ಹುಬ್ಬಳ್ಳಿ-ಧಾರವಾಡ

ಲಿಂಗಾಯತ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ದೋಷ- ಬಸವದಳದಿಂದ ತಹಶಿಲ್ದಾರರ ಕಚೇರಿ ಎದುರು ಪ್ರತಿಭಟನೆ.!

Published

on

ಹುಬ್ಬಳ್ಳಿ: ಲಿಂಗಾಯತ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ದೋಷ ಕಂಡುಬಂದಿದ್ದು, ಕೂಡಲೇ ಸರಿಪಡಿಸಬೇಕೆಂದು ಆಗ್ರಹಿಸಿ ರಾಷ್ಟ್ರೀಯ ಬಸವದಳ ಹಾಗೂ ಲಿಂಗಾಯತ ಧರ್ಮ ಮಹಾಸಭಾ ಇಲ್ಲಿನ ತಹಶಿಲ್ದಾರರ ಕಚೇರಿ ಎದುರು ಪ್ರತಿಭಟನೆ ನಡೆಸಿತು.ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನ ಪೀಠದ ಚನ್ನಬಸವೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಲಿಂಗಾಯತ ಸಮೂದಾಯಕ್ಕೆ ಜಾತಿ ಪ್ರಮಾಣ ಪತ್ರ ಕೊಡುವಲ್ಲಿ ಲೋಪದೋಷ ಉಂಟಾಗುತ್ತಿದೆ. ಸಮಾಜ ಬಂಧುಗಳ ಮೂಲ ಜಾತಿ ಲಿಂಗಾಯತ, ಆದರೆ ಸರ್ಕಾರದಿಂದ ವೀರಶೈವ ಲಿಂಗಾಯತ ಜಾತಿ ಪ್ರಮಾಣಪತ್ರ ನೀಡಲಾಗುತ್ತಿದೆ. ಇದು ಸಮಾಜದ ಜನರಿಗೆ ಮುಜುಗರ ಉಂಟು ಮಾಡುತ್ತಿದೆ. ಇನ್ನೂ ಸಮಾಜದ ಮಕ್ಕಳ ಶಾಲಾ ದಾಖಲಾತಿಯಲ್ಲಿ ಲಿಂಗಾಯತ ಅಂತ ಬರೆಸಿದರು ಸಹಿತ ಎಸ್.ಎ.ಟಿ.ಎಸ್ ತಂತ್ರಾಂಶದಲ್ಲಿ ಲಿಂಗಾಯತ ಬದಲಿಗೆ ವೀರಶೈವ ಲಿಂಗಾಯತ ಅಂತಾ ಬರುತ್ತಿದ್ದು, ಇದು ಸಮಾಜದ ಜನರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಕೂಡಲೇ ಸರ್ಕಾರ ಪ್ರಮಾಣದ ಪತ್ರದ ಲೋಪದೋಷಗಳನ್ನು ಸರಿಪಡಿಸಬೇಕೆಂದು ತಹಶಿಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಸವದಳದ ಅಧ್ಯಕ್ಷ ಬಿ.ವಿ.ಅನಿ, ಎಫ್.ಕೆ.ಬಣಕಾರ, ಸುಶೀಲಾ ಬಣಕಾರ, ಶಿವಪ್ಪ ಬಿ, ಬಿ.ಬಿ.ಲಕ್ಷ್ಮೇಶ್ವರ, ಶಾರದಾ ಲಕ್ಷ್ಮೇಶ್ವರ ಸೇರಿದಂತೆ ಮುಂತಾದವರು ಇದ್ದರು.

ರಾಜು-ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version