Uncategorized

ಹೈಕ ವಿಮೋಚನೆ – ತ್ಯಾಗ ಬಲಿದಾನಗಳ ಸಂಕೇತ- ಎಂ.ಎಸ್.ನದಾಫ್…!

Published

on

ಶಹಾಪುರ : ದೇಶ 1947 ರಲ್ಲಿ ಒಂದು ಕಡೆ ಸ್ವಾತಂತ್ರ್ಯದ ಸಂಭ್ರಮದಲ್ಲಿದ್ದರೆ, ಹೈದರಾಬಾದ್ ಕರ್ನಾಟಕ ಭಾಗ ಮಾತ್ರ ನಿಜಾಮರ ಕಪಿಮುಷ್ಟಿಯಲ್ಲಿತ್ತು. ಹಿರಿಯರ ಹೋರಾಟದ ತ್ಯಾಗ ಬಲಿದಾನಗಳಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿತು ಎಂದು ಎಂ.ಎಸ್.ನದಾಫ್ ಹೇಳಿದರು. ತಾಲೂಕಿನ ಶಿರವಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಂಬೇಡ್ಕರ್ ಕಾಲೊನಿಯಲ್ಲಿ ಜರುಗಿದ ಕಲ್ಯಾಣ ಕರ್ನಾಟಕ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಹೈದರಾಬಾದ್ ಕರ್ನಾಟಕ ಭಾಗದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯ ಕುರಿತು ಇಂದಿನ ವಿದ್ಯಾರ್ಥಿಗಳಿಗೆ ತಿಳಿಸುವುದರ ಮುಖಾಂತರ ಅವರ ಆದರ್ಶ ತತ್ವಗಳು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷರಾದ ಅಯ್ಯಪ್ಪ ದಮ್ಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು,ಗ್ರಾಮದ ಮುಖಂಡರಾದ ಶಿವು ಆಂದೋಲ, ಬಲಭೀಮ ನಡುವಿನಕೆರೆ, ಸಿದ್ದಪ್ಪ ನಡುವಿನ ಕೆರೆ, ತಾಯಪ್ಪ ದಮ್ಮನ ಮಹಾಲಿಂಗ ಗಂವಾರ,ಸಿಂಗಪ್ಪ ನಡಿಗೆ ಹಾಗೂ ಶಾಲಾ ಶಿಕ್ಷಕರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ- ಬಸವರಾಜ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ

Click to comment

Trending

Exit mobile version