Uncategorized

ಸ್ಥಳೀಯ ಕಲಾವಿದರನ್ನು ಕಡೆಗಣನೆ – ಡಾ.ಬಸವರಾಜ ಕಲೆಗಾರ ಆರೋಪ.

Published

on

ಶಹಾಪುರ : ಕರ್ನಾಟಕ ಲಲಿತಾ ಕಲಾ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿರುವ ಆನ್ಲೈನ್ ಕಲಾ ಶಿಬಿರದಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಸ್ಥಳೀಯ ಕಲಾವಿದರನ್ನು ಕಡೆಗಣಿಸಲಾಗಿದೆ ಎಂದು ಯುವ ಕಲಾವಿದ ಡಾ.ಬಸವರಾಜ ಕಲೆಗಾರ ಆರೋಪಿಸಿದ್ದಾರೆ.ಕೊರೋನಾ ವೈರಸ್ ಮಾಹಾಮಾರಿಯ ಲಾಕಡೌನ್ ಸಂದರ್ಭದಲ್ಲಿ ನಿರುದ್ಯೋಗಿ ಕಲಾವಿದರ ಬದುಕು ಅತಂತ್ರ ಸ್ಥಿತಿಯಲ್ಲಿದೆ ಇಂಥ ಸಂದರ್ಭದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಯವರು ನಮ್ಮಂಥವರನ್ನು ಆಯ್ಕೆ ಮಾಡುವುದನ್ನು ಬಿಟ್ಟು ಬೇರೆ ಜಿಲ್ಲೆಯವರನ್ನು ಆಯ್ಕೆ ಮಾಡಿದ್ದಲ್ಲದೆ ಸರ್ಕಾರಿ ನೌಕರರಿಗೆ ಮಣೆ ಹಾಕಲಾಗಿದೆ, ಅಲ್ಲದೆ ನಾನೊಬ್ಬ ದಲಿತ ಕಲಾವಿದನೆಂಬ ಕಾರಣಕ್ಕಾಗಿ ನನ್ನನ್ನು ಮೂಲೆಗುಂಪು ಮಾಡುವ ಸಂಚು ಅಕಾಡೆಮಿ ಯವರು ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಸರ್ಕಾರದ ಮಾರ್ಗಸೂಚಿ ಪ್ರಕಾರ ಯಾವುದೇ ಕಲಾ ಶಿಬಿರಗಳಿಗೆ ಕಲಾವಿದರ ಆಯ್ಕೆ ಮಾಡಬೇಕಾದರೆ ಸ್ಥಳೀಯ ಕಲಾವಿದರಿಗೆ ಮೊದಲ ಆದ್ಯತೆ ನೀಡಬೇಕು.ಆದರೆ ಇಲ್ಲಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಸೇರಿಕೊಂಡು ನಿಯಮಗಳನ್ನು ಗಾಳಿಗೆ ತೂರಿ ಉಲ್ಲಂಘನೆ ಮಾಡಿ ತಮಗೆ ಬೇಕಾದವರಿಗೆ ಬೇಕಾಬಿಟ್ಟಿಯಾಗಿ ಆಯ್ಕೆ ಮಾಡಿರುವುದು ನೋವಿನ ಸಂಗತಿ ಎಂದು ತಮ್ಮ ಅಳಲನ್ನು ತೋಡಿಕೊಂಡರು.ಆದರೆ ಬೇರೆ ಜಿಲ್ಲೆಯ ಕಲಾವಿದರನ್ನು ಆಯ್ಕೆ ಮಾಡಿರುವುದು ಅದೆಷ್ಟು ಸರಿ ಎಂದು ಅಧ್ಯಕ್ಷರು ಹಾಗೂ ಸಂಬಂಧಪಟ್ಟ ಸದಸ್ಯರು ಮನನ ಮಾಡಿಕೊಳ್ಳಬೇಕಾಗಿದೆ. ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಗೆ ಹಾಗೂ ಕಾರ್ಯದರ್ಶಿಗಳಿಗೆ ದೂರ ನೀಡಲಾಗಿದೆ.ಈ ಸಮಸ್ಯೆ ಬಗೆಹರಿಸದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಈ ಮೂಲಕ ಎಚ್ಚರಿಕೆ ನೀಡಲಾಗಿದೆ.

ವರದಿ- ಬಸವರಾಜ್ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ..

Click to comment

Trending

Exit mobile version