ಸಿಂಧನೂರು

ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಒತ್ತಾಯಿಸಿ ಮಾದಿಗ ಜಾಗೃತಿ ಸಮಾವೇಶ…!

Published

on

ಸಿಂಧನೂರು: ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಮಾದಿಗ ಮಹಾಸಭಾ ತಾಲೂಕು ಘಟಕ ವತಿಯಿಂದ ಪತ್ರಿಕಾಗೋಷ್ಠಿ ಕರೆಯಲಾಗಿತ್ತು. ಈ ಪತ್ರಿಕಾಗೋಷ್ಠಿ ಉದ್ದೇಶಿಸಿ ತಾಲೂಕು ಮಾದಿಗ ಮಹಾಸಭಾ ಅಧ್ಯಕ್ಷ ಅಮರೇಶ ಗಿರಿಜಾಲಿ ಮಾತನಾಡಿ ಇದೇ 18 ರಂದು ಕನಕದಾಸ ಕಲ್ಯಾಣ ಮಂಟಪದಲ್ಲಿ ನ್ಯಾಯ ಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಕ್ಕೆ ಒತ್ತಾಯಿಸಿ ಮಾದಿಗ ಜಾಗೃತಿ ಸಮಾವೇಶ ನಡೆಸಲಾಗುತ್ತದೆ. ಇದರಲ್ಲಿ ಮಾದಿಗ ಮಹಾಸಭಾದ ಜಿಲ್ಲಾಧ್ಯಕ್ಷ ಎ.ಬಾಲಸ್ವಾಮಿ ಕೊಡ್ಲಿ ಸೇರಿದಂತೆ ಹಲವು ಮುಖ್ಯ ಅತಿಥಿಗಳು ಭಾಗವಹಿಸುತ್ತಾರೆ. ಜೊತೆಗೆ ಸಮಾಜದ ಪ್ರತಿಭಾನ್ವಿತ ಸಾಧಕರಿಗೆ ಸನ್ಮಾನ ಮಾಡಲಾಗುತ್ತದೆ. ಒಳ ಮೀಸಲಾತಿ ಸಂವಿಧಾನ ಮೂಲಭೂತ ಹಕ್ಕು ಸರ್ಕಾರದ ಔರ್ಧಾರ್ಯವಲ್ಲ ಸುಮಾರು ಹತ್ತು ಹಲವು ವರ್ಷಗಳಿಂದ ಸತತವಾಗಿ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನ ಮಾಡುವಂತೆ ಹೋರಾಟಗಳು ಮಾಡಿದರು ಸರ್ಕಾರಗಳು ಇದನ್ನು ಜಾರಿಗೊಳಿಸಲು ನಿರ್ಲಕ್ಷ್ಯ ವಹಿಸುತ್ತದೆ. ಸಮಾವೇಶದಲ್ಲಿ ಮಾದಿಗ ಸಮಾಜದ ಪ್ರತಿಯೊಬ್ಬ ಮಾಸ್ಕ ಧರಿಸುವ ಜೊತೆಗೆ ಸಮಾಜಿಕ ಅಂತರವನ್ನು ಕಾಪಾಡಿಕೊಂಡು ಭಾಗವಹಿಸಲು ಮನವಿ ಮಾಡಿದರು. ಈ ಸಂಧರ್ಭದಲ್ಲಿ ಮಾದಿಗ ಮಹಾಸಭಾ ಪ್ರಧಾನ ಕಾರ್ಯದರ್ಶಿ ಬಾಲಸ್ವಾಮಿ ದಿದ್ದಿಗಿ.ಹನುಮಂತ ಮುರಾರಿ,ಯಲ್ಲಪ್ಪ ಯದ್ದಲದೊಡ್ಡಿ, ಪಂಪಾಪತಿ ಹಂಚಿನಾಳ, ಹನುಮೇಶ ಮೈತ್ರಿ, ಹುಲುಗಪ್ಪ ಸಾಲಗುಂದಾ, ಲಕ್ಷ್ಮಣ ಜಾಲಿಹಾಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ವರದಿ- ಸೈಯದ್ ಬಂಧೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Click to comment

Trending

Exit mobile version