸ್ ಟಿವಿ ಸಿರವಾರ

Click to comment

Trending

Exit mobile version