Uncategorized

ರೈತರೊಂದಿಗೆ ಬೇಸಾಯ ಮಾಡಿದ ನಾಗಮಂಗಲ ತಹಸೀಲ್ದಾರ್ ಕುಂಞ ಅಹಮ್ಮದ್..!

Published

on

ನಾಗಮಂಗಲ: ಈ ದೇಶದ ಬೆನ್ನೆಲಬು ರೈತರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಫಸಲ್ ಭೀಮ್, ಕೀಸಾನ್, ಬೆಳೆವಿಮೆ ಹಾಗೂ ರೈತಮಿತ್ರ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿವೆ. ಅದರಲ್ಲಿ ರೈತನೇ ಸ್ವಯಂ ಬೆಳೆ ಸಮೀಕ್ಷೆ ಮಾಡುವುದು ಒಂದು ಕಾರ್ಯಕ್ರಮ. ಅದಕ್ಕಾಗಿ ಪ್ರತ್ಯೇಕ ಆ್ಯಪ್ ವೊಂದನ್ನು ಬಿಡುಗಡೆ ಮಾಡಿದೆ. ರೈತರೇ ತಮ್ಮ ಮೊಬೈಲ್ ಮೂಲಕ ಬೆಳೆ ದೃಢೀಕರಿಸುವುದಲ್ಲದೆ ಖಾಸಗಿ ಸಮೀಕ್ಷೆರಾರನ್ನು ನೇಮಿಸಿದೆ. ಆದಾಗ್ಯೂ ಕಂದಾಯ ಇಲಾಖೆ ತೀವ್ರ ನಿಗಾವಹಿದೆ. ಈ ನಿಟ್ಟಿನಲ್ಲಿ ಸ್ವತಃ ತಾವೇ ರೈತರ ಜಮೀನಿನಲ್ಲಿ ಬೆಳೆ ಸಮೀಕ್ಷೆಯ ಪರಿಶೀಲನೆ ನಡೆಸಿದ್ದಲ್ಲದೆ, ತಮ್ಮ ತಮ್ಮ ಜಮೀನಿನಲ್ಲಿ ಮಾಡಲಾಗುತ್ತಿದ್ದ ರಾಗಿ ನಾಟಿ ಹಾಗೂ ಕುಂಟೆ ಹೊಡೆಯುವ ಕೃಷಿ ಕಾಯಕದಲ್ಲಿ, ಸಕ್ಕರೆ ನಾಡು ಮಂಡ್ಯ ಜಿಲ್ಲೆ, ನಾಗಮಂಗಲ ತಾಲೂಕು ದಂಡಾಧಿಕಾರಿಗಳಾದ ತಹಸೀಲ್ದಾರ್ ಕುಂಞ ಅಹಮ್ಮದ್ ಸ್ವತಃ ರೈತ ಮಹಿಳೆಯರೊಂದಿಗೆ ನಾಟಿ ಮಾಡಿದ್ದಲ್ಲದೆ, ಮೇಟಿ ಹಿಡಿದು ಕುಂಟೆ ಹೊಡೆದ ಕೃಷಿ ಕಾಯಕ ವಿಶೇಷವಾಗಿತ್ತು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮಾದರಿಯಾಗಿತ್ತು.ಈ ಸಂದರ್ಭ ಮಾತನಾಡಿದ ತಹಸೀಲ್ದಾರ್ ಕುಂಞ ಅಹಮ್ಮದ್, ರೈತರ ಅನುಕೂಲಕ್ಕಾಗಿ ಪಹಣಿಯಲ್ಲಿನ ಬೆಳೆ ಕಾಲಂನಲ್ಲಿ ಯಾವುದೇ ಸಮಸ್ಯೆಯಾಗದಂತೆ ಸರ್ಕಾರ ಅನುಷ್ಠಾನಗೊಳಿಸಿರುವ ಬೆಳೆ ಸಮೀಕ್ಷೆ ಆ್ಯಪ್ ನ ಸಂಪೂರ್ಣ ಸದುಪಯೋಗಕ್ಕಾಗಿ ರೈತರು ಸ್ವತಃ ಸಮೀಕ್ಷೆ ಮಾಡುವ, ಸರ್ಕಾರ ನೇಮಿಸಿರುವ ಖಾಸಗಿ ವ್ಯಕ್ತಿಗಳು ಹಾಗೂ ವಿಎ & ಆರ್ ಐ ಗಳು ನಡೆಸುತಿರುವ ಬೆಳೆ ಸಮೀಕ್ಷೆಯನ್ನು ತಾಲೂಕಿನ 5 ಹೋಬಳಿಗಳಲ್ಲೂ ಪರಿಶೀಲನೆ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ರೈತರಿಗೆ ಉತ್ತೇಜನ ನೀಡುವ ಉದ್ದೇಶದಿಂದ ರೈತ ಮಹಿಳೆಯರೊಂದಿಗೆ ಗದ್ದೆಗಿಳಿದು ನಾಟಿ ಮಾಡಿದ್ದೇನೆ. ರೈತರ ಜೀವನಾಡಿ ಹಸುಗಳೊಂದಿಗೆ ಮೇಟಿ ಹಿಡಿದು ಕುಂಟೆ ಬೇಸಾಯ ಮಾಡಿದ್ದೇನೆ. ಸ್ವತಃ ರೈತ ಕುಟುಂಬದ ಹಿನ್ನಲೆಯುಳ್ಳ ನನಗೆ ಇದು ಸಾಮಾನ್ಯವಾದರೂ, ರೈತ ಈ ದೇಶದ ಅನ್ನಧಾತ. ರೈತರ ಸ್ವಾವಲಂಬಿ ಬದುಕಿನ ಸದೃಢತೆಗೆ ಸರ್ಕಾರ ಮತ್ತು ರೈತ ಒಂದು ನಾಣ್ಯದ ಎರಡು ಮುಖಗಳಾಗಿ ಕರ್ತವ್ಯ ನಿರ್ವಹಿಸಬೇಕಿದೆ ಎಂದರು.ನಾಗಮಂಗಲ ಪಟ್ಟಣದ ಮೇಗಲಕೇರಿ ನಾಗರಾಜು ಎಂಬ ರೈತನ ಜಮೀನಿನಲ್ಲಿ ನಾಟಿ ಮಾಡಲಾಯಿತು. ರುದ್ರನ ಬೀದಿ ಮಾಸ್ತಯ್ಯ ಎಂಬುವರ ಜಮೀನಿನಲ್ಲಿ ಕುಂಟೆ ಹೊಡೆಯಲಾಯಿತು. ಈ ಸಂದರ್ಭ ಹಿರಿಯ ರೈತ ಮಾಸ್ತಯ್ಯರವರಿಗೆ ಮಾಲಾರ್ಪಣೆ ಮಾಡುವ ಮೂಲಕ ತಹಸೀಲ್ದಾರ್ ಗೌರವಿಸಿದರು. ರಾಜಸ್ವ ನಿರೀಕ್ಷಕ ಸತ್ಯನಾರಯಣ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ಕುಮಾರ್ ಸಾಥ್ ನೀಡಿದರು.

ವರದಿ-ಎಸ್.ವೆಂಕಟೇಶ್.ಎಕ್ಸ್ ಪ್ರೆಸ್ ಟಿವಿನಾಗಮಂಗಲ.

Click to comment

Trending

Exit mobile version