ಮಂಡ್ಯ

ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಮಂಡಳಿಗೆ ನೂತನ ನಿರ್ದೇಶಕರ ಆಯ್ಕೆ..!

Published

on

ಮಳವಳ್ಳಿ: ಜೆಡಿಎಸ್ ಪುರಸಭೆ ಸದಸ್ಯರು ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ವತಿಯಿಂದ ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಮಹಾ ಮಂಡಳಿ (ಕೆ.ಎಂ.ಎಫ್) ಗೆ ನೂತನ ನಿರ್ದೇಶಕರಾಗಿ ಆಯ್ಕೆಯಾದ ಮನ್ ಮುಲ್ ನಿರ್ದೇಶಕ. ವಡ್ಡರಹಳ್ಳಿ ವಿಶ್ವನಾಥ್ ರವರಿಗೆ ಸನ್ಮಾನ ಸಮಾರಂಭ ಮಳವಳ್ಳಿ ಪಟ್ಟಣದಲ್ಲಿ ನಡೆಸಲಾಯಿತು. ಮಳವಳ್ಳಿ ಪಟ್ಟಣದ ಪ್ರವಾಸಿಮಂದಿರದಲ್ಲಿ ಶಾಸಕ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ನಂದಕುಮಾರ್ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಮಾಜಿ ಪುರಸಭಾದ್ಯಕ್ಷ ದೊಡ್ಡಯ್ಯ, ಪುರಸಭೆ ಸದಸ್ಯ. ಪ್ರಶಾಂತ್, ವಡ್ಡರಹಳ್ಳಿಸಿದ್ದರಾಜು, ಪುರಸಭೆ ಸದಸ್ಯ ನಾಗೇಶ್, ನಾರಾಯಣ ಸೇರಿದಂತೆ ಹಾಗೂ ಅಭಿಮಾನಿಗಳು ಸನ್ಮಾನಿಸಲಾಯಿತು.ಇನ್ನೂ ಸನ್ಮಾನ ಸ್ವೀಕರಿಸಿದ ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಮಹಾಮಂಡಳಿ ನೂತನ ನಿರ್ದೇಶಕ ವಡ್ಡರಹಳ್ಳಿ ವಿಶ್ವನಾಥ್ ರವರು ಮಾತನಾಡಿ ರಾಜ್ಯದಲ್ಲಿ ಕೋವಿಡ್ 19 ನಿಂದ ಒಕ್ಕೂಟದಲ್ಲಿ ಸಾಕಷ್ಟು ತೊಂದರೆವಿದ್ದು, ಉತ್ಪಾದನೆಯಾದ ವಸ್ತುಗಳು ಮಾರಾಟವಾಗುತ್ತಿಲ್ಲ ಜೊತೆ ಮದುವೆ, ಹಾಗೂ ಇನ್ನಿತರ ಸಭೆ ಸಮಾರಂಭಗಳನ್ನು ನಡೆಯದ ಕಾರಣ ಇದರಿಂದ ಹಾಲು ಉತ್ಪಾದಕರಿಗೆ ಸರಿಯಾಗಿ ಹಣ ವಿತರಣೆಯಾಗುತ್ತಿಲ್ಲ ಇದಕ್ಕೆ ಉತ್ಪಾದಕರು ಸಹಕಾರ ನೀಡಬೇಕು ಎಂದರು. ಇನ್ನೂ ಈ ಅಧಿಕಾರ ನೀಡಿದ ಮಂಡ್ಯ ಜಿಲ್ಲೆಯ ಎಲ್ಲಾ ಶಾಸಕರುಗಳು ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಅಭಿನಂದನೆ ಸಲ್ಲಿಸಿದರು.ಉತ್ತಮ ಗುಣಮಟ್ಟದ ಹಾಲನ್ನು ನೀಡುವ ಮೂಲಕ ಜಿಲ್ಲೆಯಲ್ಲಿ ತಾಲ್ಲೂಕು ಮೊದಲ ಸ್ಥಾನ ಲಭಿಸಿದೆ ಎಂದು ಶ್ಲಾಘನೀಯ ವ್ಯಕ್ತಪಡಿಸಿದರು.ಈ ಹಿಂದೆ ರೈತರ ಹಸು ಸತ್ತರೆ ಕೇವಲ 10 ಸಾವಿರ ಸಿಗುತ್ತಿತ್ತು , ಈಗ ಕನಿಷ್ಠ 30 ರಿಂದ 40 ಸಾವಿರ ರೂ ನೀಡುತ್ತಿದ್ದೇವೆ. ನನ್ನ ಬಗ್ಗೆ ಸಭೆ ಸಮಾರಂಭಕ್ಕೆ ಬರುವುದಿಲ್ಲ ಎಂಬ ಸುದ್ದಿ ಹಬ್ಬಿದ್ದು, ಇದಕ್ಕೂ ಕಾರಣವಿದೆ, ನಾನು ಅಧಿಕಾರಿಗಳ ನಡುವೆ ಸಮನ್ವಯ ಸಾಧಿಸಿ, ಅನುದಾನಗಳನ್ನು ಮಳವಳ್ಳಿತಾಲ್ಲೂಕಿನ ರೈತರಿಗೆ ಒದಗಿಸುವ ಕಾರ್ಯ ಮಾಡುತ್ತಿದ್ದೇನೆ ಎಂದು ಸವಾಲು ಎಸೆದರು. ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಮಲ್ಲೇಗೌಡ, ಕಾರ್ಯಾಧ್ಯಕ್ಷ ಪುಟ್ಟಬುದ್ದಿ, ಗುರುಸ್ವಾಮಿ, ಯುವ ಜೆಡಿಎಸ್ ಪಕ್ಷ ಅಧ್ಯಕ್ಷ ಶ್ರೀಧರ್, ಎಸ್. ಸಿ /ಎಸ್ ಟಿ ತಾಲ್ಲೂಕು ಅಧ್ಯಕ್ಷ ನಂಜುಂಡಸ್ವಾಮಿ, ಸೇರಿದಂತೆ ಮತ್ತಿತ್ತರರು ಭಾಗಿಯಾಗಿದ್ದರು.

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version