ಮೈಸೂರು

ಸೆಪ್ಟೆಂಬರ್ 21ಕ್ಕೆ ಶಾಲೆ ದಾಖಲಾತಿ ಆರಂಭ ; ತರಗತಿಗಳು ನಡೆಯಲ್ಲ : ಸಚಿವ ಸುರೇಶ್ ..!

Published

on

ಮೈಸೂರು: ಸೆಪ್ಟೆಂಬರ್ 1 ರಿಂದ ಶಾಲೆ ಪ್ರಾರಂಭವಾಗುವ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮೈಸೂರಿನಲ್ಲಿ ಪ್ರತ್ರಿಕ್ರಿಯೆ ನೀಡಿದ್ದಾರೆ. ಸೆಪ್ಟೆಂಬರ್ 1 ರಿಂದ ಶಾಲೆಗಳನ್ನು ತೆರೆಯಲಾಗುತ್ತದೆ. ಆದರೆ ತರಗತಿಗಳನ್ನು ಪ್ರಾರಂಭಿಸುವುದಿಲ್ಲವೆಂದು ಹೇಳಿದ್ದಾರೆ.ಸೆ.21 ರಿಂದ ಶಾಲೆಗೆ ಮಕ್ಕಳನ್ನು ದಾಖಲು ಮಾಡಲು ಅವಕಾಶ ಕಲ್ಪಿಸಲಾಗುವುದು, ಹೀಗಾಗಿ ಮುಂದಿನ ಸೋಮವಾರದಿಂದ ದಾಖಲಾತಿ ಪ್ರಾರಂಭವಾಗುವುದು ಈ ತಿಂಗಳ ಕೊನೆಯೊಳಗೆ 1 ರಿಂದ 10 ನೇ ತರಗತಿಗಳ ದಾಖಲಾತಿ ಪ್ರಕ್ರಿಯೆ ಮುಗಿಯಬೇಕು . ಖಾಸಗಿ ಶಾಲೆಗಳು ಕೇವಲ ಒಂದು ಅವಧಿಯ ಶುಲ್ಕವನ್ನು ಮಾತ್ರ ಪಡೆಯಬೇಕು ಎಂದಿದ್ದಾರೆ. ಏನಾದ್ರೂ ಸಮಸ್ಯೆಗಳು ಕಂಡು ಬಂದರೆ ಪೋಷಕರು ಬಿಇಒ ಅವರನ್ನು ಸಂಪರ್ಕಿಸಬೇಕು, ಸಮಸ್ಯೆಗಳನ್ನು ಸ್ಥಳೀಯವಾಗಿ ಬಿಇಒ ಹಾಗೂ ಡಿಡಿಪಿಐಗಳು ಬಗೆ ಹರಿಸುತ್ತಾರೆಂದು ಸಚಿವ ಸುರೇಶ್ ಕುಮಾರ್ ಮೈಸೂರಿನಲ್ಲಿ ಹೇಳಿದ್ದಾರೆ.

ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version