ಮಂಡ್ಯ

ವಿಶ್ವಕರ್ಮ ಸಮಾಜ ಸೇವಾ ಟ್ರಸ್ಟ್ ನಿಂದ ವಿಶ್ವ ಕರ್ಮ ಜಯಂತಿ ಆಚರಣೆ..!

Published

on

ಮಳವಳ್ಳಿ: ತಾಲ್ಲೂಕು ಆಡಳಿತ ಹಾಗೂ ವಿಶ್ವಕರ್ಮ ಸಮಾಜ ಸೇವಾ ಟ್ರಸ್ಟ್ ಮತ್ತು ವಿಶ್ವಕರ್ಮ ಮಹಾಸಭಾ ವತಿಯಿಂದ ವಿಶ್ವ ಕರ್ಮ ಜಯಂತಿಯನ್ನು ಮಳವಳ್ಳಿ ಪಟ್ಟಣದಲ್ಲಿ ಸರಳವಾಗಿ ಆಚರಿಸಲಾಯಿತು ಮಳವಳ್ಳಿ ಪಟ್ಟಣದ ತಾಲ್ಲೂಕು ಕಚೇರಿಯ ಮಿನಿ ವಿಧಾನಸೌಧದ ಸಂಕೀರ್ಣ ಕಟ್ಟಡದ ಸಭಾಂಗಣದಲ್ಲಿ ಉಪತಹಸೀಲ್ದಾರ್ ಚನ್ನ ವೀರಭದ್ರಯ್ಯರವರು ವಿಶ್ವಕರ್ಮಿ ಭಾವಚಿತ್ರಕ್ಕೆ ಪುಷ್ವಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.ಬಳಿಕ ಉಪತಹಸೀಲ್ದಾರ್ ಚನ್ನವೀರಭದ್ರಯ್ಯರವರು ಮಾತನಾಡಿ, ಪಂಚ ಕರ್ಮಿಗಳಿಂದ ಎಲ್ಲಾ ವಿಗ್ರಹಗಳ ಸ್ಥಾಪನೆ ಮಾಡುತ್ತಿರುವ ವಿಶ್ವ ಕರ್ಮಿಗಳ ಶ್ರಮದ ಹಾಗೂ ಸಾಧನೆ ಬಗ್ಗೆ ಶ್ಲಾಘನೀಯ ವ್ಯಕ್ತಪಡಿಸಿದರು.ಇನ್ನೂ ಇದೇ ವೇಳೆ ವಿಶ್ವಕರ್ಮ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ವಿ .ಪ್ರಕಾಶ್ ರವರು ದೇಶ ವ್ಯಾಪ್ತಿ ಕೋವಿಡ್ 19 ಹರಡಿದ ಹಿನ್ನಲೆಯಲ್ಲಿ ಲಾಕ್ ಡೌನ್ ವೇಳೆಯಲ್ಲಿ ಕೆಲಸವಿಲ್ಲ , ಸಂಕಷ್ಟದಲ್ಲಿ ವಿಶ್ವಕರ್ಮಿಗಳಿದ್ದು. ವಿವಿದ ಸಮಾಜಗಳಿಗೆ ವಿಶೇಷ ಪ್ಯಾಕೇಜ್ ನೀಡಿದ ರೀತಿ ನಮ್ಮ ಸಮಾಜಕ್ಕೂ ಪ್ಯಾಕೇಜ್ ನೀಡಬೇಕು , ತಾಲ್ಲೂಕಿನಲ್ಲಿ15 ಸಾವಿರ ಮಂದಿ ವಿಶ್ವಕರ್ಮಿಗಳಿದ್ದು , ತಲಾ 10 ಸಾವಿರ ರೂ ಗಳನ್ನು ಮುಖ್ಯಮಂತ್ರಿಗಳು ನೀಡಬೇಕು ಎಂದು ಮನವಿ ಪತ್ರವನ್ನು ಉಪತಹಸೀಲ್ದಾರ್ ಚನ್ನ ವೀರಭದ್ರಯ್ಯರವರಿಗೆ ನೀಡಿದರು. ಇನ್ನೂ ವಿಶ್ವ ಕರ್ಮ ಮಹಾಸಭಾ ಅಧ್ಯಕ್ಷ ಸೋಮಶೇಖರ್ ಮಾತನಾಡಿ, ಸರ್ಕಾರ ವಿಶ್ವಕರ್ಮ ಜಯಂತಿಯನ್ನು ಆಚರಣೆ ಮಾಡಲು ನಮ್ಮ ನಾಯಕ ಕೆ.ಪಿ. ನಂಜುಂಡಿರವರ ಹೋರಾಟದ ಫಲ ಇಂದು ಸರ್ಕಾರಿ ಇಲಾಖೆಯಲ್ಲೂ ವಿಶ್ವಕರ್ಮ ಜಯಂತಿ ಆಚರಣೆ ಮಾಡುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಹೋಬಳಿ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಲಿಂಗಚಾರಿ, ತಾಲ್ಲೂಕು ವಿಶ್ವಕರ್ಮ ಮಹಾಸಭಾ ಮಹಿಳಾ ಅಧ್ಯಕ್ಷೆ ಭಾಮ, ಸೌಮ್ಯ, ಯುವಘಟಕದ ಅಧ್ಯಕ್ಷ ಶಶಿ, ಸೇರಿದಂತೆ ಮತ್ತಿತ್ತರರು ಇದ್ದರು.

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version