ಹುಬ್ಬಳ್ಳಿ-ಧಾರವಾಡ

ಸರ್ಕಾರದ ಹೊಸ ನೀತಿಗಳನ್ನು ವಿರೋಧಿಸಿ ಸಿ.ಎಫ್.ಸಿ ಜನಾಂದೋಲನಗಳ ಮಹಾಮೈತ್ರಿ..!

Published

on

ಹುಬ್ಬಳ್ಳಿ: ಸರ್ಕಾರದ ಹೊಸ ನೀತಿಗಳನ್ನು ವಿರೋಧಿಸಿ ಸಿ.ಎಫ್.ಸಿ ಜನಾಂದೋಲನಗಳ ಮಹಾಮೈತ್ರಿ, ಜನ ಸಂಗ್ರಾಮ ಪರಿಷತ್ ಹಾಗೂ ಜನತಂತ್ರ ಪ್ರಯೋಗಶಾಲಾ ವತಿಯಿಂದ ಅಕ್ಟೋಬರ್ 2 ರಿಂದ 11 ರವರೆಗೆ ರಾಷ್ಟ್ರಾದ್ಯಂತ ಪ್ರತಿಭಟನೆ ಹಾಗೂ ತಿಳುವಳಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಸಿ.ಎಫ್.ಡಿ ಯ ರಾಷ್ಟ್ರೀಯ ಅಧ್ಯಕ್ಷ ಎಸ್.ಆರ್.ಹಿರೇಮಠ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸಾಹಿತಿಗಳು ಹಾಗೂ ಹೋರಾಟಗಾರರ ಮೇಲೆ ಅನ್ಯಾಯವಾಗುತ್ತಿದ್ದು, ಅವರ ವಾಕ್ ಸ್ವಾತಂತ್ರ್ಯದ ಮೇಲೆ ಸರ್ಕಾರ ಹೊಸ ಕಾನೂನುಗಳ ಮೂಲಕ ಬಂಧಿಸುತ್ತಿದ್ದು, ಅಲ್ಲದೇ ನಿರುದ್ಯೋಗ, ವಲಸೆ ಕಾರ್ಮಿಕರ ಸಂಕಷ್ಟಗಳು ಕುರಿತು ಸೂಕ್ತ ಕಾರ್ಯಾಚರಣೆ ಮಾಡದ ಸರ್ಕಾರದ ವಿರುದ್ಧ ಸಿ.ಎಫ್.ಡಿ, ಜನಾಂದೋಲನಗಳ ಮಹಾಮೈತ್ರಿ ಅಕ್ಟೋಬರ್ 2 ರಿಂದ 11 ರವರೆಗೆ ರಾಷ್ಟ್ರಾದ್ಯಂತ ಪ್ರತಿಭಟನೆ ಹಾಗೂ ತಿಳುವಳಿಕೆ ಕಾರ್ಯಕ್ರಮ ನಡೆಸುತ್ತಿದೆ ಎಂದರು.ಇನ್ನೂ ಸರ್ಕಾರ ದೇಶದಲ್ಲಿ ಬಡವರಿಗೆ, ರೈತರಿಗೆ, ಕೂಲಿ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯದ ಕುರಿತು ಗಮನ ಹರಿಸದೇ ಕಾರ್ಪೋರೇಟ್ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುತ್ತಿರುವುದು ದುರಾದೃಷ್ಟಕರ. ಈ ಜನ ವಿರೊಧಿ ನೀತಿಯ ವಿರುದ್ಧ ಜನರು ಎಚ್ಚೆತ್ತು ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ವೆಂಕನಗೌಡ ಪಾಟೀಲ ಇದ್ದರು. ಬಾಕ್ಸ್ ಹೆಸರು ದುರುಪಯೋಗ ಖಂಡನೀಯ ಸಿಟಿಜನ್ – ಫಾರ್- ಡೆಮಾಕ್ರಸಿ ಲೋಕನಾಯಕ ಜಯಪ್ರಕಾಶ್ ನಾರಾಯಣ್ ರವರ ಪ್ರಜಾತಂತ್ರ ಉಳಿಕೆಗಾಗಿ ಹೋರಾಟ ಮಾಡುತ್ತಾ ಬಂದಿದ್ದು, ಇದೀಗ ಆಝಾದ್ – ಸೆ- ಸ್ವರಾಜ್ ಅಭಿಯಾನದಲ್ಲಿ ಕಾರ್ಯಪ್ರವೃತವಾಗಿದೆ. ಆದರೆ ಈ ಘಟನೆಯ ಸಂಸ್ಥೆಯ ಹೆಸರನ್ನು ಬಳಸಿ ಇತ್ತಿಚೆಗೆ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆಗೆ ಸತ್ಯಶೋಧನಾ ಸಮಿತಿ ರಚನೆ ಮಾಡಿ ಕೆಲವು ನಿವೃತ್ತ ಸರ್ಕಾರಿ ಅಧಿಕಾರಿಗಳು ಪ್ರಶ್ನಾರ್ಹವಾಗಿದ್ದು, ಅವರು ಸಂಸ್ಥೆಯ ಹೆಸರನ್ನು ಬಳಸಿ ದುರುಪಯೋಗ ಮಾಡಿಕೊಂಡಿರುವುದು ಖಂಡನೀಯ ಕೂಡಲೇ ಅವರು ಕ್ಷಮೆಯಾಚನೆ ಮಾಡಬೇಕೆಂದು ಸಿ.ಎಫ್.ಡಿ ಯ ಜನರಲ್ ಸೆಕ್ರೆಟರಿ ವೆಂಕನಗೌಡ ಪಾಟೀಲ ಆಗ್ರಹಿಸಿದರು.

ವರದಿ-ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version