ಮಂಡ್ಯ

ಒಳ ಮೀಸಲಾತಿ ಜಾರಿಗೆ ತರಬೇಕು- ತಾಲ್ಲೂಕು ಅಧ್ಯಕ್ಷ ಕುಮಾರ್ ಬಾಳೆಹೊನ್ನಿಗ..!

Published

on

ಮಳವಳ್ಳಿ: ನ್ಯಾ ಎ.ಜೆ ,ಸದಾಶಿವ ಆಯೋಗ ವರದಿಯನ್ನು ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಿ ಒಳ ಮೀಸಲಾತಿ ಜಾರಿಗೆ ತರುವಂತೆ ಡಾ .ಬಾಬು ಜಗಜೀವನರಾಮ್ ವಿಚಾರ ವೇದಿಕೆ ತಾಲ್ಲೂಕು ಅಧ್ಯಕ್ಷ ಕುಮಾರ ಬಾಳೆಹೊನ್ನಿಗ ಒತ್ತಾಯಿಸಿದರು.ಮಳವಳ್ಳಿ ಪಟ್ಟಣದ ಪ್ರವಾಸಿಮಂದಿರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಇದುವರೆಗೂ ಎಷ್ಟು ಸರ್ಕಾರಗಳ ಬಂದರು ನ್ಯಾ.ಎ .ಜೆ ಸದಾಶಿವ ಆಯೋಗ ವರದಿಯನ್ನು ಜಾರಿಗೆ ತರಲು ಏಕೆ ವಿಳಂಬ ಮಾಡುತ್ತಿದ್ದಾರೆ ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈಗಾಗಾಲೇ ನೀಡುತ್ತಿರುವ ಮೀಸಲಾತಿಯಲ್ಲಿ ಮಾದಿಗ ಜನರಿಗೆ ಶೇ 6 ರಷ್ಟು ಸಿಗಬೇಕಾದ ಮೀಸಲಾತಿ ಶೇ 1ರಿಂದ 2 ರಷ್ಟು ಮಾತ್ರ ದೊರೆಯುತ್ತಿದೆ.ಈಗಾಗಲೇ ಒಳಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂದು ಘನ ಸವೋಚ್ಚನ್ಯಾಯಾಲಯದ ನ್ಯಾಯ ಪೀಠವು ತೀರ್ಪು ನೀಡಿದ್ದರೂ. ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಬಗ್ಗೆ ಬೇಸರ ವ್ಯಕ್ತಪಡಿಸಿದರು.ಇನ್ನೂ ಸುದ್ದಿಗೋಷ್ಟಿ ಬಳಿಕ ತಾಲ್ಲೂಕು ಕಚೇರಿಗೆ ವಿಚಾರ ವೇದಿಕೆ ಗೌರವಾಧ್ಯಕ್ಷ ಅಪ್ಪಾಜೀಗೌಡರ ನೇತೃತ್ವದಲ್ಲಿ ತೆರಳಿ ತಹಸೀಲ್ದಾರ್ ಚಂದ್ರಮೌಳಿರವರಿಗೆ ಮನವಿ ಸಲ್ಲಿಸಿದರು.ಸುದ್ದಿಗೋಷ್ಠಿಯಲ್ಲಿ ಡಾ.ಬಾಬು ಜಗಜೀವನರಾಮ್ ವಿಚಾರ ವೇದಿಕೆ ಗೌರವಾಧ್ಯಕ್ಷ ಅಪ್ಪಾಜಿಗೌಡ,ಶ್ರೀನಿವಾಸ್, ಉಪಾಧ್ಯಕ್ಷ ಸತೀಸ್, ಪ್ರಸನ್ನ , ಕೃಷ್ಣಮೂರ್ತಿ ಸೇರಿದಂತೆ ಮತ್ತಿತ್ತರರು ಇದ್ದರು.

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version