Uncategorized

ಡ್ರಗ್ಸ್ ಮಾಫೀಯಕ್ಕೂ ಕ್ಯಾಸಿನೋಗೂ ಸಂಬಂಧವಿಲ್ಲ: ಮಾಜಿ ಸಚಿವ ಚಲುವರಾಯಸ್ವಾಮಿ..!

Published

on

ನಾಗಮಂಗಲ: ರಾಜ್ಯ ಮಾತ್ರವಲ್ಲದೆ ಇಡೀ ದೇಶದ್ಯಾಂತ ಸುದ್ದಿ ಮಾಡುತ್ತಿರುವ ಡ್ರಗ್ಸ್ ಮಾಫೀಯಕ್ಕೂ ಕ್ಯಾಸಿನೋಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಮಂಡ್ಯ ಜಿಲ್ಲೆ, ನಾಗಮಂಗಲ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು. ಕ್ಯಾಸಿನೋಗಳಲ್ಲಿ ವೀಕೆಂಡ್ ಹಾಗೆಯೇ ಇವೆಂಟ್ಸ್ಗಳಲ್ಲಿ ಭಾಗವಹಿಸುವವರನ್ನು ಸೆಲೆಬ್ರೆಟಿಗಳ ಮೂಲಕ ಆಕರ್ಷಿಸುವುದು ಉದ್ಯಮ ನಡೆಸುವ ಒಂದು ಕಲೆ. ಕಾಲಹರಣಕ್ಕಾಗಿ ಕೆಲವರು ಹೋದರೆ ಮತ್ತೆ ಕೆಲವರು ತಮ್ಮ ನೋವುಗಳನ್ನು ಮರೆಯಲು ಹೋಗುತ್ತಾರೆ. ಕ್ಯಾಸಿನೋ ವಿಶ್ವದ ಕೆಲ ದೇಶಗಳಲ್ಲಿ ಚಾಲ್ತಿಯಲ್ಲಿದ್ದರೆ, ಮತ್ತೆ ಕೆಲ ದೇಶಗಳಲ್ಲಿ ಬ್ಯಾನ್ ಮಾಡಲಾಗಿದೆ. ಡ್ರಗ್ ಮಾಫಿಯ ತಡೆಯುವಲ್ಲಿ ಸರ್ಕಾರ ಕೈಗೊಳ್ಳುವ ಕಠಿಣ ಕ್ರಮಕ್ಕೆ ನಮ್ಮ ವಿರೋಧವಿಲ್ಲ. ಆದರೆ ಇದನ್ನೇ ಈ ರೀತಿ ಮುಂದುವರೆಸುತ್ತಾ, ಈ ನೆಲದ ಜನತೆ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಮರೆಮಾಚುವ ಪ್ರಯತ್ನವಾಗಬಾರದು. ಫಾಜಿಲ್ ಜತೆಗಿದ್ದ ಜಮೀರ್ ಭಾವಚಿತ್ರವನ್ನೇ ಬಿಂಬಿಸುತ್ತಿದ್ದ ಬಿಜೆಪಿ ನಾಯಕರು ರಾಹುಲ್ ಜತೆ ಆಶೋಕ್ ಭಾವಚಿತ್ರ ಕಂಡೊಡನೆ ಸುಮ್ಮನಾಗಿದ್ದೇಕೆ. ಶಾಸಕ ಜಮೀರ್ ಒಬ್ಬರನ್ನೇ ವೈಯಕ್ತಿಕ ತೇಜೋವಧೆ ಮಾಡುವ ಗುರಿ ಸರ್ಕಾರಕ್ಕೆ ಶೋಭೆಯಲ್ಲ ಎಂದು ರಾಜ್ಯ ಸರ್ಕಾರದ ನಡೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.ಈ ಹಿಂದೆ ಜೆಡಿಎಸ್ ಶಾಸಕನಾಗಿದ್ದಾಗ ಪಕ್ಷದ ಆಂತರಿಕ ವ್ಯತ್ಯಾಸಗಳನ್ನು ಸರಿಪಡಿಸಿಕೊಳ್ಳುವ ವಿಷಯವಾಗಿ ಶ್ರೀಲಂಕದ ರೆಸಾರ್ಟ್ಗೆ ಹೋಗಿದ್ದು ನಿಜ. ಆದರೆ ಕ್ಯಾಸಿನೋಗೆ ನಾನು ಹೋಗಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ರಾಜ್ಯದಲ್ಲಿ ಕ್ಯಾಸಿನೋ ತೆರೆಯುವುದರಿಂದ ಮುಗ್ದ ಯುವ ಜನತೆಯನ್ನು ನಾವೆ ದಾರಿ ತಪ್ಪಿಸಿದಂತಾಗುತ್ತದೆ. ಪ್ರಸ್ತುತ ರಿಕ್ರೆಯೇಷನ್ ಕ್ಲಬ್ಗಳಿಂದಲೇ ಅದೆಷ್ಟೋ ಕುಟುಂಬಗಳು ಬೀದಿ ಪಾಲಾಗುತ್ತಿವೆ. ಆದುದರಿಂದ ನಮ್ಮ ರಾಜ್ಯದಲ್ಲಿ ಕ್ಯಾಸಿನೋ ಅಗತ್ಯವಿಲ್ಲ ಎಂದು ಶಾಸಕ ಸುರೇಶ್ಗೌಡ ಹೇಳಿಕೆಗೆ ಟಾಂಗ್ ನೀಡಿದರು. ಶಾಸಕರನ್ನು ಹಿಡಿದಿಟ್ಟುಕೊಳ್ಳುವ ತಂತ್ರ:ಬಿಜೆಪಿ ಮತ್ತು ಕಾಂಗ್ರೆಸ್ನಂತಹ ರಾಷ್ಟ್ರೀಯ ಪಕ್ಷಗಳಿಗೆ ಹೈಕಮಾಂಡ್ ಇದೆ. ರಾಷ್ಟ್ರ ಮಟ್ಟದಲ್ಲಿ ಹೈಕಮಾಂಡ್ ಇಲ್ಲದ ಜೆಡಿಎಸ್ ಯಾರೊಂದಿಗೆ ಮಾತನಾಡಿದರೂ ಅದನ್ನು ಕೇಳುವವರಿಲ್ಲ ಎಂದು ಹೆಚ್ಡಿಕೆ ಬಿಎಸ್ವೈ ಭೇಟಿಯ ಬಗ್ಗೆ ವ್ಯಂಗ್ಯವಾಡಿದರು. ಸಿಎಂ ಸ್ಥಾನದಿಂದ ಬಿಎಸ್ವೈ ಬದಲಾವಣೆಯ ಬಗ್ಗೆ ಭೆಟಿ ಎಂಬುದು ಸತ್ಯಕ್ಕೆ ದೂರವಾದರೂ, ಜೆಡಿಎಸ್ ಪಕ್ಷದ ಅಸಮದಾನಗೊಂಡಿರುವ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ತಂತ್ರ ಎಂದು ಕೆಲ ಮಾದ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಆದರೂ ಹೆಚ್ಡಿಕೆ ಮತ್ತು ಬಿಎಸ್ವೈ ಭೇಟಿಯ ಸತ್ಯವನ್ನು ಭೇಟಿಯಾದವರಿಂದಲೇ ತಿಳಿಯಬೇಕಿದೆ ಎಂದರು.ಕೈಗಾರಿಕೆಗೆ ನನ್ನ ವಿರೋಧವಿಲ್ಲ, ಈ ಹಿಂದಿನ ಮೈತ್ರಿ ಸರ್ಕಾರ 400-500 ಎಕರೆ ಭೂಪ್ರದೇಶದಲ್ಲಿ ಕೈಗಾರಿಕೆ ಸ್ಥಾಪಿಸುವ ಉದ್ದೇಶಕ್ಕೆ ನನ್ನ ವಿರೋಧವಿಲ್ಲ. ಆದರೆ ಈ ಹಿಂದಿನ ಸರ್ಕಾರ ಆ ಸುತ್ತ-ಮುತ್ತಲಿನ ಗ್ರಾಮಗಳ ರೈತರ ಸಭೆ ನಡೆಸುವ ಮೂಲಕ ಮುಂದುವರೆದಿದ್ದರೆ ಇಂತಹ ಸಮಸ್ಯೆ ಉಂಟಾಗುತ್ತಿರಲಿಲ್ಲ. ಈಗೀನವರು ರೈತರ ಸಮಸ್ಯೆ ತಿಳಿಯದಂತೆ ಹಾಗೂ ಇಡೀ ನಾಗಮಂಗಲವನ್ನೇ ಕೈಗಾರಿಕಾ ಪ್ರದೇಶ ಮಾಡುತ್ತಿದ್ದಾರೋ ನನಗೆ ಗೊತ್ತಿಲ್ಲ. ನಾನೊಬ್ಬ ತಾಲೂಕಿನ ಸಾಮಾನ್ಯ ಪ್ರಜೆಯಾಗಿ ರೈತರ ಜತೆಗೂಡಿ ಈ ಸಂಬಂಧ ಸಚಿವರಿಗೆ ಮನವಿ ಸಲ್ಲಿಸಿದ್ದೇನೆ ಎಂದು ಸ್ಪಷ್ಟೀಕರಿಸಿದರು.

ವರದಿ- ಎಸ್.ವೆಂಕಟೇಶ್.ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.

Click to comment

Trending

Exit mobile version